ಯೆಮನ್ ಬಳಿ ನೌಕೆ ಮುಳುಗಿ 76 ವಲಸಿಗರ ಮೃತ್ಯು; 12 ಮಂದಿಯ ರಕ್ಷಣೆ

ಸಾಂದರ್ಭಿಕ ಚಿತ್ರ
ಸನಾ, ಆ.4: ಆಫ್ರಿಕಾದ ವಲಸಿಗರಿದ್ದ ನೌಕೆಯು ರವಿವಾರ ಯೆಮನ್ ಕರಾವಳಿಯ ಬಳಿ ಮುಳುಗಿದ್ದು 76 ಮಂದಿ ಸಾವನ್ನಪ್ಪಿದ್ದಾರೆ. 12 ಮಂದಿಯನ್ನು ರಕ್ಷಿಸಲಾಗಿದ್ದು ಇತರ 66 ವಲಸಿಗರು ನಾಪತ್ತೆಯಾಗಿರುವುದಾಗಿ ವಲಸಿಗರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ನೌಕೆಯಲ್ಲಿ 154 ವಲಸಿಗರಿದ್ದು ಇಥಿಯೋಪಿಯಾದ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ದಕ್ಷಿಣ ಯೆಮನ್ ನ ಅಬ್ಯಾನ್ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಏಡನ್ ಕೊಲ್ಲಿಯ ಬಳಿ ನೌಕೆಯ ಅವಶೇಷಗಳನ್ನು ಆಧರಿಸಿ ಈಜುತ್ತಿದ್ದ 12 ಮಂದಿಯನ್ನು ರಕ್ಷಿಸಿ ಏಡನ್ ನಗರಕ್ಕೆ ಸ್ಥಳಾಂತರಿಸಲಾಗಿದೆ. ನಾಪತ್ತೆಯಾಗಿರುವವರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story





