ವ್ಯಾಗ್ನರ್ ಗುಂಪಿನ ಮುಖಂಡ ಪ್ರಿಗೊಝಿನ್ ವಿಮಾನ ಅಪಘಾತ ಉದ್ದೇಶಪೂರ್ವಕ ಆಗಿರಬಹುದು: ಪೆಸ್ಕೋವ್

ಮಾಸ್ಕೋ: ವ್ಯಾಗ್ನರ್ ಗುಂಪಿನ ಮುಖಂಡ ಯೆವ್ಗಿನಿ ಪ್ರಿಗೊಝಿನ್ ಸಾವನ್ನಪ್ಪಿದ್ದ ವಿಮಾನ ದುರಂತವು ಉದ್ದೇಶಪೂರ್ವಕ ಆಗಿರುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಬುಧವಾರ ಹೇಳಿದ್ದಾರೆ.
ಆಗಸ್ಟ್ 23ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಪ್ರಿಗೊಝಿನ್ ಅವರ ಅಂತ್ಯಸಂಸ್ಕಾರ ಸೈಂಟ್ ಪೀಟರ್ಸ್ಬರ್ಗ್ನ ಸ್ಮಶಾನದಲ್ಲಿ ಮಂಗಳವಾರ ಖಾಸಗಿಯಾಗಿ ನಡೆಸಲಾಗಿದೆ. ‘ ಉದ್ದೇಶಪೂರ್ವಕ ಕೃತ್ಯದ ಸಾಧ್ಯತೆಯೂ ಸೇರಿದಂತೆ ವಿಭಿನ್ನ ಆಯಾಮಗಳನ್ನು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ರಶ್ಯದ ತನಿಖೆಯ ಫಲಿತಾಂಶಕ್ಕಾಗಿ ಕಾಯೋಣ’ ಎಂದು ಪೆಸ್ಕೋವ್ ಹೇಳಿದ್ದಾರೆ.
ವಿಮಾನ ದುರಂತ ಪ್ರಕರಣದ ತನಿಖೆಯನ್ನು ರಶ್ಯ ನಡೆಸಲಿದೆ ಮತ್ತು ಅಂತರಾಷ್ಟ್ರೀಯ ತನಿಖೆಯ ಪ್ರಶ್ನೆಯೇ ಬರುವುದಿಲ್ಲ ಎಂದವರು ಇದೇ ಸಂದರ್ಭ ಸ್ಪಷ್ಟಪಡಿಸಿದ್ದಾರೆ.
Next Story