ಯೆಮನ್ | ಘರ್ಷಣೆಯಲ್ಲಿ 120ಕ್ಕೂ ಹೆಚ್ಚು ಜನರು ಮೃತ್ಯು: ವರದಿ

Photo Credit : AP
ಸನಾ: ಯೆಮನ್ನ ಹೌದಿ ಬಂಡುಕೋರರು ಮತ್ತು ಸರಕಾರಿ ಪಡೆಗಳ ನಡುವೆ ಗುರುವಾರದಿಂದ ನಡೆದ ಘರ್ಷಣೆಯಲ್ಲಿ 39 ಭದ್ರತಾ ಸಿಬ್ಬಂದಿ, ಕನಿಷ್ಠ 42 ಹೌದಿ ಬಂಡುಕೋರರ ಸಹಿತ 120 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೆಂಪು ಸಮುದ್ರದ ಕರಾವಳಿ ಪ್ರದೇಶಗಳು ಮತ್ತು ತೈಜ್ ಪ್ರಾಂತ್ಯದ ಸುತ್ತಮುತ್ತ ಹೌದಿ ಪಡೆಗಳು ರಾಕೆಟ್ ಮತ್ತು ಡ್ರೋನ್ ದಾಳಿಗಳೊಂದಿಗೆ ನೆಲದ ಮೇಲಿನ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಗುರುವಾರ ಯೆಮನ್ನಲ್ಲಿ ಘರ್ಷಣೆಗಳು ಭುಗಿಲೆದ್ದಿವೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.
Next Story




