ಭಾರತ-ರಶ್ಯ ತೈಲ ವ್ಯಾಪಾರಕ್ಕೆ ತಡೆ ನೀಡುವಂತೆ ಝೆಲೆನ್ಸ್ಕಿ ಆಗ್ರಹ

ವೊಲೊಡಿಮಿರ್ ಝೆಲೆನ್ಸ್ಕಿ | Photo Credit : AP
ಕೀವ್: ರಶ್ಯ ತನ್ನ ಆರ್ಥಿಕ ಬೆಳವಣಿಗೆಗಾಗಿ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಆದ್ದರಿಂದ ಇಂಧನ ಸಂಬಂಧಗಳನ್ನು ಕಡಿತಗೊಳಿಸುವುದರಿಂದ ಉಕ್ರೇನ್ ಯುದ್ಧವನ್ನು ನಿಲ್ಲಿಸುವಂತೆ ರಶ್ಯದ ಮೇಲೆ ಒತ್ತಡ ಹೇರಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಪಾದಿಸಿದ್ದು ಭಾರತ ಮತ್ತು ರಶ್ಯ ನಡುವಿನ ತೈಲ ವ್ಯಾಪಾರವನ್ನು ಕೊನೆಗೊಳಿಸುವಂತೆ ಆಗ್ರಹಿಸಿದ್ದಾರೆ.
ರಶ್ಯ ತನ್ನ ಆರ್ಥಿಕತೆಗೆ ಭಾರತ ಹಾಗೂ ಕೆಲವು ಸಂದರ್ಭಗಳಲ್ಲಿ ತುರ್ಕಿಯೆ ಮತ್ತು ಚೀನಾವನ್ನು ಆಧಾರವಾಗಿಟ್ಟುಕೊಂಡಿದೆ. ಈ ದೇಶಗಳು ರಶ್ಯದೊಂದಿಗೆ ಇಂಧನ ವ್ಯಾಪಾರವನ್ನು ನಿಲ್ಲಿಸಿದರೆ, ರಶ್ಯವು ಯುದ್ಧವನ್ನು ನಿಲ್ಲಿಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ.
ರಶ್ಯ ಯುದ್ಧವನ್ನು ಮುಂದುವರಿಸದಂತೆ ಖಚಿತಪಡಿಸಿಕೊಳ್ಳಲು ಭಾರತ, ಚೀನಾ ಮತ್ತು ಅಮೆರಿಕಗಳಿಂದ ಸಾಧ್ಯವಿದೆ ಎಂದೂ ಝೆಲೆನ್ಸ್ಕಿ ಹೇಳಿದ್ದಾರೆ.
Next Story




