ಟ್ರುಥ್ ಸೋಷಿಯಲ್ ಎಂದರೇನು, ಯಾವತ್ತೂ ಈ ಬಗ್ಗೆ ಕೇಳಿಲ್ಲ: ಟ್ರಂಪ್ ರನ್ನು ಗೇಲಿ ಮಾಡಿದ ಮಸ್ಕ್

PC : @ELonMuskNewssX
ವಾಷಿಂಗ್ಟನ್: ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಮಸ್ಕ್ ನಿರ್ಧಾರವನ್ನು ಟೀಕಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಉದ್ಯಮಿ ಎಲಾನ್ ಮಸ್ಕ್, ಟ್ರಂಪ್ ಮಾಲಕತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುಥ್ ಸೋಷಿಯಲ್ ಬಗ್ಗೆ ಗೇಲಿ ಮಾಡಿದ್ದಾರೆ.
ಮಸ್ಕ್ ಅವರನ್ನು ಟೀಕಿಸಿ ಟ್ರಂಪ್ ಟ್ರುಥ್ ಸೋಷಿಯಲ್ನಲ್ಲಿ ಹಾಕಿದ್ದ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಮಸ್ಕ್ ಗೆ ಶೇರ್ ಮಾಡಿದ್ದ ಬಳಕೆದಾರರಿಗೆ `ಟ್ರುಥ್ ಸೋಷಿಯಲ್.. ಹಾಗೆಂದರೇನು? ಯಾವತ್ತೂ ಈ ಬಗ್ಗೆ ಕೇಳಿಯೇ ಇಲ್ಲ' ಎಂದು ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಮಸ್ಕ್ ಯೋಜನೆ `ಹಾಸ್ಯಾಸ್ಪದ' ಎಂದು ಟ್ರಂಪ್ ಲೇವಡಿ ಮಾಡಿದ್ದರು.
Next Story





