ಇಸ್ರೇಲ್ ಮೇಲಿನ ದಾಳಿ ದೃಢಪಡಿಸಿದ ಹೌತಿಗಳು

Photo credit: PTI
ಸನಾ: ಯೆಮೆನ್ ನ ಹೌತಿ ಬಂಡುಕೋರರು ಇಸ್ರೇಲ್ ಮೇಲಿನ ದಾಳಿಯನ್ನು ದೃಢಪಡಿಸಿದ್ದು, ‘ಆಕ್ರಮಿತ ಜಾಫಾ ಪ್ರದೇಶದಲ್ಲಿರುವ ಇಸ್ರೇಲ್ ನ ಸೂಕ್ಷ್ಮ ನೆಲೆಗಳನ್ನು’ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಟೆಲಿಗ್ರಾಮ್ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕೆಂಪು ಸಮುದ್ರದಲ್ಲಿ ಇಸ್ರೇಲ್ ಗೆ ಸಂಬಂಧಿಸಿದ ಸಮುದ್ರ ಸಂಚಾರದ ಮೇಲೆ ‘ಸಂಪೂರ್ಣ ಮತ್ತು ಪೂರ್ಣ ನಿಷೇಧ’ ಹೇರಿರುವುದಾಗಿ ಹೌತಿಗಳು ಘೋಷಿಸಿದ್ದಾರೆ. ಅಲ್ಲದೆ, ಯಾವುದೇ ಆಕ್ರಮಣಕಾರಿ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
‘ನಮ್ಮ ಜನರ ಮೇಲೂ ಹಾಗೂ ಫೆಲೆಸ್ತೀನ್, ಗಾಝಾ, ಇರಾನ್, ಲೆಬನಾನ್ ಮತ್ತು ಇರಾಕ್ ನಲ್ಲಿರುವ ಪ್ರತಿರೋಧಿ ಗುಂಪುಗಳ ಮೇಲೂ ಹೇರಲಾಗಿರುವ ಅನ್ಯಾಯದ ಮುತ್ತಿಗೆಯನ್ನು ನಾವು ಮೌನವಾಗಿ ಸಹಿಸುವುದಿಲ್ಲ’ ಎಂದು ಹೌತಿಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.
Next Story




