Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಮನ
  5. ಇಂಡಿಯಾ ಬ್ಲಾಕ್ ಎಡವಿದ್ದು ಎಲ್ಲಿ?

ಇಂಡಿಯಾ ಬ್ಲಾಕ್ ಎಡವಿದ್ದು ಎಲ್ಲಿ?

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ16 Nov 2025 7:39 AM IST
share
ಇಂಡಿಯಾ ಬ್ಲಾಕ್ ಎಡವಿದ್ದು ಎಲ್ಲಿ?

ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ಅವರ ಎನ್‌ಡಿಎ ಅಬ್ಬರಕ್ಕೆ ಆರ್‌ಜೆಡಿ ನೇತೃತ್ವದ ಇಂಡಿಯಾ ಬ್ಲಾಕ್ ತರಗೆಲೆಯಂತೆ ಉದುರಿದೆ. ರಾಜ್ಯದ ಎರಡು ತುದಿಗಳಲ್ಲಿ ನಿಂತು ಇಬ್ಬರೂ ಮಿತ್ರರು ಬಾರಿಸಿದ ಹೊಡೆತಗಳನ್ನು ತಡೆಯಲಾಗದೆ ಎದುರಾಳಿ ಪಡೆ ನೆಲಕಚ್ಚಿದೆ. ಭಾರೀ ಸೋಲಿನಿಂದ ಹೊರಬರಲು ಅದಕ್ಕೆ ಎಷ್ಟು ಸಮಯ ಬೇಕಾಗುವುದೋ?

ಒಂದು ಸಂಗತಿಯನ್ನು ಇಲ್ಲಿ ಗಮನಿಸಬೇಕು. ಆರ್‌ಜೆಡಿ ಮತ ಪ್ರಮಾಣ ಜೆಡಿಯು, ಬಿಜೆಪಿಗಿಂತ ಹೆಚ್ಚಿದೆ. ಕಾಂಗ್ರೆಸ್ ಮತ ಎಲ್‌ಜೆಪಿಗಿಂತ ಜಾಸ್ತಿ ಇದೆ. ಅವು ಸೀಟುಗಳಾಗಿ ಪರಿವರ್ತನೆ ಆಗಲಿಲ್ಲ. ಶೇ. 20.08ರಷ್ಟು ಮತ ಬಿಜೆಪಿಗೆ ಬಂದಿದೆ. ಸಿಕ್ಕಿದ್ದು 89 ಸ್ಥಾನ. ಜೆಡಿಯುಗೆ ಶೇ.19.25ರಷ್ಟು ಮತ ಬಿದ್ದಿದೆ. 85 ಸೀಟು ದೊರೆತಿವೆ. ಶೇ. 4.97ರಷ್ಟು ಮತಗಳೊಂದಿಗೆ ಎಲ್‌ಜೆಪಿಗೆ ದಕ್ಕಿದ್ದು 19 ಸ್ಥಾನ. ಶೇ. 23ರಷ್ಟು ಮತದಾರರ ಬೆಂಬಲದ ಆರ್‌ಜೆಡಿಗೆ 25, .ಶೇ 8.71 ರಷ್ಟು ಮತಗಳಿರುವ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ ಆರು ಸ್ಥಾನ.

ಈ ಚುನಾವಣೆ ಹೆಚ್ಚು ಕಡಿಮೆ 2010ರ ಫಲಿತಾಂಶ ನೆನಪಿಸುತ್ತಿದೆ. ಆಗಲೂ ಆರ್‌ಜೆಡಿ ಹೀಗೇ ನೆಲಕಚ್ಚಿತ್ತು. ಮತ ಗಳಿಕೆ ಶೇ. 4ರಷ್ಟು ಕಡಿಮೆ ಇತ್ತು. 22ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಶೇ.8.4 ರಷ್ಟುಮತಗಳೊಂದಿಗೆ ಗೆದ್ದಿದ್ದು ಬರೀ 04 ಸೀಟು. ಆಗ ಜೆಡಿಯುಗೆ ಶೇ. 22.6ರಷ್ಟು ಮತಗಳು ಬಂದಿತ್ತು. 115 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. 91 ಕಡೆ ಗೆದ್ದಿದ್ದ ಬಿಜೆಪಿಗೆ ಶೇ. 16.5 ಮತಗಳು ಬಿದ್ದಿದ್ದವು.

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ 65ಲಕ್ಷ ಹೆಸರನ್ನು ತೆಗೆಯಲಾಯಿತು. ಮೊದಲ ಸಲ ಮತದಾನದ ಹಕ್ಕು ಪಡೆದ 14ಲಕ್ಷ ಹೆಸರನ್ನು ಸೇರ್ಪಡೆ ಮಾಡಲಾಯಿತು. ಹೀಗಾಗಿ, ಒಟ್ಟು ಮತದಾರರ ಸಂಖ್ಯೆ 3.92 ಕೋಟಿ ಪುರುಷರು, 3.5ಕೋಟಿ ಮಹಿಳೆಯರು ಸೇರಿ 7.43ಕೋಟಿ. ನವೆಂಬರ್ 6 ಮತ್ತು 11- ಎರಡು ಹಂತಗಳ ಮತದಾನದಲ್ಲಿ ಹಕ್ಕು ಚಲಾಯಿಸಿದವರು ಒಟ್ಟು ಶೇ. 66.91,ಮಹಿಳೆಯರು ಶೇ 71.6, ಪುರುಷರು ಶೇ. 62.8 . ಮಹಿಳೆಯರ ಮತ ಚಲಾವಣೆ ಪ್ರಮಾಣ ಪುರುಷರಿಗಿಂತ ಶೇ 8.8ಕ್ಕಿಂತ ಹೆಚ್ಚು.

ಎನ್‌ಡಿಎ ಗೆಲುವಿನಲ್ಲಿ ಮತ ಪರಿಷ್ಕರಣೆಯಲ್ಲಿ ಕೈಬಿಡಲಾದ ಹೆಸರುಗಳ ಪಾಲೂ ಇದೆಯೇ? ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಮತದಾನ ಮಾಡಿದ್ದರ ಹಿಂದೆ ಚುನಾವಣೆ ಸಮಯದಲ್ಲಿ ಸುಮಾರು 1.4ಕೋಟಿ ಖಾತೆಗಳಿಗೆ ಜಮಾ ಮಾಡಿದ ತಲಾ 10 ಸಾವಿರ ರೂಪಾಯಿ ಪಾತ್ರವೂ ಇದೆಯೇ ಎಂಬುದು ಭೇದಿಸಲಾಗದ ಪ್ರಶ್ನೆ. ಒಟ್ಟಾರೆ ಚುನಾವಣೆ ಸಮಯದಲ್ಲಿ ಎನ್‌ಡಿಎಗಿದ್ದ ಕೆಲವು ಅನುಕೂಲಗಳು ಮಹಾಘಟಬಂಧನ್‌ಗೆ ಇರಲಿಲ್ಲ ಎನ್ನುವ ಸತ್ಯ ಮೇಲ್ನೋಟಕ್ಕೆ ಕಾಣುವಂತಹದ್ದು.

ಎನ್‌ಡಿಎ ಗೆಲುವಿಗೆ ಅನೇಕ ಕಾರಣಗಳಿವೆ. ಬಹು ಮುಖ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದು; ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಮತಗಳು ಮಿತ್ರ ಪಕ್ಷಗಳಿಗೆ ವರ್ಗಾವಣೆ ಆಗಿದ್ದು; ಬಿಜೆಪಿಯ ಮೇಲ್ವರ್ಗದ ಮತಗಳ ಜತೆ ನಿತೀಶ್ ಅವರನ್ನು ಸತತವಾಗಿ ಬೆಂಬಲಿಸಿಕೊಂಡು ಬಂದಿರುವ ಅತೀ ಹಿಂದುಳಿದ ಜಾತಿಗಳು, ಮಹಾ ದಲಿತರು ಹಾಗೂ ಪಸ್ಮಂದ ಮುಸ್ಲಿಮರು ಒಗ್ಗೂಡಿರುವುದು?

ಈ ವಿಧಾನಸಭೆ ಚುನಾವಣೆ ಫಲಿತಾಂಶ ಇಷ್ಟೊಂದು ಏರು- ಪೇರಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಮತಗಟ್ಟೆ ಸಮೀಕ್ಷೆಗಳೂ ಅಂದಾಜಿಸಿರಲಿಲ್ಲ. ಈ ಭಾರೀ ಗೆಲುವಿನ ‘ಕ್ರೆಡಿಟ್’ ನಿತೀಶ್‌ಗೇ ಸಲ್ಲಬೇಕು. ಅಲ್ಲದೆ, ಇಂಡಿಯಾ ಬ್ಲಾಕ್ ಸೋಲಿಗೂ ಒಂದಲ್ಲ, ಎರಡಲ್ಲ ಹತ್ತಾರು ಕಾರಣಗಳುಂಟು. ಅತೀ ಬಲವಾದ ಕಾರಣ ಕಾಂಗ್ರೆಸ್- ಆರ್‌ಜೆಡಿ ನಡುವೆ ತಾಳಮೇಳ ಇಲ್ಲದೆ ಇದ್ದುದು. ಟಿಕೆಟ್ ಹಂಚಿಕೆಗೆ ಕೊನೆ ಗಳಿಗೆವರೆಗೆ ನಡೆದ ಚೌಕಾಸಿ. ‘ಫ್ರೆಂಡ್ಲಿ ಫೈಟ್’ ಹೆಸರಿನಲ್ಲಿ ಕಿತ್ತಾಡಿದ್ದು. ಜಾತಿ ಸಮೀಕರಣ ಮಾಡಿ ನೆಲೆ ವಿಸ್ತರಿಸಿಕೊಳ್ಳದೆ, ಮುಸ್ಲಿಮ್- ಯಾದವರನ್ನೇ ನಂಬಿಕೊಂಡು, ‘ಅಪ್ಪ ಹಾಕಿದ ಆಲದ ಮರಕ್ಕೆ ನೇಣು’ ಹಾಕಿಕೊಂಡಿದ್ದು. ಭ್ರಷ್ಟಾಚಾರ ಹಾಗೂ ಜಂಗಲ್ ರಾಜ್ ಕುರಿತು ಮಾಡಿದ ಆರೋಪಗಳಿಗೆ ತಕ್ಕ ಉತ್ತರ ಕೊಡದೆ ಹೋಗಿದ್ದು... ಬಿಹಾರದಲ್ಲಿ ಆರಂಭದಲ್ಲಿ ದೊಡ್ಡ ಯಾತ್ರೆ ನಡೆಸಿದ ರಾಹುಲ್ ಗಾಂಧಿ ಆನಂತರ ಕೊಂಚ ತಣ್ಣಗಾದರು. ತೇಜಸ್ವಿ ಏಕಾಂಗಿಯಾದರು. ಆರ್‌ಜೆಡಿ ನಾಯಕರ ಅತಿಯಾದ ಆತ್ಮವಿಶ್ವಾಸ ಅವರಿಗೆ ಮುಳುವಾಯಿತು. ಸರಿಯಾಗಿ ಚುನಾವಣಾ ತಂತ್ರ ರೂಪಿಸಿ, ಜಾರಿಗೊಳಿಸುವಲ್ಲಿ ಈ ಇಬ್ಬರು ನಾಯಕರು ಸೋತರು. ಅಷ್ಟೇ ಅಲ್ಲ, ಇನ್ನು ಬೇಕಾದಷ್ಟಿದೆ.

2010 ಮತ್ತು 2015ರ ವಿಧಾನಸಭೆ ಚುನಾವಣೆ ಸಮೀಕ್ಷೆಗಾಗಿ ನಾನು ಬಿಹಾರದಾದ್ಯಂತ ಪ್ರವಾಸ ಮಾಡಿದ್ದೆ. 2015ರ ಅಕ್ಟೋಬರ್ ತಿಂಗಳಲ್ಲಿ ಸುಮಾರು ಒಂದು ತಿಂಗಳು ಇಡೀ ರಾಜ್ಯದಲ್ಲಿ ಓಡಾಡಿದ್ದೆ. ಆ ಸಮಯದಲ್ಲಿ ನಿತೀಶ್ ಅವರನ್ನು ‘ಅಜಾತಶತ್ರು’ ಎಂದು ಬರೆದಿದ್ದೆ. ಅಷ್ಟು ಹೊತ್ತಿಗೆ ಅವರು ಬಿಹಾರದಲ್ಲಿ ಅಧಿಕಾರ ಹಿಡಿದು 10 ವರ್ಷವಾಗಿತ್ತು. ಮೂರನೇ ಸಲ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದರು. ಅವರೊಬ್ಬ ಸೌಮ್ಯ ಸ್ವಭಾವದ ನಾಯಕ. ಮಾತಾಡಿದ್ದು ಕಡಿಮೆ. ಮಾಡಿದ ಕೆಲಸ ಹೆಚ್ಚು. ಅಲ್ಲಿನ ಜನ ಅವರನ್ನು ಅಭಿಮಾನದಿಂದ ನೋಡುತ್ತಿದ್ದರು. ರಾಜಕೀಯವಾಗಿ ವಿರೋಧಿಸುವ ಜನರೂ ಲಘುವಾಗಿ ಮಾತನಾಡುತ್ತಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬಂದು 10 ವರ್ಷವಾಗಿದೆ. ಬಹುಶಃ ಈಗಲೂ ಅವರನ್ನು ಜನ ಅತ್ಯಂತ ಗೌರವದಿಂದ ಕಾಣುತ್ತಾರೆ. ಈ ಚುನಾವಣೆಯಲ್ಲೂ ಅಷ್ಟೇ, ಹೆಚ್ಚು ಮಾತನಾಡಲಿಲ್ಲ.

ನಿತೀಶ್ ಆಗ ಎನ್‌ಡಿಎ ಜತೆಗಿರಲಿಲ್ಲ. ಲಾಲು ಅವರ ಆರ್‌ಜೆಡಿ ಜತೆ ಕೈ ಜೋಡಿಸಿದ್ದರು. 2013ರಲ್ಲಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿತ್ತು. ಅದನ್ನು ವಿರೋಧಿಸಿ ನಿತೀಶ್ ಎನ್‌ಡಿಎ ತೊರೆದಿದ್ದರು. ಸ್ವಲ್ಪ ಸಮಯದ ಬಳಿಕ ಅವರು ವಾಪಸ್ ಹೋದರು. ಆ ಮಾತು ಬೇರೆ. ಆಗಲೂ, 1990ರಿಂದ 15 ವರ್ಷ ಬಿಹಾರದಲ್ಲಿ ಜಂಗಲ್‌ರಾಜ್ ಇತ್ತು ಎಂದೇ ಪ್ರಚಾರ ಮಾಡಲಾಗಿತ್ತು. ಈಗಲೂ ಅದೇ ಪ್ರಚಾರ. ಅದೇ ಆರೋಪ. ಅದಕ್ಕಾಗಿ ಭಾರೀ ಬೆಲೆ ತೆತ್ತಿದೆ.

ಲಾಲು ಹಾಗೂ ಅವರ ಪತ್ನಿ ರಾಬ್ಡಿ ದೇವಿ ಆಡಳಿತದಲ್ಲಿ ನಡೆದ ಅಪರಾಧಗಳನ್ನು ಕುರಿತೇ ಎದುರಾಳಿಗಳು ಪ್ರಸ್ತಾಪಿಸಿದ್ದಾರೆ. ಮಹಾಘಟಬಂಧನ್ ಗೆದ್ದರೆ ಜಂಗಲ್‌ರಾಜ್ ಮತ್ತೆ ತಲೆ ಎತ್ತಲಿದೆ ಎಂದು ಪ್ರಚಾರ ಮಾಡಿದ್ದಾರೆ. ಆರ್‌ಜೆಡಿ ಸರಕಾರದಲ್ಲಿ ಕೊಲೆ, ಸುಲಿಗೆ ಹಾಗೂ ಗೂಂಡಾಗಿರಿ ಮಿತಿ ಮೀರಿತ್ತು. ಯಾದವರು ಅತೀರೇಕದಿಂದ ವರ್ತಿಸುತ್ತಿದ್ದರು. ಸಣ್ಣಪುಟ್ಟ ಜಾತಿಗಳ ಮೇಲೆ ಸವಾರಿ ಮಾಡಿದ್ದರು. ದಬ್ಬಾಳಿಕೆ ನಡೆಸಿದ್ದರು. ಈಗಲೂ ಅದನ್ನು ಅಲ್ಲಿನ ಜನ ಮರೆತಿಲ್ಲ.ಬಿಹಾರವೆಂದರೆ ಹೊರಗಿನವರು ಭಯ ಬೀಳುತ್ತಿದ್ದರು. ಅಲ್ಲಿ ಎಡಬಿಡದೆ ಪ್ರಚಾರ ನಡೆಸಿದ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಈ ವಿಷಯವನ್ನೇ ಕೆದಕಿ, ಕೆದಕಿ ಜನರ ಮುಂದಿಟ್ಟರು.

ಲಾಲು ಹಲವು ತಪ್ಪು ಮಾಡಿದ್ದಾರೆ. ಬಿಹಾರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಿತ್ತು. ಆದರೆ, ‘ಜನರಿಗೆ ಅಭಿವೃದ್ಧಿಗಿಂತ ಘನತೆ ಬದುಕು ಮುಖ್ಯ’ ಎಂದು ಬೊಗಳೆ ಬಿಟ್ಟರು. ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಯಂತೆ ನುಣುಪು ಮಾಡುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟರು. ರಸ್ತೆಗಳ ಮಾತು ಬಿಡಿ, ಗ್ರಾಮೀಣರಿಗೆ ಕನಿಷ್ಠ ಶೌಚಾಲಯವನ್ನೂ ಕಟ್ಟಿಸಿಕೊಡಲಿಲ್ಲ. ಜನ ರಸ್ತೆಗಳ ಇಕ್ಕೆಲಗಳಲ್ಲೇ ಬಹಿರ್ದೆಸೆಗೆ ಕುಳಿತುಕೊಳ್ಳುತ್ತಿದ್ದರು. ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಏನೇನೂ ಮಾಡಲಿಲ್ಲ. ಆ ಹಿಂದುಳಿದ ರಾಜ್ಯವನ್ನು ಐವತ್ತು ವರ್ಷ ಹಿಂದಕ್ಕೇ ಒಯ್ದರು.

ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಹಾಗೂ ಹಿಂದುಳಿದ ವರ್ಗಗಳ ನಾಯಕ ಕರ್ಪೂರಿ ಠಾಕೂರ್ ಅವರ ಪರಂಪರೆಯಲ್ಲಿ ಬೆಳೆದು ಬಂದ ಲಾಲು ಬಿಹಾರದ ದೇವರಾಜ ಅರಸು ಅವರಾಗಬಹುದಿತ್ತು. ಎಲ್ಲ ಹಿಂದುಳಿದ, ಅತೀ ಹಿಂದುಳಿದ, ದಲಿತ ಜಾತಿಗಳು ಮತ್ತು ಮುಸ್ಲಿಮರನ್ನು ಒಟ್ಟಿಗೆ ಕರೆದೊಯ್ಯುವ ಮೂಲಕ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲು ಸಾಕಷ್ಟು ಅವಕಾಶವಿತ್ತು. ಹಾಗೆ ಮಾಡಿದ್ದರೆ ಈಗಿನ ಸ್ಥಿತಿ ಬರುತ್ತಿರಲಿಲ್ಲ. ‘ಫ್ಯೂಡಲ್’ (ಯಜಮಾನಿಕೆ ಪ್ರವೃತ್ತಿ) ಆಗಿ ವರ್ತಿಸಿದರು. ಇದು ಬೇರೆ ಜಾತಿಗಳಿಗೆ ಸಹ್ಯ ಆಗಲಿಲ್ಲ. ಹೀಗಾಗಿ, ಅವರು ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಕಡೆ ಮುಖ ಮಾಡಿದರು.

ನಿತೀಶ್ ಕುಮಾರ್ ಮಾಡಿರುವ ಅಭಿವೃದ್ಧಿ ಕೆಲಸಗಳು;

ಮಹಿಳಾ ಪರವಾದ ಯೋಜನೆಗಳು ಅವರ ಕೈ ಹಿಡಿದಿವೆ. 2007ರಿಂದಲೇ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕಿಯರಿಗೆ ಉಚಿತ ಸೈಕಲ್ ವಿತರಿಸುತ್ತಿದ್ದಾರೆ. ಇದು ಈಗಲೂ ಮುಂದುವರಿದಿದೆ. ಪಂಚಾಯತ್‌ಗಳಲ್ಲಿ ಶೇ.50 ರಷ್ಟು ಮಹಿಳೆಯರಿಗೆ ಮೀಸಲಾತಿ ಜಾರಿಗೊಳಿಸಿದ್ದಾರೆ. ಸಣ್ಣಪುಟ್ಟ ಗ್ರಾಮಗಳಿಗೂ ಉತ್ತಮ ರಸ್ತೆಗಳನ್ನು ಮಾಡಿಸಿದ್ದಾರೆ. ವಿದ್ಯುತ್ ವ್ಯವಸ್ಥೆ ಸುಧಾರಿಸಿದ್ದಾರೆ.

ಬೇಕಾದಷ್ಟು ಮೇಲ್ಸೇತುವೆ ನಿರ್ಮಿಸಿದ್ದಾರೆ. ಅಪರಾಧ ನಿಯಂತ್ರಣಕ್ಕೆ ಗಮನ ಕೊಟ್ಟಿದ್ದಾರೆ. ಕಾನೂನು- ಸುವ್ಯವಸ್ಥೆ ಕಾಪಾಡಿದ್ದಾರೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಅವರು ಸ್ವಜನ ಪಕ್ಷಪಾತ ಮಾಡಿಲ್ಲ. ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿಲ್ಲ. ಇದುವರೆಗೆ ಕಳಂಕರಹಿತ ಮುಖ್ಯಮಂತ್ರಿ ಆಗಿದ್ದಾರೆ. ಮುಂದೆಯೂ ಹೀಗೆ ಇರುತ್ತಾರೊ, ಬದಲಾಗುತ್ತಾರೊ ಗೊತ್ತಿಲ್ಲ. ಬಿಹಾರದ ಚುನಾವಣೆ ಮುಗಿದಿದೆ. ನಿತೀಶ್ ಪುನಃ ಮುಖ್ಯಮಂತ್ರಿ ಆಗುವರೇ? ಎನ್ನುವ ಚರ್ಚೆ ಈಗ ಬಿರುಸಾಗಿದೆ.

share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X