ಟ್ರಂಪ್ಗೆ ಸವಾಲು ಹಾಕುವ ಮಡುರೊ ಅವರ ಹಳೆಯ ವೀಡಿಯೊ ಹಂಚಿಕೊಂಡು ವ್ಯಂಗ್ಯವಾಡಿದ ಶ್ವೇತಭವನ

Screengrab:X/@WhiteHouse
ಕ್ಯಾರಕಸ್: ಅಮೆರಿಕ ಮತ್ತು ವೆನಿಝುವೆಲಾ ಮಧ್ಯೆ ಉದ್ವಿಗ್ನತೆಯ ಮಧ್ಯೆ ನಿಕೋಲಸ್ ಮಡುರೊ ಅವರ ಹಳೆಯ ವೀಡಿಯೊ ಹಂಚಿಕೊಂಡು ಶ್ವೇತ ಭವನ ವ್ಯಂಗ್ಯವಾಡಿದೆ.
ಹಳೆಯ ವೀಡಿಯೊದಲ್ಲಿ ನಿಕೋಲಸ್ ಮಡುರೊ, “ಬಂದು ನನ್ನನ್ನು ಹಿಡಿದುಕೊಂಡು ಹೋಗಿ" ಎಂದು ಅಮೆರಿಕ ಮತ್ತು ಟ್ರಂಪ್ಗೆ ಬಹಿರಂಗವಾಗಿ ಸವಾಲು ಹಾಕಿದ್ದರು.
ವೆನೆಝುವೆಲದಲ್ಲಿ ಸೇನಾ ಕಾರ್ಯಾಚರಣೆ ನಡೆಸಿದ ಅಮೆರಿಕ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಮಾರ್ಚ್ 2020ರಲ್ಲಿ ನ್ಯೂಯಾರ್ಕ್ನಲ್ಲಿ ಮಡುರೊ ವಿರುದ್ಧ ‘ಮಾದಕದ್ರವ್ಯ ಭಯೋತ್ಪಾದನೆ’ ಒಳಸಂಚಿನ ಆರೋಪವನ್ನು ಹೊರಿಸಲಾಗಿತ್ತು.
Nicolas Maduro had his chance — until he didn’t.
— The White House (@WhiteHouse) January 4, 2026
The Trump Admin will always defend American citizens against all threats, foreign and domestic. 🇺🇸🦅 pic.twitter.com/eov3GbBXf4
Next Story







