ಯೂಲಿಯಾ ಸ್ವರಿಡೆಂಕೊ ಉಕ್ರೇನ್ ನೂತನ ಪ್ರಧಾನಿ

ಯೂಲಿಯಾ ಸ್ವರಿಡೆಂಕೊ | PC: X
ಕೀವ್, ಜು.17: ಮಾಜಿ ವಿತ್ತಸಚಿವೆ ಯೂಲಿಯಾ ಸ್ವರಿಡೆಂಕೋ ಅವರನ್ನು ಉಕ್ರೇನಿನ ನೂತನ ಪ್ರಧಾನಿಯಾಗಿ ನೇಮಕಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.
ಮಂಗಳವಾರ ರಾಜೀನಾಮೆ ಘೋಷಿಸಿದ್ದ ಡೆನಿಸ್ ಶ್ಮೆಹಾಲ್ ಅವರ ಸ್ಥಾನದಲ್ಲಿ ಯೂಲಿಯಾ ನೇಮಕಗೊಂಡಿದ್ದಾರೆ. ಅಮೆರಿಕದೊಂದಿಗೆ ಖನಿಜ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೂಲಿಯಾ 2022ರಲ್ಲಿ ರಶ್ಯದೊಂದಿಗೆ ಯುದ್ಧ ಆರಂಭಗೊಂಡ ಬಳಿಕ ಉಕ್ರೇನ್ನ ಮೊದಲ ಹೊಸ ಸರಕಾರದ ಮುಖ್ಯಸ್ಥೆ ಎನಿಸಿಕೊಂಡಿದ್ದಾರೆ.
Next Story





