ಉದ್ವಿಗ್ನತೆಯ ಬಳಿಕ ಸಂಧಾನಕ್ಕೆ ಅವಕಾಶವಿಲ್ಲ: ಮಾತುಕತೆ ನಿರಾಕರಿಸಿದ ಇರಾನ್

ಇಸ್ಮಾಯಿಲ್ ಬಘೈ | Photo Credit : @IRIMFA_EN
ಟೆಹ್ರಾನ್: ಮಾತುಕತೆಗಳ ಪ್ರಯತ್ನಗಳು ನಡೆದಿದ್ದರೂ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರವು ಈಗ ತನ್ನ ರಕ್ಷಣೆಯ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿದೆ. ಪ್ರಸ್ತುತ ಸಂದರ್ಭದಲ್ಲಿ ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಹೇಳಿದ್ದಾರೆ ಎಂದು aljazeera.com ವರದಿ ಮಾಡಿದೆ.
“ಇರಾನ್ ಪ್ರಸ್ತುತ ದುಷ್ಟತನದ ವಿರುದ್ಧ ನಿಂತಿರುವ ಏಕೈಕ ಶಕ್ತಿಯಾಗಿದೆ. ಜಿಯೋನಿಸ್ಟ್ ಆಡಳಿತವು ಯಾವುದೇ ದುರುದ್ದೇಶಪೂರಿತ ಕೃತ್ಯಗಳಿಂದ ದೂರವಿರಬೇಕು. ನಮ್ಮ ಅರಬ್ ಸ್ನೇಹಿತರು ಎಚ್ಚರಿಕೆಯಿಂದ ಯೋಚಿಸಬೇಕು. ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ, ಇರಾನ್ ನ ಖ್ಯಾತಿಗೆ ಮಸಿ ಬಳಿದರೆ ಇತರ ದೇಶಗಳಲ್ಲಿ ಅಪರಾಧಗಳನ್ನು ಮಾಡುವಲ್ಲಿ ದೇಶವು ಯಾವುದೇ ಹಿಂಜರಿಕೆಯನ್ನು ತೋರಿಸುವುದಿಲ್ಲ,” ಇಸ್ಮಾಯಿಲ್ ಬಘೈ ಎಚ್ಚರಿಕೆ ನೀಡಿದಾರೆ.
“ರಾಜತಾಂತ್ರಿ ಮಾರ್ಗಗಳನ್ನು ಅನುಸರಿಸುವುದಾಗಿ ಹೇಳಿಕೊಂಡವರು ಇರಾನ್ ನ ತರ್ಕಕ್ಕೆ ತಲೆಬಾಗದೆ ಕೊನೆಗೆ ಮಿಲಿಟರಿ ಆಯ್ಕೆಯತ್ತ ಮುಖ ಮಾಡಿದ್ದಾರೆ. ಇಂತಹವರ ಮೇಲೆ ಶಾಶ್ವತ ಕಪ್ಪುಚುಕ್ಕೆ ಉಳಿಯುತ್ತದೆ,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ನೆರೆಹೊರೆಯ ದೇಶಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಮೂಲಕ ಉದ್ವಿಗ್ನತೆಯನ್ನು ಹೆಚ್ಚಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಇರಾನ್ ತನ್ನನ್ನು ಮಾನವೀಯ ತತ್ವಗಳಿಗೆ ಬದ್ಧ ರಾಷ್ಟ್ರವೆಂದು ಪರಿಗಣಿಸುತ್ತದೆ. ಪ್ರಾದೇಶಿಕ ಶಾಂತಿಗೆ ಧಕ್ಕೆ ತರುವ ಕ್ರಮಗಳನ್ನು ನಾವು ಒಪ್ಪುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.







