ಇರಾನ್ನ ಪ್ರಾದೇಶಿಕ ಜಲಪ್ರದೇಶ ಪ್ರವೇಶಿಸಿದ ಅಮೆರಿಕದ ಡ್ರೋನ್ ಹೊಡೆದುರುಳಿಸಿದ್ದೇವೆ: IRGC ಹೇಳಿಕೆ

Photo Credit : PTI
ಟೆಹರಾನ್: ತನ್ನ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಅಮೆರಿಕದ MQ-1 ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ.
ಇರಾನ್ ನ ಸರಕಾರಿ ಪ್ರಸಾರ ಸಂಸ್ಥೆ IRIB ಪ್ರಸಾರ ಮಾಡಿದ IRGC ಹೇಳಿಕೆಯ ಪ್ರಕಾರ, ಅಮೆರಿಕದ ಡ್ರೋನ್ ‘ ಸಂದೇಹಾಸ್ಪದ ಕಾರ್ಯಾಚರಣೆ’ ನಡೆಸಲು ಪ್ರಯತ್ನಿಸಿತ್ತು. ಅದನ್ನು ತಕ್ಷಣವೇ ಪತ್ತೆಹಚ್ಚಿ, ಕ್ರಾಂತಿಕಾರಿ ಗಾರ್ಡ್ನ ಆಧುನಿಕ ವಾಯು ರಕ್ಷಣಾ ಕ್ಷಿಪಣಿಗಳ ಮೂಲಕ ಗುರಿಯಾಗಿಸಿ ಹೊಡೆದುರುಳಿಸಲಾಗಿದೆ ಎಂದು ಹೇಳಲಾಗಿದೆ.
‘ಇರಾನ್ನ ಪ್ರಾದೇಶಿಕ ಜಲಪ್ರದೇಶಕ್ಕೆ ಯಾವುದೇ ಅತಿಕ್ರಮಣವನ್ನು ಸಹಿಸಲಾಗುವುದಿಲ್ಲ. ದೇಶದ ಸಾರ್ವಭೌಮತ್ವ ಮತ್ತು ಭದ್ರತೆಯ ವಿರುದ್ಧದ ಯಾವುದೇ ಆಕ್ರಮಣವನ್ನು ನಿರ್ಣಾಯಕವಾಗಿ ಎದುರಿಸಲಾಗುವುದು’ ಎಂದು IRGC ತನ್ನ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದೆ.
Next Story




