Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಮರಾಠಿ ಸಾಹಿತ್ಯದಲ್ಲೊಬ್ಬ ಬಂಡುಕೋರ...

ಮರಾಠಿ ಸಾಹಿತ್ಯದಲ್ಲೊಬ್ಬ ಬಂಡುಕೋರ ಅಣ್ಣಾಭಾವು ಸಾಠೆ

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ11 Aug 2026 12:19 PM IST
share
ಮರಾಠಿ ಸಾಹಿತ್ಯದಲ್ಲೊಬ್ಬ ಬಂಡುಕೋರ ಅಣ್ಣಾಭಾವು ಸಾಠೆ

ಅಣ್ಣಾಭಾವು ಸಾಠೆಯವರು ಬರವಣಿಗೆ ಆರಂಭಿಸುವ ಮುನ್ನ ಮರಾಠಿ ಸಾಹಿತ್ಯವು ಮೇಲ್ಜಾತಿ-ಮೇಲ್ವರ್ಗಗಳ ಅನುಭವಗಳಿಗೆ ಮಾತ್ರ ಸೀಮಿತವಾಗಿತ್ತು. 1961ರಲ್ಲಿ ಬರೆದ ‘ಫಕೀರ’ ಕಾದಂಬರಿಯನ್ನು ಮೊದಲುಗೊಂಡು ನಲುವತ್ತಕ್ಕಿಂತ ಹೆಚ್ಚು ಕಾದಂಬರಿಗಳನ್ನು ಬರೆಯುತ್ತಾರೆ. ತಮಾಷಾ ಕಲೆಯಲ್ಲಿ ಕಲಾವಿದೆಯರು ಎದುರಿಸುವ ಶೋಷಣೆಯ ಬಗ್ಗೆ ಬರೆದ ಮೊದಲ ಕಾದಂಬರಿ ‘ವೈಜಯಂತಿ’, ಮುಂಬೈನ ಕಾಮಾಟಿಪುರದ ವೇಶ್ಯಾವಾಟಿಕೆಯನ್ನು ಚಿತ್ರಿಸುವ ‘ಚಿತ್ರಾ’, ಮಹಿಳಾ ಕಾರ್ಮಿಕ ಚಳವಳಿಯನ್ನು ಒಳಗೊಂಡ ‘ಚಂದನ್’ ಹೀಗೆ ಮೊದಲಬಾರಿಗೆ ಮರಾಠಿ ಸಾಹಿತ್ಯಕ್ಕೆ ಪ್ರವೇಶವನ್ನೇ ಪಡೆಯದೆ ಹೊರಗಿದ್ದ ಎಷ್ಟೋ ದಲಿತ, ಆದಿವಾಸಿ, ಬುಡಕಟ್ಟು ಅಂಚಿನ ಸಮುದಾಯಗಳ ಅನುಭವ ಲೋಕವನ್ನು ಒಳಕ್ಕೆ ಕೈಹಿಡಿದು ಕರೆತರುತ್ತಾರೆ. ಈ ಅರ್ಥದಲ್ಲಿ ಸಾಠೆಯವರು ಮರಾಠಿ ಸಾಹಿತ್ಯದಲ್ಲಿ ಒಬ್ಬ ಬಂಡುಕೋರ.

ಆನಂದ ಪಟವರ್ಧನ್ ಅವರು ನಿರ್ದೇಶಿಸಿದ ‘ಜೈಭೀಮ್ ಕಾಮ್ರೇಡ್’ (2011) ಡಾಕ್ಯುಮೆಂಟರಿಯಲ್ಲಿ ಮುಂಬೈನ ಕಭೀರ್ ಕಲಾಮಂಚ್‌ನ ಶೀತಲ್ ಸಾಠೆ ಅವರ ಹೆಸರು ಹೆಚ್ಚು ಜನಪ್ರಿಯವಾಯಿತು. ಶೀತಲ್ ಸಾಠೆ ಮತ್ತು ಅವರ ಗಂಡ ಸಚಿನ್ ಮಾಲೆ ಅಂಬೇಡ್ಕರ್ ಪರ ಕ್ರಾಂತಿಗೀತೆಗಳನ್ನು ಹಾಡಿದ್ದಕ್ಕಾಗಿ ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಲಾಯಿತು. 2013ರ ಎಪ್ರಿಲ್ 2 ರಂದು ಮಹಾರಾಷ್ಟ್ರದ ವಿಧಾನಸಭೆಯ ಎದುರು ಸತ್ಯಾಗ್ರಹ ನಡೆಸಿ ಸ್ವಯಂಪ್ರೇರಿತರಾಗಿ ಪೊಲೀಸರಿಗೆ ಶರಣಾಗಿದ್ದರು. ನಂತರ 2013ರ ಜೂನ್ 27ರಂದು ಗರ್ಭಿಣಿ ಎನ್ನುವ ಕಾರಣಕ್ಕೆ ಬಾಂಬೆ ಹೈಕೋರ್ಟ್ ಮಾನವೀಯ ನೆಲೆಯಲ್ಲಿ ಜಾಮೀನಿನ ಮೇಲೆ ಶೀತಲ್ ಸಾಠೆಯವರನ್ನು ಬಿಡುಗಡೆ ಮಾಡಿತ್ತು.

ಇದೇ ಸಾಠೆ ಕುಲದ ಅಣ್ಣಾಭಾವು ಸಾಠೆ 1947 ಅಕ್ಟೋಬರ್ 10 ರಂದು ‘ಅಮೆಲ್ನರ್ಚ ಅಮರ್ ಹುತಾತ್ಮ’ ಎಂಬ ಕ್ರಾಂತಿಗೀತೆಯನ್ನು ಹಾಡಿ ಅಂದಿನ ಮಹಾರಾಷ್ಟ್ರದ ಮೊರಾರ್ಜಿ ದೇಸಾಯಿ ಅವರ ಕಾಂಗ್ರೆಸ್ ಸರಕಾರದಿಂದ ಬಂಧಿತರಾಗಿದ್ದರು. ಸಾಠೆ ಅವರು ಜೈಲಿನಲ್ಲಿಯೇ ‘‘ಮೊರಾರ್ಜಿ ರಾಜ್ಯದಲ್ಲಿ ಹಾಡುವುದನ್ನು ನಿಷೇಧಿಸಲಾಗಿದೆ’’ ಎಂದು ಘರ್ಜಿಸಿದ್ದರು. ಇಬ್ಬರೂ ಮಹಾರಾಷ್ಟ್ರದ ಸಾಠೆ ಎಂಬ ದಲಿತ ಕುಲದಲ್ಲಿ ಹುಟ್ಟಿದವರು. ಇಬ್ಬರೂ ಕ್ರಾಂತಿಗೀತೆ ಹಾಡಿದ್ದಕ್ಕೆ ಪ್ರಭುತ್ವದಿಂದ ಜೈಲುಶಿಕ್ಷೆ ಅನುಭವಿಸಿದವರು. ಒಬ್ಬರು ಸ್ವಾತಂತ್ರ್ಯ ಬಂದ ಎರಡೇ ತಿಂಗಳಲ್ಲಿ ಬಂಧಿತರಾದರೆ, ಮತ್ತೊಬ್ಬರು ಸ್ವಾತಂತ್ರ್ಯ ಬಂದು 66 ವರ್ಷದ ನಂತರ ಬಂಧಿತರಾಗಿದ್ದಾರೆ. ಅಂದರೆ ಇದು ದಲಿತ, ದಮನಿತರ ಸಮಸ್ಯೆಗಳು ಇಂದಿಗೂ ಮುಂದುವರಿದಿವೆ ಮತ್ತು ದಮನಿತರನ್ನು ಎಚ್ಚರಗೊಳಿಸುವ ಕ್ರಾಂತಿಗೀತೆ ಹಾಡುವವರು ಇಂದಿಗೂ ಬಂಧನದ ಭೀತಿಯಿಂದ ಮುಕ್ತರಾಗಿಲ್ಲ ಎನ್ನುವುದನ್ನು ಸಂಕೇತಿಸುತ್ತಿದೆ.

ಇದೇ ಆಗಸ್ಟ್ ತಿಂಗಳ ಒಂದನೇ ತಾರೀಕು ಕಲಬುರಗಿಯಲ್ಲಿ ಅಣ್ಣಾಭಾವು ಸಾಠೆ ಅವರ 106ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಅಣ್ಣಾಭಾವು ಸಾಠೆ ಅವರ ಬಗ್ಗೆ ನಾನು ಮಾತನಾಡಿದೆ. ಈ ತನಕ ನನಗೆ ಅಣ್ಣಾಭಾವು ಸಾಠೆಯವರ ಬಗ್ಗೆ ಮೇಲ್ಪದರದ ತಿಳಿವಳಿಕೆ ಇತ್ತು. ಹಲವು ದಿನಗಳ ಕಾಲ ಸಾಠೆಯವರ ಬಗ್ಗೆ ನಡೆದ ಅಧ್ಯಯನ ಸಂಶೋಧನೆ, ಸ್ವತಃ ಸಾಠೆಯವರು ಬರೆದ ಕಾದಂಬರಿ, ಕಥೆಗಳ ಬಗ್ಗೆ ಅಧ್ಯಯನ ಮಾಡಿದಾಗ ಹೊಳೆದದ್ದು ಅಣ್ಣಾಭಾವು ಸಾಠೆ ಅವರು ಮರಾಠಿ ಸಾಹಿತ್ಯದ ಮಡಿವಂತಿಕೆಯನ್ನು ಛಿದ್ರಗೊಳಿಸಿದ ಬಂಡುಕೋರ ಅನ್ನಿಸಿತು. ಅಣ್ಣಾಭಾವು ಸಾಠೆ ಅವರು ‘ನಾನು ಬದುಕುವ, ನೋಡುವ ಮತ್ತು ಅನುಭವಿಸುವ ಬದುಕ್ಕನ್ನೇ ನಾನು ಬರೆಯುವೆ. ನಾನು ಫ್ಯಾಂಟಸಿಯ ಕಾಲ್ಪನಿಕ ಜಗತ್ತಲ್ಲಿ ರೆಕ್ಕೆಗಳನ್ನು ಕಟ್ಟಿಕೊಂಡು ಹಾರುವ ಪಕ್ಷಿಯಲ್ಲ, ನಾನೊಂದು ಕಪ್ಪೆ. ನೆಲವನ್ನು ಅಪ್ಪಿಕೊಂಡಿರುವೆ... ನನ್ನ ಎಲ್ಲಾ ಪಾತ್ರಗಳು ಜೀವಂತವಾಗಿವೆ’ ಎಂದು ಸಾಠೆಯವರೇ ತಮ್ಮ ಬರಹದ ಬಗ್ಗೆ ಬರೆಯುತ್ತಾರೆ.

ಮಿಲಿಂದ್ ಅವಾಡ ಅವರ ‘ದ ಲೈಫ್ ಆಂಡ್ ವರ್ಕ್ ಆಫ್ ಅಣ್ಣಾಭಾವು ಸಾಠೆ: ಎ ಮಾರ್ಕಿಸ್ಟ್ ಅಂಬೇಡ್ಕರೈಟ್ ಮೊಸಾಯಿಕ್’ ಕೃತಿಗೆ ಮುನ್ನುಡಿ ಬರೆಯುತ್ತಾ, ಗೋಪಾಲಗುರು ಅವರು ‘ಅಣ್ಣಾಭಾವು 20ನೇ ಶತಮಾನದ ಒಬ್ಬ ಸಾವಯವ ಬುದ್ಧಿಜೀವಿ, ಅವರು ತಮ್ಮ ಜಾತಿ-ವರ್ಗವನ್ನು ಮಾತ್ರವಲ್ಲದೆ ವಿಶಾಲ ಜನಸಮೂಹವನ್ನೂ ತಮ್ಮೊಂದಿಗೆ ಕರೆದೊಯ್ಯುವ ರಾಜಕೀಯ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೊಂದಿದ್ದರು. ಅವರೊಬ್ಬ ಪಬ್ಲಿಕ್ ಇಂಟಲೆಕ್ಚವಲ್’ ಎನ್ನುತ್ತಾರೆ. ಹೀಗಿದ್ದೂ ಅಣ್ಣಾ ಭಾವು ಸಾಠೆಯವರ ಬಗ್ಗೆ ಭಾರತೀಯ ಸಾಹಿತ್ಯಲೋಕ ನಿರ್ಲಕ್ಷಿಸಿದೆ. ಜನಪ್ರಿಯ ಐಕಾನ್ ಆಗಿ ಮಹಾರಾಷ್ಟ್ರದಲ್ಲಿ ಪಾಪ್ಯುಲರ್ ಆಗಿರುವ ಅಣ್ಣಾಭಾವು ಸಾಠೆಯವರು ಮರಾಠಿ ಸಾಹಿತ್ಯಕ್ಷೇತ್ರದಲ್ಲಿ ಕಡೆಗಣಿಸಲ್ಪಟ್ಟಿದ್ದಾರೆ.

ಮರಾಠಿ ಸಾಹಿತ್ಯದ ವಿಮರ್ಶಾಲೋಕವು ಸಾಠೆ ಅವರನ್ನು ಗಂಭೀರವಾಗಿ ಚರ್ಚಿಸಿಲ್ಲ. ಒಂದುಕಡೆ ಮಾಂಗ್ ಸಮುದಾಯವಾದ ಕಾರಣ ಮಹಾರ್‌ಗಳು ನಿರ್ಲಕ್ಷಿಸಿದರೆ, ಮಾರ್ಕ್ಸ್‌ವಾದಿಯಾದ ಕಾರಣ ಅಂಬೇಡ್ಕರ್‌ವಾದಿಗಳು ಕಡೆಗಣಿಸಿದ್ದಾರೆ. ಹೀಗೆ ಬಹುತೇಕ ಅವಗಣನೆಗೆ ಒಳಗಾದ ಅಣ್ಣಾಭಾವು ಸಾಠೆಯವರ ಬದುಕು ಮತ್ತು ಬರಹ ನಿಗಿನಿಗಿ ಕೆಂಡದಂತೆ ಈಗಲೂ ಜಳವನ್ನು ತಾಕಿಸುತ್ತದೆ. ಸಾಹಿತ್ಯಲೋಕದಲ್ಲಿ ಬದುಕಿಗಾಗಿ ಕಲೆಯೋ, ಕಲೆಗಾಗಿ ಬದುಕೋ ಎನ್ನುವ ಚರ್ಚೆಯೊಂದು ತೀವ್ರವಾಗಿದ್ದ ಕಾಲದಲ್ಲಿ ಸಾಠೆಯವರು ‘ಬದುಕಿಗಾಗಿ ಕಲೆ’ ಎನ್ನುವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದರು.

ಈಗಿನ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿರುವ ಕಾಂಸೆಗಾಂವ್‌ನಿಂದ ಪೂರ್ವಕ್ಕೆ ಮೂರು ಮೈಲು ದೂರದಲ್ಲಿರುವ, ಇಂದಿನ ಸಾಂಗ್ಲಿ ಜಿಲ್ಲೆಯ (ಹಿಂದೆ ದಕ್ಷಿಣ ಸತಾರ ಜಿಲ್ಲೆ) ವಾಲ್ವಾ ತಾಲೂಕಿನಲ್ಲಿರುವ ವಾಟೆಗಾಂವ್ ಎಂಬ ಹಳ್ಳಿಯಲ್ಲಿ ಅಣ್ಣಾಭಾವು ಸಾಠೆ ಅವರು 1920ರ ಆಗಸ್ಟ್ 1ರಂದು ಮಾಂಗ್‌ವಾಡದ ಮಾಂಗ್ ಸಮುದಾಯದಲ್ಲಿ ಜನಿಸುತ್ತಾರೆ. ಮುತ್ತಜ್ಜ ರಘೋಭಾ (1818-1872), ರಘೋಬಾರ ಮಗ ಸಿಧೋಜಿ, ಇವರಿಗಿದ್ದ ಭೌ ಅಥವಾ ಭಾವು ಎನ್ನುವ ಮಗ ಮತ್ತು ಅವರ ಹೆಂಡತಿ ವಾಲುಬಾಯಿ ಅವರ ಎರಡನೇ ಮಗನೇ ತುಕಾರಾಮ. ವಾಲೂಬಾಯಿಯ ತಂದೆ ಅಣ್ಣಾ ಕಾಮ ಮಾಂಗ್, ಹೀಗೆ ಮುಂದೆ ತುಕಾರಾಮರೇ ಅಜ್ಜನ ಅಣ್ಣಾ, ತಂದೆಯ ಭಾವು ಎರಡು ಹೆಸರುಗಳು ಸೇರಿಸಿಕೊಂಡು ‘ಅಣ್ಣಾಭಾವು’ ಎಂದು ಜನಪ್ರಿಯರಾಗುತ್ತಾರೆ.

‘ಮಾಂಗ್’ ಸಮುದಾಯ ಬ್ರಿಟಿಷ್ ಆಡಳಿತದಲ್ಲಿ ‘ಕ್ರಿಮಿನಲ್ ಟ್ರೈಬ್’ ಆದ ಕಾರಣ ಈ ಸಮುದಾಯದ ಬದುಕು ಬಹಳ ಕಠಿಣವಾಗಿತ್ತು. ಬಡತನದ ಬೇಗೆಯಲ್ಲಿ ಬೇಯುತ್ತಿತ್ತು. ತುಕಾರಾಮ ಚಿಕ್ಕವನಾಗಿದ್ದಾಗ ಈ ಹುಡುಗನನ್ನು ಪ್ರಭಾವಿಸಿದ್ದು ಮಾವನಾದ ಫಕೀರ. ಅವರು ಬ್ರಿಟಿಷ್ ಸರಕಾರದ ವಿರುದ್ಧ ದಂಗೆ ಎದ್ದು, ಬ್ರಿಟಿಷರು ಸಂಗ್ರಹಿಸಿದ ಸಂಪತ್ತು ಧವಸ ಧಾನ್ಯಗಳನ್ನು ಲೂಟಿ ಮಾಡಿ ಬಡ ಬಗ್ಗರಿಗೆ ಹಂಚುತ್ತಿದ್ದರು. ಮುಂದೆ ಇದೇ ಫಕೀರರ ಬದುಕನ್ನು ಆಧರಿಸಿ ಅಣ್ಣಾಭಾವು ಸಾಠೆಯವರು ಕಾದಂಬರಿ ಬರೆದರು. ಇದುವೆ ಅಣ್ಣಾಭಾವು ಸಾಠೆಯವರನ್ನು ಚಿರಸ್ಥಾಯಿಯಾಗಿಸಿದ ಶ್ರೇಷ್ಠ ಕಾದಂಬರಿ ‘ಫಕೀರ’. ಈ ಕಾದಂಬರಿಯನ್ನು ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಣ್ಣಾಭಾವು ಬಾಲ್ಯದಲ್ಲಿ ಶಿಕ್ಷಣ ಪಡೆದ ಬಗ್ಗೆ ಸರಿಯಾದ ದಾಖಲೆಗಳಿಲ್ಲ. ಬಾಲ್ಯದಲ್ಲಿ ಅಪ್ಪನ ಜತೆ ಕುಟುಂಬದ ಜಾನಪದ ಪ್ರಕಾರವಾದ ತಮಾಷಾ ಕಲೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಭೀಕರ ಬರಗಾಲದ ಪರಿಣಾಮ ತಂದೆ ಮುಂಬೈ ನಗರಕ್ಕೆ ಹೋಗಿ ಮನೆ ಮುಂದಣ ತೋಟಗಾರಿಕೆ ಕೆಲಸ ಮಾಡುತ್ತಾರೆ. ಆನಂತರ ಕುಟುಂಬ ಮುಂಬೈಗೆ ಸ್ಥಳಾಂತರವಾಗುತ್ತದೆ. ಬದುಕಿಗಾಗಿ ಅಣ್ಣಾಭಾವು ಮುಂಬೈನ ಕಲ್ಯಾಣ್ ಮತ್ತು ಬೈಕುಲಾ ಪ್ರದೇಶಗಳಲ್ಲಿ ಹಲವು ಕೆಲಸಗಳನ್ನು ಮಾಡುತ್ತಾರೆ. ಬಟ್ಟೆ ಅಂಗಡಿಯ ಬಟ್ಟೆ ಮಾರುವವನಾಗಿ, ಹೋಟೆಲ್ ಮಾಣಿಯಾಗಿ, ಸಿನೆಮಾ ಥಿಯೇಟರ್ ಡೋರ್ ಕೀಪರ್ ಆಗಿ, ಗಿರಣಿಯ ಕಾರ್ಮಿಕನಾಗಿ ಹಲವು ಕೆಲಸಗಳಲ್ಲಿ ತೊಡಗುತ್ತಾರೆ. ಸಿನೆಮಾ ನೋಡುತ್ತಾ ಅನೌಪಚಾರಿಕ ಶಿಕ್ಷಣ ಪಡೆಯುತ್ತಾರೆ. ಇದೇ ಸಂದರ್ಭಕ್ಕೆ ಮಾರ್ಕ್ಸ್‌ವಾದಿ ಚಳವಳಿಗಳ ಸಂಪರ್ಕಕ್ಕೆ ಬರುತ್ತಾರೆ. ಗೋಡೆಗಳಿಗೆ ಬರಹ ಬರೆಯುವ ಅನಿವಾರ್ಯತೆಗೆ ಅಕ್ಷರ ಕಲಿಯುತ್ತಾರೆ. ಪೋಸ್ಟರ್ ಅಂಟಿಸುವುದರಿಂದ ಮೊದಲುಗೊಂಡು ಎಲ್ಲಾ ಬಗೆಯ ಕೆಲಸಗಳನ್ನು ಮಾಡುತ್ತಲೇ ಅಣ್ಣಾಭಾವು ಬದುಕನ್ನು ಕಟ್ಟಿಕೊಳ್ಳುತ್ತಾರೆ. ಹೀಗಿರುವಾಗ ಮತ್ತೆ ಕುಟುಂಬ ಮುಂಬೈನಿಂದ ಹಳ್ಳಿಗೆ ಮರಳುತ್ತದೆ. ಮತ್ತದೇ ಕುಟುಂಬದ ಕಲೆಯಾಗಿದ್ದ ‘ತಮಾಷಾ’ ಕಲೆಯಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಜನಪದ ಹಾಡಿಕೆಯಾದ ಪಗೋಡಗಳನ್ನು ಕಟ್ಟಿ ಹಾಡುತ್ತಾರೆ.

ಮುಂಬೈನಲ್ಲಿ ಪಡೆದ ವಿವೇಕ ಎಡಪಂಥೀಯ ಚಳವಳಿಯ ಸಂಪರ್ಕ ಸಾಠೆಯವರ ಬದುಕಿನ ಗ್ರಹಿಕೆಯನ್ನು ಬದಲಿಸುತ್ತದೆ. ಹಾಗಾಗಿ ತಮ್ಮ ಕುಟುಂಬದ ಸಾಂಪ್ರದಾಯಿಕ ಕಲೆಯಾಗಿದ್ದ ಜನಪದ ಕಲಾಪ್ರಕಾರವಾದ ತಮಾಷಾ ಕಲೆಯನ್ನು ಬದಲಾಯಿಸುತ್ತಾರೆ. ಜನಪದ ನಾಟಕಗಳನ್ನು ಬರೆಯುತ್ತಾರೆ. ಸಾಠೆಯವರು ತಮಾಷಾದಲ್ಲಿ ನಟಿಸುವ ಕಲಾವಿದರಾಗಿ, ಹಾಡುಗಾರರಾಗಿ, ತಬಲ, ಹಾರ್ಮೋನಿಯಂ, ಸಾರಂಗಿ, ಡೋಲಿ ವಾದ್ಯಗಳನ್ನು ನುಡಿಸುವ ವಾದ್ಯಕಾರರಾಗಿಯೂ ಗಮನಸೆಳೆಯುತ್ತಾರೆ. ಹಾಡಿಕೆ ಮುನ್ನೆಲೆಗೆ ಬಂದು ಸಾಠೆಯವರು ‘ಶಾಹೀರ್’ ಆಗಿ ಜನಪ್ರಿಯರಾಗುತ್ತಾರೆ. ತೆಲುಗಿನಲ್ಲಿ ಗದ್ದರ್ ಜನಪ್ರಿಯ ಆಗುವ ಮೊದಲು ಮರಾಠಿಯಲ್ಲಿ ಕ್ರಾಂತಿಗೀತೆಗಳ ಪರಂಪರೆಯನ್ನು ಹುಟ್ಟುಹಾಕಿದವರು ಸಾಠೆ. ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭಕ್ಕೆ ಸಾಠೆಯವರು ‘ಲಾಲ್ ಬಾವ್ತಾ ಕಲಾ ತಂಡ’ (ಕೆಂಪು ಬಾವುಟದ ಸಾಂಸ್ಕೃತಿಕ ತಂಡ)ವನ್ನು ಕಟ್ಟಿಕೊಂಡು ಹಾಡತೊಡಗುತ್ತಾರೆ. ‘ಜಗ್ ಬದಲ್ ಘಾಲುನಿ ಘವ್, ಸಂಗುಣಿ ಗೆಲೆ ಮಾಲಾ ಭೀಮರಾವ್’ (ಒಂದೇ ಹೊಡೆತದಿಂದ ಜಗತ್ತನ್ನು ಬದಲಿಸು ಎಂದು ಭೀಮರಾವ್ ನನಗೆ ಹೇಳಿದ್ದು) ಎನ್ನುವ ತರಹದ ಹೊಸ ಹೊಸ ಪೊವಾಡಗಳನ್ನು ಹಾಡಿ ಜನಪ್ರಿಯಗೊಳಿಸುತ್ತಾರೆ.

ಸಾಠೆಯವರು ತಮ್ಮ ಸಾಹಿತ್ಯದ ಪಯಣ ಆರಂಭಿಸಿದ್ದು ಮೌಖಿಕ ಪರಂಪರೆಯ ಮೂಲಕ. ಅಜ್ಞಾನ, ಮೂಢನಂಬಿಕೆ ತುಂಬಿದ್ದು ಹೆಣ್ಣನ್ನು ಅವಮಾನಿಸುತ್ತಿದ್ದ ತಮಾಷಾ ಕಲೆಯನ್ನು ಆಮೂಲಾಗ್ರವಾಗಿ ಬದಲಿಸುತ್ತಾರೆ. ನಮ್ಮಲ್ಲಿನ ಲಾವಣಿಗಳನ್ನು ಹೋಲುವ ಪೊವಾಡಗಳನ್ನು ಬರೆಯುತ್ತಾರೆ. ಸ್ಟಾಲಿನ್ ಗ್ರಾಡ್ ಕದನ (1942) ಬಂಗಾಳದ ಕರೆ (1944) ಪಂಜಾಬ್, ದಿಲ್ಲಿಯ ದೇಶವಿಭಜನೆಯ ಕಥೆಗಳು, ತೆಲಂಗಾಣ ಹೋರಾಟ, ಕಪ್ಪು ಮಾರುಕಟ್ಟೆ, ಹೀಗೆ ಹೊಸ ವಿಷಯಗಳನ್ನು ಪೊವಾಡಗಳಿಗೆ ಅನ್ವಯಿಸುತ್ತಾರೆ. ಬಹುಶಃ ಜನಪದ ಮತ್ತು ಹೋರಾಟದ ಹಾಡುಗಳಲ್ಲಿ ಅಂಬೇಡ್ಕರ್ ಚರಿತೆ ತಂದವರು ಸಾಠೆಯವರೇ ಇರಬೇಕು. ಸಾಠೆಯವರು ಹದಿನೈದಕ್ಕಿಂತ ಹೆಚ್ಚು ಜನಪದ ನಾಟಕಗಳನ್ನು ಬರೆದಿದ್ದಾರೆ. ದೇಶಪ್ರೇಮಿ ಹಗರಣಗಳು, ಚುನಾವಣೆ ವಂಚನೆ, ಅಕ್ರಮ, ನನ್ನ ಮುಂಬೈ, ಮೌನ ಮೆರವಣಿಗೆ ಮುಂತಾದ ರಾಜಕೀಯ ನಾಟಕಗಳನ್ನು ಪ್ರತಿರೋಧದ ವಿಷಯಗಳನ್ನು ಜನಪದ ನಾಟಕಗಳಲ್ಲಿ ತರುತ್ತಾರೆ. ಹೀಗೆ ಇಡೀ ಮರಾಠಿಯ ಮೌಖಿಕ ಜನಪದ ಸಾಹಿತ್ಯದಲ್ಲಿ ಒಂದು ಕ್ರಾಂತಿಯನ್ನೇ ಮಾಡುತ್ತಾರೆ. ಈ ಬಗೆಯ ಕೆಲಸಕ್ಕಾಗಿ ಕನ್ನಡದಲ್ಲಿ ಹೋಲಿಸಲಿಕ್ಕೂ ಯಾರೂ ಸಿಗುವುದಿಲ್ಲ.

ಮೌಖಿಕ ಸಾಹಿತ್ಯದ ಜತೆಜತೆಗೆ ಬರವಣಿಗೆ ಸಾಹಿತ್ಯವನ್ನು ಆರಂಭಿಸುತ್ತಾರೆ. ಮರಾಠಿ ಸಾಹಿತ್ಯಕ್ಕಾಗಿ ಜ್ಞಾನಪೀಠ ಪಡೆದ ವಿ.ಸ.ಖಂಡೇಕಾರ್ ಅವರು ‘‘ಸಾಠೆಯವರ ಕಾದಂಬರಿಗಳು ಮರಾಠಿ ಸಾಹಿತ್ಯದ ದಿಗಂತವನ್ನು ವಿಸ್ತರಿಸಿದವು’’ ಎನ್ನುತ್ತಾರೆ. ಸಾಠೆಯವರು ಬರವಣಿಗೆ ಆರಂಭಿಸುವ ಮುನ್ನ ಮರಾಠಿ ಸಾಹಿತ್ಯವು ಮೇಲ್ಜಾತಿ-ಮೇಲ್ವರ್ಗಗಳ ಅನುಭವಗಳಿಗೆ ಮಾತ್ರ ಸೀಮಿತವಾಗಿತ್ತು. 1961ರಲ್ಲಿ ಬರೆದ ‘ಫಕೀರ’ ಕಾದಂಬರಿಯನ್ನು ಮೊದಲುಗೊಂಡು ನಲುವತ್ತಕ್ಕಿಂತ ಹೆಚ್ಚು ಕಾದಂಬರಿಗಳನ್ನು ಬರೆಯುತ್ತಾರೆ. ತಮಾಷಾ ಕಲೆಯಲ್ಲಿ ಕಲಾವಿದೆಯರು ಎದುರಿಸುವ ಶೋಷಣೆಯ ಬಗ್ಗೆ ಬರೆದ ಮೊದಲ ಕಾದಂಬರಿ ‘ವೈಜಯಂತಿ’, ಮುಂಬೈನ ಕಾಮಾಟಿಪುರದ ವೇಶ್ಯಾವಾಟಿಕೆಯನ್ನು ಚಿತ್ರಿಸುವ ‘ಚಿತ್ರಾ’, ಮಹಿಳಾ ಕಾರ್ಮಿಕ ಚಳವಳಿಯನ್ನು ಒಳಗೊಂಡ ‘ಚಂದನ್’ ಹೀಗೆ ಮೊದಲಬಾರಿಗೆ ಮರಾಠಿ ಸಾಹಿತ್ಯಕ್ಕೆ ಪ್ರವೇಶವನ್ನೇ ಪಡೆಯದೆ ಹೊರಗಿದ್ದ ಎಷ್ಟೋ ದಲಿತ, ಆದಿವಾಸಿ, ಬುಡಕಟ್ಟು ಅಂಚಿನ ಸಮುದಾಯಗಳ ಅನುಭವ ಲೋಕವನ್ನು ಒಳಕ್ಕೆ ಕೈಹಿಡಿದು ಕರೆತರುತ್ತಾರೆ. ಈ ಅರ್ಥದಲ್ಲಿ ಸಾಠೆಯವರು ಮರಾಠಿ ಸಾಹಿತ್ಯದಲ್ಲಿ ಒಬ್ಬ ಬಂಡುಕೋರ.

ಸಾಠೆಯವರು ಹದಿನೈದಕ್ಕಿಂತ ಹೆಚ್ಚು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. 250ಕ್ಕಿಂತ ಹೆಚ್ಚು ಅಂಚಿನ ಸಮುದಾಯಗಳ ಕಥೆಗಳನ್ನೇ ಬರೆದಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಮಾಂಗ್ ಯುವಕನ ಕಥೆ ಹೇಳುವ ‘ಬಂದ್‌ವಾಲಾ’, ದುರಹಂಕಾರಿ ಭೂಮಾಲಕನ ಸೊಕ್ಕಡಗಿಸುವ ‘ರಾಮೋಶಿ’, ಮುಂಬೈ ಕೊಳಗೇರಿಯ ಕಥೆ ಹೇಳುವ ‘ಬಾರ್ಬಾದ್ಯ ಕಂಜರಿ’, ಡಾ. ಅಂಬೇಡ್ಕರ್ ಅವರ ಹೋರಾಟದ ಕಥೆ ಹೇಳುವ ‘ವಲನ್’, ಜಾತಿ ಶೋಷಣೆಯ ವಿರುದ್ಧ ದನಿ ಎತ್ತುವ ‘ಖುಲ್ವಾಡಿ’ ಹೀಗೆ ದುರ್ಬಲ ದಲಿತ ಕೆಳಜಾತಿಗಳ ಬದುಕಿನ ಕಥೆಗಳನ್ನು ಕೊನೆತನಕ ಬರೆದರು. ಇದರಿಂದಾಗಿ ಇಡೀ ಮರಾಠಿ ಸಾಹಿತ್ಯದ ಸಾಂಪ್ರದಾಯಿಕ ಚೌಕಟ್ಟನ್ನು ಮುರಿದರು. ಮುಂದೆ ದಲಿತ ಸಾಹಿತ್ಯವೇ ಮರಾಠಿ ಸಾಹಿತ್ಯದ ದೊಡ್ಡ ಗುರುತಾಗಿದ್ದು ಈಗ ಚರಿತ್ರೆ.

ಕಾಮ್ರೇಡ್ ಆರ್.ಬಿ. ಮೋರೆ, ಕೆ.ಎಂ. ಸಲವೆ ಮತ್ತು ಎಸ್.ಕೆ. ಪಗರೆ ಅವರಂತಹ ಒಡನಾಡಿಗಳಿಂದ ಸಾಠೆಯವರು ಪ್ರಭಾವಿತರಾದರು. ಅವರ ಅನೇಕ ಕಾದಂಬರಿಗಳನ್ನು ಹಿಂದಿ, ಇಂಗ್ಲಿಷ್, ಕನ್ನಡ, ರಶ್ಯನ್ ಮತ್ತು ಪೋಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಹಲವಾರು ಕಾದಂಬರಿಗಳನ್ನು ಚಲನಚಿತ್ರಗಳಾಗಿ ರೂಪಾಂತರಿಸಲಾಗಿದೆ. ಹದಿನೈದಕ್ಕಿಂತ ಹೆಚ್ಚು ಸಿನೆಮಾ ಚಿತ್ರಕಥೆಗಳನ್ನು ಬರೆದಿದ್ದಾರೆ. ‘ಆದಿಶೇಷ ಭೂಮಿಯನ್ನು ಹೊತ್ತಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ನಿಜಕ್ಕೂ ಭೂಮಿಯನ್ನು ಹೊತ್ತು ನಿಂತಿರುವವರು ಈ ದೇಶದ ದಲಿತರು ರೈತರು ಮತ್ತು ಕಾರ್ಮಿಕರು’ ಎಂದು ಲೋಕದ ಕಲ್ಪನೆಯನ್ನೇ ಬದಲಿಸುವ ಅಣ್ಣಾಭಾವು ಸಾಠೆ ನಿಜಕ್ಕೂ ಭಾರತೀಯ ಸಾಹಿತ್ಯಲೋಕದ ಬಂಡುಕೋರ ಕೂಡ.

Tags

Annabhau Sathe
share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X