ವಿಯೆಟ್ನಾಂ: ಪ್ರವಾಸಿಗರ ದೋಣಿ ದುರಂತದಲ್ಲಿ ಮೃತರ ಸಂಖ್ಯೆ 38ಕ್ಕೆ ಏರಿಕೆ

Photo: (QDND via AP)
ಹನೋಯಿ, ಜು.20: `ವಿಫಾ' ಚಂಡಮಾರುತದ ಮುನ್ನೆಚ್ಚರಿಕೆಯ ನಡುವೆಯೇ ವಿಯೆಟ್ನಾಂನ ಹಲೋಂಗ್ ಕೊಲ್ಲಿಯಲ್ಲಿ ಶನಿವಾರ ಸಂಭವಿಸಿದ ಪ್ರವಾಸಿಗರ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಬದುಕುಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಸರಕಾರದ ಮೂಲಗಳು ರವಿವಾರ ಹೇಳಿವೆ.
ವಿಫಾ ಚಂಡಮಾರುತ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯನ್ನು ಪ್ರವೇಶಿಸಿದ ಬೆನ್ನಲ್ಲೇ ಶನಿವಾರ ಸಂಜೆ ಹಲೋಂಗ್ ಕೊಲ್ಲಿಯಲ್ಲಿ 48 ಪ್ರವಾಸಿಗರು ಹಾಗೂ ಐವರು ಸಿಬ್ಬಂದಿಗಳಿದ್ದ ಪ್ರವಾಸಿಗರ ದೋಣಿ ಮುಳುಗಿದೆ. ಮಕ್ಕಳು ಸೇರಿದಂತೆ 38 ಮಂದಿಯ ಮೃತದೇಹ ಪತ್ತೆಯಾಗಿದ್ದು 10 ಮಂದಿಯನ್ನು ರಕ್ಷಿಸಲಾಗಿದೆ.
ಉಳಿದ 5 ಮಂದಿಯ ಪತ್ತೆಕಾರ್ಯಾಚರಣೆಗೆ ಗಡಿಭದ್ರತಾ ಸಿಬ್ಬಂದಿ, ನೌಕಾದಳದ ಸಿಬ್ಬಂದಿ, ಪೊಲೀಸ್ ಸೇರಿದಂತೆ ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ `ದಿ ವಿಯೆಟ್ನಾಮ್ ನ್ಯೂಸ್ ಏಜೆನ್ಸಿ' ರವಿವಾರ ವರದಿ ಮಾಡಿದೆ.
Next Story





