ಪಶ್ಚಿಮದಂಡೆ: ಇಸ್ರೇಲ್ ಡ್ರೋನ್ ದಾಳಿಯಲ್ಲಿ 7 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ - AI
ರಮಲ್ಲಾ: ಆಕ್ರಮಿತ ಪಶ್ಚಿಮದಂಡೆಯಲ್ಲಿನ ಗ್ರಾಮವೊಂದರ ಮೇಲೆ ಬುಧವಾರ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿರುವುದಾಗಿ ಫೆಲೆಸ್ತೀನ್ ರೆಡ್ಕ್ರೆಸೆಂಟ್ ಹೇಳಿದೆ.
ಪಶ್ಚಿಮದಂಡೆಯ ಉತ್ತರ ಭಾಗದಲ್ಲಿರುವ ತಮೂನ್ ಗ್ರಾಮದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಎಂದು ರೆಡ್ಕ್ರೆಸೆಂಟ್ ಹೇಳಿದೆ. ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿರುವುದಾಗಿ ಫೆಲೆಸ್ತೀನಿಯನ್ ಆರೋಗ್ಯ ಇಲಾಖೆ ಹೇಳಿದೆ. ಈ ಪ್ರದೇಶದಲ್ಲಿ ತನ್ನ ಪಡೆಗಳು `ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ'ಯಲ್ಲಿ ಭಾಗಿಯಾಗಿವೆ. ಕಾರ್ಯಾಚರಣೆಯ ಅಂಗವಾಗಿ ಭದ್ರತಾ ಏಜೆನ್ಸಿಯ ನಿರ್ದೇಶನದಂತೆ ತಮೂನ್ ಪ್ರದೇಶದಲ್ಲಿ ಸಶಸ್ತ್ರ ಭಯೋತ್ಪಾದಕ ಕೇಂದ್ರದ ಮೇಲೆ ಇಸ್ರೇಲ್ ಯುದ್ಧವಿಮಾನ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
Next Story





