ಯುಎಸ್ಎಐಡಿ ಯೋಜನೆಯ ಶುದ್ಧೀಕರಣ ಪೂರ್ಣ: ಅಮೆರಿಕ

PC | wikipedia
ವಾಷಿಂಗ್ಟನ್: ವಿಶ್ವಸಂಸ್ಥೆಯ ನೆರವು ಯೋಜನೆ(ಯುಎಸ್ಎಐಡಿ)ಯ ಶುದ್ಧೀಕರಣ ಪ್ರಕ್ರಿಯೆಯನ್ನು ಟ್ರಂಪ್ ಆಡಳಿತ ಪೂರ್ಣಗೊಳಿಸಿದ್ದು ವಿದೇಶಾಂಗ ಇಲಾಖೆಯಡಿ ಉಳಿದುಕೊಂಡಿರುವ 18% ನೆರವು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ಥಳಾಂತರಿಸಲಾಗುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸೋಮವಾರ ಹೇಳಿದ್ದಾರೆ.
ಅಧ್ಯಕ್ಷ ಟ್ರಂಪ್ ಹೊಸದಾಗಿ ರಚಿಸಿದ ಸರ್ಕಾರಿ ಕಾರ್ಯದಕ್ಷತೆಯ ಇಲಾಖೆ(ಡಿಒಜಿಇ)ಯ ಮುಖ್ಯಸ್ಥ ಎಲಾನ್ ಮಸ್ಕ್ ಹಾಗೂ ಅವರ ತಂಡ ಈ ಐತಿಹಾಸಿಕ ಸುಧಾರಣೆಗಾಗಿ ಕಠಿಣ ಪರಿಶ್ರಮ ಪಟ್ಟಿದೆ ಎಂದು ರುಬಿಯೊ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ವಿದೇಶದಲ್ಲಿ ಯುಎಸ್ಎಐಡಿ ಕಾರ್ಯಕ್ರಮದಡಿ ಕೆಲಸ ಮಾಡುತ್ತಿರುವ ಅಮೆರಿಕನ್ನರು ಸರ್ಕಾರಿ ಉದ್ಯೋಗದಲ್ಲಿ ಮುಂದುವರಿಯಲು ಬಯಸುವುದಾದರೆ ಎಪ್ರಿಲ್ 6ರ ಒಳಗೆ ಸ್ವದೇಶಕ್ಕೆ ವಾಪಸಾಗಬೇಕು ಎಂದು ಟ್ರಂಪ್ ಆಡಳಿತ ಸೋಮವಾರ ಸೂಚನೆ ನೀಡಿದೆ.
ಜನವರಿ 20ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ನೆರವು ನಿಧಿಯ ಸ್ಥಗಿತ, ವಿದೇಶದಲ್ಲಿ ಸಾವಿರಾರು ಡಾಲರ್ ಮೊತ್ತದ ನೆರವು ಮತ್ತು ಅಭಿವೃದ್ಧಿ ಕಾರ್ಯಗಳ ಪರಿಶೀಲನೆಯನ್ನು ನಿರ್ದೇಶಿಸುವ ಕಾರ್ಯನಿರ್ವಾಹಕ ಆದೇಶವನ್ನು ಹೊರಡಿಸಿದ್ದರು.







