ಶಿಶುಗಳಿಗೆ ಮೊದಲ ಮಲೇರಿಯಾ ಚಿಕಿತ್ಸೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ವಿಶ್ವ ಆರೋಗ್ಯ ಸಂಸ್ಥೆ | Photo Credit : UN
ಜಿನೆವಾ, ಎ.25: ನವಜಾತ ಶಿಶುಗಳಿಗೆ ಮತ್ತು ಮಕ್ಕಳಿಗೆ ಮೊದಲ ಬಾರಿಗೆ ಮಲೇರಿಯಾ ಚಿಕಿತ್ಸೆಗೆ ಪೂರ್ವಾರ್ಹತೆಯ ಅನುಮೋದನೆಯನ್ನು ನೀಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಘೋಷಿಸಿದೆ.
ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಔಷಧಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು `ಪೂರ್ವಾರ್ಹತೆ'ಯ ಪದನಾಮ ನೀಡುತ್ತದೆ. ಸೊಳ್ಳೆಯಿಂದ ಹರಡುವ ಮಲೇರಿಯಾ ಕಾಯಿಲೆಯಿಂದ ಬಳಲುವ ಶಿಶುಗಳಿಗೆ ಮತ್ತು ಮಕ್ಕಳಿಗೆ ಆರ್ಟಿಮೆಥರ್-ಲುಮ್ಫಾಂಟ್ರಿನ್ ಔಷಧಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದುವರೆಗೆ ವಯಸ್ಸಾದ ಮಕ್ಕಳಿಗಾಗಿ ಉದ್ದೇಶಿಸಿದ್ದ ಔಷಧವನ್ನು ಶಿಶುಗಳ ಚಿಕಿತ್ಸೆಗೂ ಬಳಸಲಾಗುತ್ತಿತ್ತು. ಇದು ಡೋಸೇಜ್ ದೋಷಗಳು. ಅಡ್ಡಪರಿಣಾಮಗಳು ಮತ್ತು ವಿಷತ್ವದ ಹೆಚ್ಚಿನ ಅಪಾಯವನ್ನು ಹೊಂದಿದೆ.
Next Story




