ಬ್ರಿಟನ್ನಲ್ಲಿ ಸೌದಿ ವಿದ್ಯಾರ್ಥಿಯನ್ನು ಇರಿದು ಹತ್ಯೆ: ಮಕ್ಕಾದ ಸ್ವಯಂ ಸೇವಕನ ನಿಧನಕ್ಕೆ ಮಸ್ಜಿದುಲ್ ಹರಾಮ್ ಸಂತಾಪ

ಮುಹಮ್ಮದ್ ಅಲ್ ಕಾಸ್ಸೆಮ್ (Photo credit: Cambridgeshire Police)
ಲಂಡನ್ : ಮಕ್ಕಾದ ಮಸ್ಜಿದುಲ್ ಹರಾಮ್ನಲ್ಲಿ ಯಾತ್ರಿಕರಿಗೆ ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಸೌದಿ ವಿದ್ಯಾರ್ಥಿ ಮುಹಮ್ಮದ್ ಅಲ್ ಕಾಸ್ಸೆಮ್ ಅವರ ಹತ್ಯೆ ಬಗ್ಗೆ ಮಸ್ಜಿದುಲ್ ಹರಾಮ್ ತನ್ನ ಎಕ್ಸ್ ಖಾತೆಯಲ್ಲಿ ಆಘಾತ ವ್ಯಕ್ತಪಡಿಸಿದೆ.
ಕಳೆದ ವಾರ ಬ್ರಿಟನ್ನ ಕೇಂಬ್ರಿಡ್ಜ್ನಲ್ಲಿ ಸೌದಿ ವಿದ್ಯಾರ್ಥಿ ಅಲ್ ಕಾಸ್ಸೆಮ್ ಅವರನ್ನು ಹತ್ಯೆ ಮಾಡಲಾಗಿತ್ತು. ʼಬ್ರಿಟಿನ್ ಕೇಂಬ್ರಿಡ್ಜ್ನಲ್ಲಿ 20ರ ಹರೆಯದ ಸೌದಿ ವಿದ್ಯಾರ್ಥಿ ಮುಹಮ್ಮದ್ ಅಲ್ ಕಾಸ್ಸೆಮ್ ಅವರ ಹತ್ಯೆ ನಡೆದಿದೆʼ ಎಂದು ಸೌದಿ ಅರೇಬಿಯಾದ ರಾಯಭಾರಿ ಕಚೇರಿ ಈ ಹಿಂದೆ ತಿಳಿಸಿತ್ತು.
ಶುಕ್ರವಾರ ಮಧ್ಯರಾತ್ರಿ ನಗರದ ಮಿಲ್ ಪಾರ್ಕ್ ಪ್ರದೇಶದಲ್ಲಿ ಅಲ್ ಕಾಸ್ಸೆಮ್ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದರು, ಬಳಿಕ ಅವರು ಮೃತಪಟ್ಟದ್ದಾರೆ ಎಂದು ಕೇಂಬ್ರಿಡ್ಜ್ ಶೈರ್ ಪೊಲೀಸರು ಮಾಹಿತಿ ನೀಡಿದ್ದರು. ಹತ್ಯೆಗೆ ಸಂಬಂಧಿಸಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಬ್ರಿಟನ್ನಲ್ಲಿನ ಸೌದಿ ರಾಯಭಾರಿ ಕಚೇರಿಯು ಬ್ರಿಟಿಷ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಲ್ ಕಾಸ್ಸೆಮ್ ಅವರ ಮೃತದೇಹವನ್ನು ಸೌದಿ ಅರೇಬಿಯಾಗೆ ಕರೆತರುವ ಪ್ರಯತ್ನಗಳು ನಡೆಯುತ್ತಿದೆ.
ಮಕ್ಕಾದ ಮಸ್ಜಿದುಲ್ ಹರಾಮ್ನಲ್ಲಿ ಅಲ್ ಕಾಸ್ಸೆಮ್ ಸ್ವಯಂಸೇವಕನಾಗಿ ಯಾತ್ರಿಕರ ಸೇವೆ ಮಾಡುತ್ತಿದ್ದರು. ಅವರು ಸ್ವಯಂಸೇವಕರ ಸಮವಸ್ತ್ರ ಧರಿಸಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮಕ್ಕಾದ ಮಸ್ಜಿದುಲ್ ಹರಾಮ್ನಲ್ಲಿ ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದಕ್ಕಾಗಿ ಅಲ್ ಕಾಸ್ಸೆಮ್ ಅವರಿಗೆ ಸಂತಾಪವನ್ನು ಸೂಚಿಸಿ ʼಇನ್ ಸೈಡ್ ದಿ ಹರಮೈನ್ʼ ಎಕ್ಸ್ನಲ್ಲಿ ಪ್ರಕಟನೆಯನ್ನು ಹೊರಡಿಸಿದೆ.
"ಹರಮೈನ್ಗೆ ಭೇಟಿ ನೀಡುವ ಯಾತ್ರಿಕರಿಗೆ ಮುಹಮ್ಮದ್ ಅಲ್ ಖಾಸೆಮ್ ಓರ್ವ ಸ್ವಯಂಸೇವಕರಿಗಿಂತ ಹೆಚ್ಚಿನವರಾಗಿದ್ದರು. ಅವರು ಸೌಮ್ಯ ಸ್ವಭಾವದವರಾಗಿದ್ದು ಸಮರ್ಪಣೆಯಿಂದ ಯಾತ್ರಿಕರ ಸೇವೆ ಸಲ್ಲಿಸುತ್ತಿದ್ದರು. ಹೃದೃಯಾಂತರಾಳದ ಸೇವೆಗೆ ಉಜ್ವಲ ಉದಾಹರಣೆಯಾಗಿದ್ದರು. ವರ್ಷಗಳ ಕಾಲ, ಹಜ್ ಮತ್ತು ಉಮ್ರಾ ಸಮಯದಲ್ಲಿ ಯಾತ್ರಿಕರಿಗೆ ಸಹಾಯ ಮಾಡುವುದು, ಮಾರ್ಗದರ್ಶನ ನೀಡುವುದು ಮತ್ತು ಎಲ್ಲರಿಗೂ ಸರಿಯಾಗಿ ಆಧ್ಯಾತ್ಮಿಕ ಕರ್ಮವನ್ನು ನೆರವೇರಿಸಲು ಸಹಾಯ ಮಾಡುತ್ತಿದ್ದರು. ಸರ್ವಶಕ್ತನಾದ ಅಲ್ಲಾಹನು ಅವರ ವರ್ಷಗಳ ಸೇವೆಯನ್ನು ಸ್ವೀಕರಿಸಲಿ. ಅವರಿಗೆ ಸ್ವರ್ಗ ಪ್ರಾಪ್ತಿ ಮಾಡಲಿ ಎಂದು ನಾವು ಪ್ರಾರ್ಥಿಸುತ್ತೇವೆ" ಎಂದು ಹರಮೈನ್ ಪ್ರಕಟನೆಯಲ್ಲಿ ತಿಳಿಸಿದೆ.
'Haramain Volunteer Murdered in Britain'
— Inside the Haramain (@insharifain) August 5, 2025
We ask Allah Almighty to envelop him in His infinite mercy, to accept his years of service, and to grant him the highest ranks of Paradise.
إنا لله وإنا إليه راجعونhttps://t.co/3AJUlJ5onr







