ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಗ್ರೆನೇಡ್ ದಾಳಿ

Photo Credit: AFP
ಲಂಡನ್: ಯೆಮನ್ ನ ಹೊದೈದಾ ಬಂದರಿನ ಬಳಿ ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿನ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ಗಳಿಂದ ದಾಳಿ ನಡೆದಿದೆ ಹಾಗೂ ಸಶಸ್ತ್ರ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಬ್ರಿಟನ್ ನ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ರವಿವಾರ ವರದಿ ಮಾಡಿದೆ.
ಹಡಗಿನ ಭದ್ರತಾ ತಂಡ ಪ್ರತಿದಾಳಿ ನಡೆಸಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ. ಇದುವರೆಗೆ ಯಾರೂ ದಾಳಿಯ ಹೊಣೆ ವಹಿಸಿಕೊಂಡಿಲ್ಲ ಎಂದು ವರದಿ ಹೇಳಿದೆ. ಗಾಝಾದಲ್ಲಿ ಇಸ್ರೇಲ್ ನ ಆಕ್ರಮಣವನ್ನು ವಿರೋಧಿಸಿ ಯೆಮನ್ ನ ಹೌದಿ ಬಂಡುಕೋರರು ಈ ವಲಯದಲ್ಲಿ ಸಾಗುವ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿದ್ದಾರೆ.
Next Story