ಇಸ್ರೇಲ್ ಮೇಲೆ ಹೌದಿಗಳ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ

ಸಾಂದರ್ಭಿಕ ಚಿತ್ರ | PC : PTI
ಸನಾ: ಮಧ್ಯ ಇಸ್ರೇಲಿನ ಜಫಾ ಪ್ರದೇಶವನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿರುವುದಾಗಿ ಯೆಮನ್ ನ ಇರಾನ್ ಬೆಂಬಲಿತ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ರವಿವಾರ ಹೇಳಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಇಸ್ರೇಲಿ ಮಿಲಿಟರಿ ದೃಢಪಡಿಸಿದ್ದು ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ. ಬಳಿಕ ಶಿಷ್ಟಾಚಾರದಂತೆ ಮಧ್ಯ ಇಸ್ರೇಲ್ ನ ಹಲವು ಪ್ರದೇಶಗಳಲ್ಲಿ ಸೈರನ್ ಮೊಳಗಿಸಲಾಗಿದೆ ಎಂದು ಹೇಳಿದೆ.
Next Story