ಲೆಬನಾನ್ ನಲ್ಲಿ ನಮಗೆ ಯಾವುದೇ ಪ್ರಾದೇಶಿಕ ಹಿತಾಸಕ್ತಿ ಇಲ್ಲ: ಇಸ್ರೇಲ್

ಸಾಂದರ್ಭಿಕ ಚಿತ್ರ | Photo Credit : NDTV
ಟೆಲ್ ಅವೀವ್, ಜೂ.22: ಹಿಜ್ಬುಲ್ಲಾ ಕದನ ವಿರಾಮವನ್ನು ಉಲ್ಲಂಘಿಸದಿದ್ದರೆ, ಇಸ್ರೇಲ್ ಕೂಡ ಲೆಬನಾನ್ ನಲ್ಲಿನ ಕದನ ವಿರಾಮವನ್ನು ಗೌರವಿಸುತ್ತದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಹೇಳಿದ್ದಾರೆ.
‘ಇಸ್ರೇಲ್ಗೆ ಲೆಬನಾನ್ನಲ್ಲಿ ಯಾವುದೇ ಪ್ರಾದೇಶಿಕ ಹಿತಾಸಕ್ತಿಗಳಿಲ್ಲ. ಆದರೆ ನಾವು ಭದ್ರತಾ ವಲಯದಿಂದ ಹಿಂದೆ ಸರಿಯುವುದಿಲ್ಲ ಮತ್ತು ಹಿಜ್ಬುಲ್ಲಾದ ದಾಳಿ ಹಾಗೂ ಸಂಭವನೀಯ ಆಕ್ರಮಣಕ್ಕೆ ನಮ್ಮ ನಾಗರಿಕರನ್ನು ಒಡ್ಡಲು ಸಿದ್ಧರಿಲ್ಲ. ಹಿಜ್ಬುಲ್ಲಾ ಮೂಲಕ ಇರಾನ್ ನಡೆಸುತ್ತಿರುವ ಪರೋಕ್ಷ ಆಕ್ರಮಣದಿಂದಾಗಿ ದಶಕಗಳಿಂದ ಇಂದಿನವರೆಗೂ ಲೆಬನಾನ್ನ ಸಾರ್ವಭೌಮತ್ವ ಉಲ್ಲಂಘನೆಯಾಗುತ್ತಲೇ ಬಂದಿದೆ. ಹಿಜ್ಬುಲ್ಲಾದ ಈ ಭಯೋತ್ಪಾದಕ ವ್ಯವಸ್ಥೆಯನ್ನು ಧ್ವಂಸಗೊಳಿಸುವುದು ಲೆಬನಾನ್ ಮತ್ತು ಇಸ್ರೇಲ್ ಎರಡರ ಹಿತಾಸಕ್ತಿಗೂ ಪೂರಕವಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
Next Story




