ಮಾಸ್ಕೋದಲ್ಲಿ ಭೇಟಿಯಾಗುವ ಪುಟಿನ್ ಪ್ರಸ್ತಾಪ ತಿರಸ್ಕರಿಸಿದ ಝೆಲೆನ್ಸ್ಕಿ

ವ್ಲಾದಿಮಿರ್ ಪುಟಿನ್ / ವೊಲೊದಿಮಿರ್ ಝೆಲೆನ್ಸ್ಕಿ (PTI)
ಕೀವ್, ಸೆ.9: ಮಾಸ್ಕೋದಲ್ಲಿ ಭೇಟಿಯಾಗುವಂತೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೀಡಿದ ಆಹ್ವಾನವನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ತಿರಸ್ಕರಿಸಿದ್ದು ಈ ರೀತಿಯ ಅವಾಸ್ತವಿಕ ಸ್ಥಳದಲ್ಲಿ ಸಭೆಯನ್ನು ಕರೆಯುವುದು ರಶ್ಯ ಮಾತುಕತೆಗಳಲ್ಲಿ ಪ್ರಾಮಾಣಿಕವಾಗಿ ಆಸಕ್ತಿ ಹೊಂದಿಲ್ಲ ಎಂಬುದರ ಸಂಕೇತವಾಗಿದೆ ಎಂದು ಟೀಕಿಸಿದ್ದಾರೆ.
`ನಾನು ಈ ಭಯೋತ್ಪಾದಕನ ರಾಜಧಾನಿಗೆ ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಉಕ್ರೇನ್ ನ ಮೇಲೆ ಪ್ರತೀ ದಿನ ಕ್ಷಿಪಣಿ ದಾಳಿ, ಗುಂಡಿನ ದಾಳಿ ನಡೆಯುತ್ತಿದೆ. ಪುಟಿನ್ ಕೀವ್ಗೆ ಬರಬಹುದು' ಎಂದು ಝೆಲೆನ್ಸ್ಕಿ ಹೇಳಿರುವುದಾಗಿ ಯುರೋನ್ಯೂಸ್ ವರದಿ ಮಾಡಿದೆ. ರಶ್ಯ ಮತ್ತು ಉಕ್ರೇನ್ ಅಧ್ಯಕ್ಷರ ನಡುವಿನ ಮುಖಾಮುಖಿ ಭೇಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿದ್ದಾರೆ.
Next Story





