ಪಶ್ಚಿಮದಂಡೆ: ಚೂರಿ ಇರಿತಕ್ಕೆ ಒಬ್ಬ ಬಲಿ; ಮೂವರಿಗೆ ಗಾಯ

ಗಾಝಾ, ನ.18: ಆಕ್ರಮಿತ ಪಶ್ಚಿಮದಂಡೆಯಲ್ಲಿ ಮಂಗಳವಾರ ನಡೆದ ಇರಿತದ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಇಸ್ರೇಲ್‍ನ ತುರ್ತು ಸೇವಾ ಏಜೆನ್ಸಿ ಹೇಳಿದೆ.
ಪಶ್ಚಿಮ ದಂಡೆಯ ದಕ್ಷಿಣದಲ್ಲಿರುವ ಗುಷ್ ಎಟ್ಜಿಯಾನ್ ಜಂಕ್ಷನ್ ನಲ್ಲಿ ಘಟನೆ ನಡೆದಿದ್ದು 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
Next Story





