ಕೆನಡಾದ ಹಾಲಿನ ಉತ್ಪನ್ನ ಆಮದಿಗೆ ಅಮೆರಿಕ ನಿಷೇಧ; ಕಾರಣವೇನು?

Photo Credit : AI
ವಾಶಿಂಗ್ಟನ್: ಕೆನಡಾದಿಂದ ಕೆಲವು ಹಾಲಿನ ಉತ್ಪನ್ನಗಳು, ಮೋಟಾರ್ಸೈಕಲ್ಗಳು ಹಾಗೂ ಹೆಚ್ಚಿನ ಮದ್ಯದ ಪಾನೀಯಗಳ ಆಮದನ್ನು ಅಮೆರಿಕ ನಿಷೇಧಿಸುತ್ತಿದೆ ಎಂದು ಶ್ವೇತಭವನ ಮಂಗಳವಾರ ತಿಳಿಸಿದೆ.
ಈ ನಿಷೇಧವು ಸೆಪ್ಟೆಂಬರ್ 29 ರಂದು ಜಾರಿಗೆ ಬರಲಿದೆ. ಅಮೆರಿಕದ 20 ಶತಕೋಟಿ ಡಾಲರ್ ಆಮದಿನ ಮೇಲೆ ಕೆನಡಾ ಘೋಷಿಸಿದ್ದ ಸುಂಕಗಳು ಮಂಗಳವಾರದಿಂದ ಜಾರಿಗೆ ಬಂದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಕೆನಡಾವು ʼಅಮೆರಿಕನ್ ಉತ್ಪನ್ನಗಳಿಗೆ ಪೂರ್ಣ ಮತ್ತು ನ್ಯಾಯಯುತ ಪರಸ್ಪರ ಸೌಲಭ್ಯವನ್ನು' ನೀಡುವವರೆಗೆ ಅಂತಹ ಗುತ್ತಿಗೆಗಳಿಗೆ ಕೆನಡಾದ ಉತ್ಪನ್ನಗಳು ಅನರ್ಹ ಎಂದು ಘೋಷಿಸುವಂತೆ ಟ್ರಂಪ್ ಅಮೆರಿಕದ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಶ್ವೇತಭವನ ತಿಳಿಸಿದೆ.
Next Story




