“ಗಾಝಾಗೆ ಭೇಟಿ ನೀಡಿ, ತಡಮಾಡಬೇಡಿ”; ಪೋಪ್ ರಿಗೆ ಮನವಿ ಮಾಡಿದ ಪಾಪ್ ತಾರೆ ಮಡೋನಾ

ಗಾಯಕಿ ಮಡೋನಾ(x \ @Madonna) , ಪೋಪ್ ಲಿಯೋ (x \ @Pontifex)
ವಾಶಿಂಗ್ಟನ್: ಗಾಝಾ ಪಟ್ಟಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳನ್ನು ತುರ್ತು ರಕ್ಷಿಸುವಂತೆ ಪೋಪ್ ಲಿಯೋ ಅವರಿಗೆ ಖ್ಯಾತ ಪಾಪ್ ತಾರೆ, ಗಾಯಕಿ ಮಡೋನಾ ಮನವಿ ಮಾಡಿದ್ದಾರೆ. ಈ ಹಿಂದೆ ಇಸ್ರೇಲ್ ಪರವಾಗಿ ಮಾತನಾಡಿ ಸುದ್ದಿಯಾಗಿದ್ದ ಮಡೋನಾ ಇದೀಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ಗಾಝಾದ ಮಕ್ಕಳಿಗಾಗಿ ಅವರ ಹೃದಯ ಮಿಡಿದಿದೆ. ತಡವಾಗುವ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಮಡೋನಾ, “ಓರ್ವ ತಾಯಿಯಾಗಿ, ಅವರ ನೋವನ್ನು ನೋಡಿ ನನಗೆ ಸಹಿಸಲಾಗುವುದಿಲ್ಲ. ಜಗತ್ತಿನ ಎಲ್ಲಾ ಮಕ್ಕಳು ಎಲ್ಲರಿಗೂ ಸೇರಿದವರು. ಪೋಪ್ ಲಿಯೋ ಅವರೇ ದಯವಿಟ್ಟು ಗಾಝಾಗೆ ಹೋಗಿ, ನಿಮ್ಮ ಬೆಳಕನ್ನು ಅವರಿಗೆ ತಲುಪಿಸಿ. ನಿರಪರಾಧಿ ಮಕ್ಕಳನ್ನು ರಕ್ಷಿಸಲು ಮಾನವೀಯ ಸಹಾಯದ ದಾರಿಗಳನ್ನು ಸಂಪೂರ್ಣವಾಗಿ ತೆರೆಯಬೇಕು. ನಿಮಗೆ ಪ್ರವೇಶ ನಿರಾಕರಿಸಲು ಯಾರಿಗೂ ಸಾಧ್ಯವಿಲ್ಲ, ಇನ್ನು ಸಮಯವಿಲ್ಲ”, ಎಂದು ಹೇಳಿದ್ದಾರೆ.
Politics Cannot affect Change.
— Madonna (@Madonna) August 11, 2025
Only consciousness Can. Therefore I am Reaching out to a Man of God.
Today is my Son Rocco’s birthday.
I feel the best gift I can give to him as a Mother - is to ask everyone to do what they can to help save the innocent children caught in the… pic.twitter.com/y2B3BsXAMt
“ರಾಜಕೀಯವು ಬದಲಾವಣೆಯನ್ನು ತರುವುದಿಲ್ಲ. ಪ್ರಜ್ಞೆ ಮಾತ್ರ ತರಬಲ್ಲದು. ಇಂದು ನನ್ನ ಮಗ ರೊಕ್ಕೋ ನ ಜನ್ಮದಿನ, ತಾಯಿಯಾಗಿ ಅವನಿಗೆ ನೀಡಬಹುದಾದ ಉತ್ತಮ ಉಡುಗೊರೆ ಎಂದರೆ, ಗಾಝಾದಲ್ಲಿ ಗುಂಡಿನ ಚಕಮಕಿ ಮಧ್ಯೆ ಸಿಲುಕಿರುವ ನಿರಪರಾಧಿ ಮಕ್ಕಳನ್ನು ರಕ್ಷಿಸಲು ಪ್ರತಿಯೊಬ್ಬರೂ ಏನಾದರೂ ಮಾಡುವಂತೆ ವಿನಂತಿಸುವುದು”, ಎಂದು ಹೇಳಿದರು.
"ನಾನು ಯಾರನ್ನೂ ಬೆಟ್ಟು ಮಾಡುತ್ತಿಲ್ಲ, ದೂಷಿಸುತ್ತಿಲ್ಲ ಅಥವಾ ಪಕ್ಷಪಾತೀಯವಾಗಿಲ್ಲ. ಒತ್ತೆಯಾಳುಗಳ ತಾಯಂದಿರು ಸೇರಿದಂತೆ ಎಲ್ಲರೂ ನೋವಿನಿಂದಿದ್ದಾರೆ. ಅವರನ್ನು ಬಿಡುಗಡೆ ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಮಕ್ಕಳು ಹಸಿವಿನಿಂದ ಸಾಯದಂತೆ ತಡೆಯುವುದು ನನ್ನ ಉದ್ದೇಶ. ಇದಕ್ಕಾಗಿ ನಾನು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.







