ನೀವು ಬಿತ್ತಿದ್ದನ್ನು ಕಟಾವು ಮಾಡುತ್ತಿದ್ದೀರಿ: ಬೈಡನ್ ವಿರುದ್ಧ ಇರಾನ್ ವಾಗ್ದಾಳಿ

Photo: PTI
ಟೆಹ್ರಾನ್: ಅಮೆರಿಕ ಪಡೆಗಳ ಮೇಲೆ ಇರಾಕ್ ಹಾಗೂ ಇತರೆಡೆ ನಡೆಯುತ್ತಿರುವ ದಾಳಿಗಳು ‘ಅಮೆರಿಕದ ತಪ್ಪು ಕಾರ್ಯನೀತಿಯ’ ಫಲವಾಗಿದೆ ಎಂದು ಇರಾನ್ ಸೋಮವಾರ ಟೀಕಿಸಿದೆ.
ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇಸ್ರೇಲನ್ನು ಬೆಂಬಲಿಸುತ್ತಿರುವುದು ಅಮೆರಿಕದ ಬಹುದೊಡ್ಡ ಪ್ರಮಾದವಾಗಿದೆ. ‘ನೀವು ಬಿತ್ತಿದ್ದನ್ನು ಈಗ ಕಟಾವು ಮಾಡುತ್ತಿದ್ದೀರಿ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಲ್ಲೇಖಿಸಿದ ಹೇಳಿಕೆ ತಿಳಿಸಿದೆ.
ಇರಾಕ್, ಸಿರಿಯಾ ಮತ್ತಿತರ ಕಡೆ ಅಮೆರಿಕ ಸೇನೆಯ ಉಪಸ್ಥಿತಿಯನ್ನು ವಿರೋಧಿಸುತ್ತಿರುವ ಮತ್ತು ಅಮೆರಿಕವು ಯೆಹೂದಿ ಆಡಳಿತ(ಸಿರಿಯಾ)ಕ್ಕೆ ನೀಡುತ್ತಿರುವ ಬೆಂಬಲವನ್ನು ವಿರೋಧಿಸಿ ಈ ಆಕ್ರಮಣ ನಡೆಯುತ್ತಿದೆ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ನಾಸಿರ್ ಕನಾನಿ ಟೀಕಿಸಿದ್ದಾರೆ.
Next Story





