ಪಾಕಿಸ್ತಾನದ ಹಿರಿಯ ನಟ ತಲತ್ ಹುಸೇನ್ ನಿಧನ
Picture Courtesy: Facebook
ಇಸ್ಲಾಮಾಬಾದ್ : ಪಾಕಿಸ್ತಾನದ ಅತ್ಯಂತ ಪ್ರತಿಭಾನ್ವಿತ ಮತ್ತು ಜನಪ್ರಿಯ ನಟರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ತಲತ್ ಹುಸೇನ್(83 ವರ್ಷ) ದೀರ್ಘಕಾಲದ ಅಸ್ವಸ್ಥತೆಯಿಂದ ರವಿವಾರ ಕರಾಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದಿಲ್ಲಿಯಲ್ಲಿ ಜನಿಸಿದ್ದ ಹುಸೇನ್ ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ನಟನಾ ಶೈಲಿಗೆ ಹೆಸರಾಗಿದ್ದರು. ಬಾಲಿವುಡ್ನ `ಸೌತೇನ್ ಕಿ ಬೇಟಿ' ಸಿನೆಮಾದಲ್ಲೂ ನಟಿಸಿದ್ದ ಹುಸೇನ್ `ಚಿರಾಗ್ ಜಲ್ತಾರಹಾ, ಗುಮ್ನಾಮ್, ಆ್ಯಕ್ಟರ್ ಇನ್ ಲಾ' ಮುಂತಾದ ಜನಪ್ರಿಯ ಸಿನೆಮಗಳಲ್ಲಿ ನಟಿಸಿದ್ದರು. ರೇಡಿಯೊ, ಟಿವಿ, ರಂಗಭೂಮಿಯಲ್ಲೂ ಗುರುತಿಸಿಕೊಂಡಿದ್ದು ಅವರು `ಬಾಂದಿಷ್, ಕರವಾನ್, ಪರ್ಚೈಯಾನ್' ಇತ್ಯಾದಿ ಧಾರಾವಾಹಿಯಲ್ಲಿ ನಟಿಸಿದ್ದರು. ಪಾಕಿಸ್ತಾನದ ಅತ್ಯುನ್ನತ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ `ದಿ ಪ್ರೈಡ್ ಆಫ್ ಪರ್ಫಾಮೆನ್ಸ್' ಸಹಿತ ಹಲವು ಪ್ರಶಸ್ತಿ ಪಡೆದಿದ್ದರು. ಅಧ್ಯಕ್ಷ ಆಸಿಫ್ ಆಲಿ, ಪ್ರಧಾನಿ ಶಹಬಾಝ್ ಶರೀಫ್ ಮತ್ತಿತರ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
Next Story