ರಶ್ಯದ ದಾಳಿಯಲ್ಲಿ 12 ಯೋಧರ ಮೃತ್ಯು: ಉಕ್ರೇನ್

PC : NDTV
ಕೀವ್: ಸೈನಿಕರು ತರಬೇತಿ ಪಡೆಯುತ್ತಿದ್ದ ಸ್ಥಳವನ್ನು ಗುರಿಯಾಗಿಸಿ ರವಿವಾರ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 12 ಯೋಧರು ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಉಕ್ರೇನ್ನ ಸೇನೆ ಹೇಳಿದೆ.
ರಶ್ಯ ನಡೆದ ಕ್ಷಿಪಣಿ ದಾಳಿಯಲ್ಲಿ 12 ಯೋಧರು ಸಾವನ್ನಪ್ಪಿದ್ದು ತರಬೇತಿ ಪಡೆಯುತ್ತಿದ್ದ 60ಕ್ಕೂ ಅಧಿಕ ಯೋಧರು ಗಾಯಗೊಂಡಿರುವುದಾಗಿ ಹೇಳಿಕೆ ತಿಳಿಸಿದೆ. ಈ ಮಧ್ಯೆ, ಉಕ್ರೇನ್ ನ ಉತ್ತರದ ಸುಮಿ ಪ್ರಾಂತದಲ್ಲಿನ ಮತ್ತೊಂದು ಗ್ರಾಮವನ್ನು ವಶಪಡಿಸಿಕೊಂಡಿರುವುದಾಗಿ ರಶ್ಯದ ಸೇನೆ ರವಿವಾರ ಹೇಳಿದೆ.
Next Story





