ಇಸ್ರೇಲ್ ನ ವಿಮಾನ ನಿಲ್ದಾಣದ ಬಳಿ ಯೆಮೆನ್ ಕ್ಷಿಪಣಿ ದಾಳಿ

Screengrab:X/@manniefabian
ಟೆಲ್ ಅವೀವ್: ಇಸ್ರೇಲ್ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೇಲೆ ಶನಿವಾರ ಹೌದಿಗಳು ಕ್ಷಿಪಣಿ ದಾಳಿ ನಡೆದಿದ್ದು, ಕನಿಷ್ಠ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಯೆಮೆನ್ ನಿಂದ ಹಾರಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆಯುವಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು (IDF) ವಿಫಲವಾಗಿವೆ. ಅದನ್ನು ಹೊಡೆದುರುಳಿಸಲು ಹಲವಾರು ಪ್ರಯತ್ನಗಳ ಹೊರತಾಗಿಯೂ, ಕ್ಷಿಪಣಿ ವಿಮಾನ ನಿಲ್ದಾಣದ ಬಳಿಯ ರಸ್ತೆಯ ಪಕ್ಕದಲ್ಲಿರುವ ತೋಪಿಗೆ ಅಪ್ಪಳಿಸಿತು.
ಕಣ್ಗಾವಲು ಕ್ಯಾಮೆರಾಗಳ ದೃಶ್ಯಗಳು ದಾಳಿಯ ಪರಿಣಾಮದ ಕ್ಷಣವನ್ನು ಸೆರೆಹಿಡಿದಿವೆ. ಕ್ಷಿಪಣಿ ದಾಳಿಯು ವಿಮಾನ ನಿಲ್ದಾಣದ ಕಾರ್ಯಾಚರಣೆಯಲ್ಲಿ ತಾತ್ಕಾಲಿಕ ಸ್ಥಗಿತಕ್ಕೆ ಕಾರಣವಾಯಿತು. ಅಧಿಕಾರಿಗಳು ಘಟನೆಯ ತನಿಖೆ ನಡೆಸುತ್ತಿರುವಾಗ ಯಾವುದೇ ಟೇಕ್-ಆಫ್ ಅಥವಾ ಲ್ಯಾಂಡಿಂಗ್ಗೆ ಅವಕಾಶ ನಿರ್ಬಂಧಿಸಲಾಯಿತು. ಆ ಸಮಯದಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಐಡಿಎಫ್ ಪ್ರಸ್ತುತ ತಮ್ಮ ವೈಮಾನಿಕ ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿಯನ್ನು ತಡೆಯುವಲ್ಲಿ ವಿಫಲವಾದ ಕಾರಣವನ್ನು ನಿರ್ಧರಿಸಲು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.
Surveillance camera footage shows the moment of the Houthi missile impact at Ben Gurion Airport.
— Emanuel (Mannie) Fabian (@manniefabian) May 4, 2025
The missile struck a grove adjacent to an access road, within the airport's perimeter. pic.twitter.com/AUyQwKrEOy
Footage shows the moment of the Houthis ballistic missile impact in the area of Ben Gurion Airport this morning. pic.twitter.com/fMbijXsv8p
— Emanuel (Mannie) Fabian (@manniefabian) May 4, 2025







