ಪಶ್ಚಿಮದಂಡೆ | ಇಸ್ರೇಲಿ ವಲಸಿಗರಿಂದ ಎರಡು ಮಸೀದಿಗಳಿಗೆ ಬೆಂಕಿ

Photo Credit: newindianexpress
ಜೆರುಸಲೇಂ, ಜು.26: ಆಕ್ರಮಿತ ಪಶ್ಚಿಮದಂಡೆಯಲ್ಲಿ ರವಿವಾರ ಬೆಳಿಗ್ಗೆ ಇಸ್ರೇಲಿ ವಲಸಿಗರು ಎರಡು ಮಸೀದಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.
ಖುಸ್ರಾ ಪಟ್ಟಣದ ದಕ್ಷಿಣ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಸೀದಿಗೆ ಬೆಂಕಿ ಹಚ್ಚಲಾಗಿದೆ. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ತುಲ್ಕರೇಮ್ ಬಳಿಯ ಕೌರ್ ಗ್ರಾಮದಲ್ಲಿ ಇಸ್ರೇಲಿ ವಲಸಿಗರು ಮಸೀದಿಯೊಂದಕ್ಕೆ ಬೆಂಕಿ ಹಚ್ಚಿ, ಅದರ ಗೋಡೆಗಳ ಮೇಲೆ ಜನಾಂಗೀಯ ದ್ವೇಷದ ಘೋಷಣೆಗಳನ್ನು ಬರೆದಿದ್ದಾರೆ ಎಂದು ಫೆಲೆಸ್ತೀನ್ ನ ಧಾರ್ಮಿಕ ದತ್ತಿ ಮತ್ತು ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಶುಕ್ರವಾರ 'ಟೆಲ್' ಗ್ರಾಮದಲ್ಲಿ ಇಸ್ರೇಲಿ ವಸಾಹತುಗಾರರು ಮತ್ತು ಫೆಲೆಸ್ತೀನಿಯನ್ನರ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರು ಫೆಲೆಸ್ತೀನಿಯನ್ನರು ಮತ್ತು ಇಬ್ಬರು ಇಸ್ರೇಲಿಗಳು ಮೃತಪಟ್ಟಿದ್ದರು.
Next Story




