Venezuelaದಲ್ಲಿ ಉದ್ವಿಗ್ನತೆ; ವಿಶ್ವಸಂಸ್ಥೆ ಕಳವಳ

Photo Credit : news.un.org
ವಿಶ್ವಸಂಸ್ಥೆ, ಜ.5: ವೆನೆಝುವೆಲಾದಲ್ಲಿನ ಉದ್ವಿಗ್ನತೆಯ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದು ಈ ಪರಿಸ್ಥಿತಿಯನ್ನು `ಅಪಾಯಕಾರಿ ಪೂರ್ವ ನಿರ್ದಶನ' ಎಂದು ಬಣ್ಣಿಸಿದ್ದಾರೆ.
ಮಾನವ ಹಕ್ಕುಗಳು ಮತ್ತು ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಅಂತರ್ಗತ ಸಂವಾದದಲ್ಲಿ ತೊಡಗಿಸಿಕೊಳ್ಳಲು ಎಲ್ಲಾ ಪಕ್ಷಗಳಿಗೂ ಗುಟೆರಸ್ ಕರೆ ನೀಡಿದ್ದಾರೆ.
ವೆನೆಝುವೆಲಾದ ನಾಗರಿಕರ ರಕ್ಷಣೆ ಪ್ರಮುಖ ಆದ್ಯತೆಯಾಗಿದೆ ಮತ್ತು ಇದು ಯಾವುದೇ ಮುಂದಿನ ಕ್ರಮಗಳಿಗೆ ಮಾರ್ಗದರ್ಶಿಯಾಗಿರಬೇಕು ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್ ವೋಕರ್ ಟರ್ಕ್ ಒತ್ತಿಹೇಳಿದ್ದಾರೆ.
`ವಿಶ್ವಸಂಸ್ಥೆಯ ಚಾರ್ಟರ್ ಎಂಬುದು ಒಂದು ಆಯ್ಕೆಯಲ್ಲ. ಯಾವುದೇ ರಾಷ್ಟ್ರದ ಪ್ರಾದೇಶಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬೆದರಿಕೆ ಅಥವಾ ಬಲದ ಬಳಕೆಯಿಂದ ಎಲ್ಲಾ ಸದಸ್ಯ ರಾಷ್ಟ್ರಗಳೂ ದೂರವಿರಬೇಕು ಎಂದು ಆರ್ಟಿಕಲ್ 2ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ' ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷೆ ಅನ್ನಾಲಿನಾ ಬೇರ್ಬಾಕ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.





