ಯುದ್ಧವು ಗಲ್ಫ್ ಪ್ರದೇಶವನ್ನು ಮೀರಿ ಹರಡಬಹುದು: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ |Photo Credit : AP , PTI
ಟೆಹರಾನ್, ಮೇ 20: ಅಮೆರಿಕವು ತನ್ನ ದಾಳಿಗಳನ್ನು ಪುನರಾರಂಭಿಸಿದರೆ ಯುದ್ಧವು ಗಲ್ಫ್ ಪ್ರದೇಶವನ್ನು ಮೀರಿ ಹರಡಬಹುದು ಎಂದು ಇರಾನ್ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬುಧವಾರ ಎಚ್ಚರಿಕೆ ನೀಡಿದೆ.
ಮತ್ತೊಂದು ಯುದ್ಧ ನಡೆಯುವುದಿಲ್ಲ ಎಂದು ನಾವು ಆಶಿಸುತ್ತೇವೆ. ಆದರೆ ಇರಾನ್ ಒಪ್ಪಂದಕ್ಕೆ ಸಮ್ಮತಿಸದಿದ್ದರೆ ಅದರ ವಿರುದ್ಧ ದೊಡ್ಡ ಮಟ್ಟದ ದಾಳಿ ನಡೆಯಲಿದೆ. ರವಿವಾರದೊಳಗೆ ದಾಳಿ ನಡೆಯಬಹುದು. ಯುದ್ಧವನ್ನು ಶೀಘ್ರ ಕೊನೆಗೊಳಿಸುವ ಬಗ್ಗೆ ಅಮೆರಿಕ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆಗೆ IRGC ಈ ಪ್ರತಿಕ್ರಿಯೆ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ IRGC, ‘ಒಂದು ವೇಳೆ ಇರಾನ್ ವಿರುದ್ಧದ ಆಕ್ರಮಣವನ್ನು ಪುನರಾವರ್ತಿಸಿದರೆ, ಪ್ರಾದೇಶಿಕ ಯುದ್ಧವು ಈ ಬಾರಿ ಪ್ರದೇಶವನ್ನು ಮೀರಿ ಹರಡುತ್ತದೆ ಮತ್ತು ನಮ್ಮ ವಿನಾಶಕಾರಿ ಹೊಡೆತಗಳು ನಿಮ್ಮನ್ನು ಪುಡಿ ಮಾಡುತ್ತವೆ. ವಿಶ್ವದ ಎರಡು ಅತ್ಯಂತ ದುಬಾರಿ ಸೈನ್ಯಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ನಮ್ಮ ವಿರುದ್ಧ ಆಕ್ರಮಣವನ್ನು ನಡೆಸಲಾಗಿದ್ದರೂ ನಾವು ನಮ್ಮ ಸಂಪೂರ್ಣ ಶಕ್ತಿಯನ್ನು ನಿಯೋಜಿಸಿರಲಿಲ್ಲ ಎಂಬುದನ್ನು ಶತ್ರುಗಳು ತಿಳಿದುಕೊಳ್ಳಬೇಕು’ ಎಂದು ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡಿದೆ.






