ಸುಡಾನ್ ಆಸ್ಪತ್ರೆಯ ಮೇಲೆ ದಾಳಿ: ಮಕ್ಕಳ ಸಹಿತ 40ಕ್ಕೂ ಅಧಿಕ ಮೃತ್ಯು

ಖಾರ್ಟೂಮ್: ಸುಡಾನ್ ನಲ್ಲಿ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ಮಕ್ಕಳು, ವೈದ್ಯಕೀಯ ಸಿಬ್ಬಂದಿ ಸಹಿತ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಮಂಗಳವಾರ ಹೇಳಿದ್ದಾರೆ.
ಸುಡಾನ್ ಸೇನೆ ಮತ್ತು ಅರೆ ಸೇನಾಪಡೆಯ ನಡುವೆ ಭೀಕರ ಸಂಘರ್ಷ ನಡೆಯುತ್ತಿರುವ ಪಶ್ಚಿಮ ಕೊರ್ಡೊಫಾನ್ ಪ್ರಾಂತದ ಅಲ್ ಮುಜ್ಲದ್ ಆಸ್ಪತ್ರೆಯ ಮೇಲೆ ದಾಳಿ ನಡೆದಿದ್ದು 6 ಮಕ್ಕಳು ಹಾಗೂ 5 ವೈದ್ಯಕೀಯ ಸಿಬ್ಬಂದಿ ಸೇರಿದಂತೆ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಆಸ್ಪತ್ರೆಗೆ ತೀವ್ರ ಹಾನಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸುಡಾನ್ ಕಚೇರಿಯ ಮೂಲಗಳು ಹೇಳಿವೆ.
ಸೇನಾಪಡೆಯ ಡ್ರೋನ್ ಆಸ್ಪತ್ರೆಗೆ ಅಪ್ಪಳಿಸಿರುವುದಾಗಿ ಮಾನವ ಹಕ್ಕುಗಳ ಗುಂಪು ಆರೋಪಿಸಿದೆ.
Next Story