Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ರಂಗಭೂಮಿಯ ಉಸಿರಾಗಿದ್ದ ಮರಿಯಮ್ಮನಹಳ್ಳಿಯ...

ರಂಗಭೂಮಿಯ ಉಸಿರಾಗಿದ್ದ ಮರಿಯಮ್ಮನಹಳ್ಳಿಯ ಡಿ. ಹನುಮಕ್ಕ

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ7 Oct 2025 1:10 PM IST
share
ರಂಗಭೂಮಿಯ ಉಸಿರಾಗಿದ್ದ ಮರಿಯಮ್ಮನಹಳ್ಳಿಯ ಡಿ. ಹನುಮಕ್ಕ

ಹನುಮಕ್ಕ ಕೇವಲ ನಟಿ ಮಾತ್ರವಲ್ಲದೆ ರಂಗಭೂಮಿಗೆ ಸಂಬಂಧಿಸಿದ ಎಲ್ಲಾ ವಲಯಗಳಲ್ಲಿಯೂ ಪರಿಣಿತ ತಂತ್ರಜ್ಞೆಯೂ ಆಗಿದ್ದರು. ಇವರು ಅಭಿನಯಯದ ಜತೆಗೆ ರಂಗ ನಿರ್ವಹಣೆ, ವಸ್ತ್ರ ವಿನ್ಯಾಸ ಮತ್ತು ರಂಗಪರಿಕರ ವಿಭಾಗಗಳಲ್ಲಿ ರಂಗಭೂಮಿಗೆ ಸಲ್ಲಿಸಿರುವ ಸೇವೆ ಮೌಲಿಕವಾದುದು. ನೀನಾಸಂನಲ್ಲಿ ಗುರುಗಳಾದ ಕೆ.ವಿ. ಸುಬ್ಬಣ್ಣ, ಕೆ.ವಿ. ಅಕ್ಷರ, ಚಿದಂಬರರಾವ್ ಜಂಬೆ, ಭಾಸ್ಕರ್ ಚಂದಾವರ್ಕರ್ ಮುಂತಾದವರ ಮಾರ್ಗದರ್ಶನದಲ್ಲಿ ಕಲಿತಿದ್ದು ಅಪಾರ. ಇವರಲ್ಲದೆ ಬಿ.ವಿ.ಕಾರಂತ, ಬಸವಲಿಂಗಯ್ಯ, ಹುಲುಗಪ್ಪ ಕಟ್ಟಿಮನಿ, ಆಲೆಮನೆ ಸುಂದರಮೂರ್ತಿ, ಮಾಲತೇಶ ಬಡಿಗೇರ, ವೆಂಕಟರಮಣ ಐತಾಳ, ಸಿಜಿಕೆ, ಸುರೇಶ ಆನಗಳ್ಳಿ, ಕೃಷ್ಣಕುಮಾರ್ ಯಾದವ್, ಪ್ರಮೋದ್ ಶಿಗ್ಗಾಂವ್, ಇಕ್ಬಾಲ್ ಅಹಮದ್ ಮುಂತಾದ ಘಟಾನುಘಟಿ ನಿರ್ದೇಶಕರು ನಿರ್ದೇಶಿಸಿರುವ ನಾಟಕಗಳಲ್ಲೂ ನಟಿಸಿ ಎಲ್ಲರಿಂದಲೂ ಮೆಚ್ಚುಗೆ ಪಡೆದರು.

ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಮಾಡುವಾಗ ನೀನಾಸಂ ತಿರುಗಾಟದ ನಾಟಕಗಳಲ್ಲಿ ದೇವನೂರರ ‘ಒಡಲಾಳ’ ನಾಟಕವನ್ನು ನೋಡುವ ಅವಕಾಶ ಸಿಕ್ಕಿತ್ತು. ಈ ನಾಟಕದಲ್ಲಿ ಸಾಕವ್ವನಾಗಿ ಮನೋಜ್ಞ ಅಭಿನಯ ನೀಡಿದವರು ಹನುಮಕ್ಕ. ಪಾತ್ರಪರಿಚಯದಲ್ಲಿ ಮರಿಯಮ್ಮನಹಳ್ಳಿ ಹನುಮಕ್ಕ ಎಂದು ತನ್ನನ್ನು ಪರಿಚಯಿಸಿಕೊಂಡಾಗಲೇ ನಾನು ಇವರ ಹೆಸರು ಕೇಳಿದ್ದು. ಆ ತನಕ ಮರಿಯಮ್ಮನಹಳ್ಳಿ ನಾಗರತ್ಮಮ್ಮ ಮಾತ್ರ ಗೊತ್ತಿದ್ದರು. ಆದರೆ ಹನುಮಕ್ಕ ನನಗೆ ಗೊತ್ತೇ ಇರಲಿಲ್ಲ. ನಾಟಕ ಮುಗಿದ ಮೇಲೆ ಹನುಮಕ್ಕನನ್ನು ಮಾತನಾಡಿಸಿ ಅವರ ಅಭಿನಯವನ್ನು ಹೊಗಳಿದ್ದೆ. ಅವರು ನಸುನಕ್ಕು ಧನ್ಯವಾದಗಳನ್ನು ತಿಳಿಸಿದ್ದರು. ಆ ನಂತರ ‘ಜತೆಗಿರುವನು ಚಂದಿರ’ ನಾಟಕದ ಪಾತ್ರವೂ ಮನದಲ್ಲಿ ಅಚ್ಚೊತ್ತಿತ್ತು. ಹೀಗೆ ಅವರ ಅಭಿನಯದ ಗಟ್ಟಿತನದಿಂದ ನನ್ನೊಳಗೆ ಬೇರುಬಿಟ್ಟ ಹನುಮಕ್ಕನ ಜತೆ ಹೆಚ್ಚು ಮಾತುಕತೆ ಸಾಧ್ಯವಾಗಲಿಲ್ಲ. ಹನುಮಕ್ಕನ ರಂಗಪಯಣವನ್ನು ಶೋಧಿಸಿದರೆ, ಅವರು ರಂಗಭೂಮಿಗಾಗಿಯೇ ತಮ್ಮನ್ನು ತಾವು ತೇದುಕೊಂಡವರು ಎನ್ನುವುದು ತಿಳಿಯುತ್ತದೆ. ಅಂತೆಯೇ ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಜೀವವಿದು. ಈಗ ಹನುಮಕ್ಕ ಇಲ್ಲ ಎಂದಾಗ ನನಗೆ ಅವರು ನಿಲ್ಲಿಸಿದ್ದು ರಂಗಭೂಮಿಯ ಉಸಿರು ಅನ್ನಿಸಿತು.

ಹೊಸಪೇಟೆ ಸಮೀಪದ ನಾರಾಯಣದೇವರಕೆರೆ ಗ್ರಾಮದ ದಾದಮ್ಮನವರ ಹುಲುಗಪ್ಪ ಮತ್ತು ಹನುಮಕ್ಕ ಅವರ ಮಗನಾಗಿ ದುರ್ಗಾದಾಸ್ 1917ರಲ್ಲಿ ಜನಿಸುತ್ತಾರೆ. ತಮ್ಮ ಊರು ತುಂಗಾಭದ್ರ ನದಿಯ ಹಿನ್ನೀರಿನಲ್ಲಿ ಮುಳುಗಿದ ಕಾರಣ ಕುಟುಂಬ ಸಮೇತ ಮರಿಯಮ್ಮನಹಳ್ಳಿಗೆ ವಲಸೆ ಬಂದರು. ಬಾಲ್ಯದಿಂದಲೇ ರಂಗಭೂಮಿ ಪ್ರವೇಶಿಸಿದರು. ಆರಂಭಕ್ಕೆ ಹೆಣ್ಣು ಪಾತ್ರಗಳ ಮೂಲಕ ಗಮನಸೆಳೆದರು. ಗರುಡ ಸದಾಶಿವರ ಗರಡಿಯಲ್ಲಿ ಪಳಗಿದವರು. ದುರ್ಗಾದಾಸರು ಸಹೋದರಿ ಸಂಜೀವಮ್ಮನಿಗೆ ವಾಮನರಾವ್ ನಾಟಕ ಕಂಪನಿಯಲ್ಲಿ ಬಣ್ಣಹಚ್ಚಿ ರಂಗಕ್ಕೆ ಮಹಿಳೆಗೆ ಪ್ರವೇಶ ಕೊಡಿಸಿದ್ದರು. ಕೃಷ್ಣಾರ್ಜುನ ಕಾಳಗದ ನಾಟಕದಲ್ಲಿ ದುರ್ಗಾದಾಸರ ಇಡೀ ಕುಟುಂಬವೇ ಬಣ್ಣಹಚ್ಚಿತ್ತು. ಸ್ವತಃ ದುರ್ಗಾದಾಸರು ‘ವಿಶ್ವಕಲಾದರ್ಶನ ನಾಟಕ ಮಂಡಳಿ’ ಎಂಬ ಕಂಪನಿ ಕಟ್ಟಿದರು. ದುರ್ಗಾದಾಸರು ನಟರಷ್ಟೇ ಅಲ್ಲ, ‘ಭಾರತಿ’, ‘ಮಲತಾಯಿ’, ‘ದೃಪದ ಕನ್ಯೆ’, ‘ಕಲಿತ ಕನ್ಯೆ’, ‘ಕಿತ್ತೂರು ರುದ್ರಮ್ಮ’, ‘ಎಚ್ಚಮನಾಯಕ’ ಮೊದಲಾದ ನಾಟಕಗಳ ರಚನಕಾರರೂ ಕೂಡ. ಇಂತಹ ರಂಗಪರಂಪರೆ ಇರುವ ದುರ್ಗಾದಾಸರ ನಾಲ್ಕನೇ ಮಗಳು ಡಿ.ಹನುಮಕ್ಕ.

ಮರಿಯಮ್ಮನಹಳ್ಳಿ ರಂಗಪರಂಪರೆಯನ್ನು ಹುಟ್ಟುಹಾಕಿದ ಊರು. ಈ ಊರು ಗ್ರಾಮೀಣ ರಂಗಭೂಮಿ, ಪೌರಾಣಿಕ, ಬಯಲಾಟ ಮುಂತಾದ ಜನಪದ ರಂಗಪರಂಪರೆಯಿಂದ ಜೀವಂತವಾಗಿತ್ತು. ಸ್ವತಃ ದುರ್ಗಾದಾಸ ಇದರ ಜತೆಜತೆಗೆ ವೃತ್ತಿರಂಗಭೂಮಿ ಪರಂಪರೆಯನ್ನು ಕಟ್ಟಿ ಬೆಳೆಸಿದವರು. ಈ ಬಗೆಯ ರಂಗಭೂಮಿ ಪರಂಪರೆಯಲ್ಲಿ ಮೊಳೆತ ಹನುಮಕ್ಕ ‘ಆಧುನಿಕ ರಂಗಭೂಮಿ’ಯಲ್ಲಿ ನೆಲೆಕಂಡರು. ಇದು ಹನುಮನ ಸಮುದ್ರಲಂಘನದಂತಹ ಜಿಗಿತವಾಗಿದೆ. ಮರಿಯಮ್ಮನಹಳ್ಳಿಯ ರಂಗ ಕಲಾವಿದೆ ಕೆ.ನಾಗರತ್ನಮ್ಮ ಒಮ್ಮೆ ನೀನಾಸಂ ತರಬೇತಿಗೆ ಹೋದಾಗ ಅಲ್ಲಿ ನೀನಾಸಂನಲ್ಲಿ ತರಬೇತಿ ಪಡೆಯುತ್ತಿದ್ದ ತನ್ನೂರಿನ ದುರ್ಗಾದಾಸ ಅವರ ಮಗಳಾದ ಹನುಮಕ್ಕನನ್ನು ನೋಡಿ ಮಾತನಾಡಿಸುತ್ತಾರೆ. ಮದುವೆ ಮಾಡಿಕೊಟ್ಟ ಮಗಳು ಗಂಡನನ್ನು ಬಿಟ್ಟು ಎಲ್ಲಿ ಹೋದಳೋ ಎಂದು ನೊಂದುಕೊಂಡಿದ್ದ ದುರ್ಗಾದಾಸರಿಗೆ ನಾಗರತ್ನಮ್ಮ ಹೆಗ್ಗೋಡಿನಿಂದಲೇ ಪತ್ರ ಬರೆದು ನಿಮ್ಮ ಮಗಳು ನೀನಾಸಂ ನಲ್ಲಿ ರಂಗ ತರಬೇತಿ ಪಡೆಯುತ್ತಿದ್ದಾಳೆ ಎಂದು ತಿಳಿಸುತ್ತಾರೆ. ಮುಂದೆ ದುರ್ಗಾದಾಸರನ್ನು ಮನಒಲಿಸಿ ತಂದೆ ಮಗಳನ್ನು ಒಂದಾಗಿಸುತ್ತಾರೆ. ಸ್ವತಃ ರಂಗಭೂಮಿಯ ಧೀಮಂತ ನಟರಾಗಿದ್ದ ದುರ್ಗಾದಾಸರು ಸ್ವತಃ ತನ್ನ ಹೆಣ್ಣುಮಕ್ಕಳು ರಂಗಭೂಮಿಗೆ ಬರುವುದನ್ನು ವಿರೋಧಿಸುತ್ತಾರೆ. ಕಾರಣ ರಂಗಭೂಮಿಗೆ ಬಂದ ಸ್ತ್ರೀಯರನ್ನು ಸಮಾಜ ಕೆಟ್ಟದಾಗಿ ನೋಡುತ್ತಿದ್ದ ಪರಿಗೆ ದುರ್ಗಾದಾಸರು ನೊಂದಿದ್ದಂತೆ ಕಾಣುತ್ತದೆ. ಮುಂದೆ ಸ್ವತಃ ದುರ್ಗಾದಾಸರು ಮೆಚ್ಚುವಂತೆ ಹನುಮಕ್ಕ ಕಲಾವಿದೆಯಾಗಿ ಬೆಳೆಯುತ್ತಾಳೆ.

ಹನುಮಕ್ಕ ಕೇವಲ ನಟಿ ಮಾತ್ರವಲ್ಲದೆ ರಂಗಭೂಮಿಗೆ ಸಂಬಂಧಿಸಿದ ಎಲ್ಲಾ ವಲಯಗಳಲ್ಲಿಯೂ ಪರಿಣಿತ ತಂತ್ರಜ್ಞೆಯೂ ಆಗಿದ್ದರು. ಇವರು ಅಭಿನಯಯದ ಜತೆಗೆ ರಂಗ ನಿರ್ವಹಣೆ, ವಸ್ತ್ರ ವಿನ್ಯಾಸ ಮತ್ತು ರಂಗಪರಿಕರ ವಿಭಾಗಗಳಲ್ಲಿ ರಂಗಭೂಮಿಗೆ ಸಲ್ಲಿಸಿರುವ ಸೇವೆ ಮೌಲಿಕವಾದುದು. ನೀನಾಸಂನಲ್ಲಿ ಗುರುಗಳಾದ ಕೆ.ವಿ. ಸುಬ್ಬಣ್ಣ, ಕೆ.ವಿ. ಅಕ್ಷರ, ಚಿದಂಬರರಾವ್ ಜಂಬೆ, ಭಾಸ್ಕರ್ ಚಂದಾವರ್ಕರ್ ಮುಂತಾದವರ ಮಾರ್ಗದರ್ಶನದಲ್ಲಿ ಕಲಿತಿದ್ದು ಅಪಾರ. ಇವರಲ್ಲದೆ ಬಿ.ವಿ.ಕಾರಂತ, ಬಸವಲಿಂಗಯ್ಯ, ಹುಲುಗಪ್ಪ ಕಟ್ಟಿಮನಿ, ಆಲೆಮನೆ ಸುಂದರಮೂರ್ತಿ, ಮಾಲತೇಶ ಬಡಿಗೇರ, ವೆಂಕಟರಮಣ ಐತಾಳ, ಸಿಜಿಕೆ, ಸುರೇಶ ಆನಗಳ್ಳಿ, ಕೃಷ್ಣಕುಮಾರ್ ಯಾದವ್, ಪ್ರಮೋದ್ ಶಿಗ್ಗಾಂವ್, ಇಕ್ಬಾಲ್ ಅಹಮದ್ ಮುಂತಾದ ಘಟಾನುಘಟಿ ನಿರ್ದೇಶಕರು ನಿರ್ದೇಶಿಸಿರುವ ನಾಟಕಗಳಲ್ಲೂ ನಟಿಸಿ ಎಲ್ಲರಿಂದಲೂ ಮೆಚ್ಚುಗೆ ಪಡೆದರು.

ಕುವೆಂಪು ಅವರ ‘ಬೆರಳ್‌ಗೆ ಕೊರಳ್’ ನಾಟಕದಲ್ಲಿ ದ್ರೋಣನಾಗಿ, ‘ಷರೀಫ’ ನಾಟಕದಲ್ಲಿ ಗೋವಿಂದ ಭಟ್ಟನಾಗಿ, ‘ಒಡಲಾಳ’ದಲ್ಲಿ ಸಾಕವ್ವನಾಗಿ, ‘ನಾಗಮಂಡಲ’ದಲ್ಲಿ ಕುರುಡವ್ವನಾಗಿ ಹನುಮಕ್ಕನವರು ಗಳಿಸಿರುವ ಖ್ಯಾತಿಗೆ ಎಣೆಯಿಲ್ಲ. ಇವುಗಳ ಪೈಕಿ ‘ಕಾಟಮಲ್ಲ’ ಸೇರಿದಂತೆ ಒಂಭತ್ತಕ್ಕೂ ಹೆಚ್ಚು ನಾಟಕಗಳಲ್ಲಿ ವಸ್ತ್ರ ಮತ್ತು ರಂಗಪರಿಕರ ವಿನ್ಯಾಸ ಮಾಡಿದ್ದಾರೆ. ನೀನಾಸಂ ತಿರುಗಾಟ, ಶಿವಸಂಚಾರ, ರಂಗ ನಿರಂತರ, ಶಿವರಂಗ, ರಂಗಸುಗ್ಗಿ, ರೂಪಾಂತರ, ರಂಗಮಂಟಪ, ಕನ್ನಡ ಕಲಾ ಸಂಘ, ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ರಂಗಬುಗುಡಿದಂಗಳ, ರಂಗಪರಂಪರೆ ಟ್ರಸ್ಟ್‌ಗಳಲ್ಲಿ ದುಡಿದಿರುವ ಇವರು ಹಲವು ಸಂಘಸಂಸ್ಥೆಗಳಿಂದ ರಂಗ ಪುರಸ್ಕಾರಗಳನ್ನೂ ಪಡೆದಿದ್ದಾರೆ. ಡಿ. ಹನುಮಕ್ಕನವರಿಗೆ ಕರ್ನಾಟಕ ನಾಟಕ ಅಕಾಡಮಿಯು 2017ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿತ್ತು.

ಹನುಮಕ್ಕ ತನ್ನ ರಂಗ ಪಯಣದ ಬಗ್ಗೆ ಮಾತನಾಡುತ್ತಾ, ‘‘ಕೆ. ವಿ. ಸುಬ್ಬಣ್ಣ, ಯು.ಆರ್. ಅನಂತಮೂರ್ತಿ, ಬಿ. ವಿ. ಕಾರಂತರು ಹೀಗೆ ಅನೇಕ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಬೆಳೆದ ಅಪ್ಪಟ ಹವ್ಯಾಸಿ ರಂಗಭೂಮಿ ಕಲಾವಿದೆ ನಾನು. 1994ರಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತೀ ಕಲಾವಿದರಿಗೂ ರಂಗಭೂಮಿಯೇ ಬುನಾದಿ. ತಂದೆಯ ಪೀಳಿಗೆಗೆ ರಂಗಭೂಮಿಯೊಂದಿಗಿನ ನಂಟು ಕೊನೆಯಾಗಬಾರದು, ಅದನ್ನು ಮುಂದುವರಿಸಿಕೊಂಡು ಏನಾದರೂ ಸಾಧನೆ ಮಾಡಬೇಕೆಂದು ಹೊರಟ ನನಗೆ ನಾಟಕವೇ ಜೀವಾಳವಾಗಿತ್ತು. ಮನೆ ತೊರೆದು ನೀನಾಸಂಗೆ ಸೇರಿದ್ದು ನನ್ನ ತಂದೆಗೆ ಇಷ್ಟವಿರಲಿಲ್ಲ, ಸರಿಸುಮಾರು ಮೂರು ತಿಂಗಳು ಮನೆಯವರ ಸಂಪರ್ಕವಿಲ್ಲದೆ ಹೊರಗಿನವರ ಉಪಚಾರದಲ್ಲಿಯೇ ಇದ್ದೆ. ಹೆಣ್ಣುಮಕ್ಕಳನ್ನು ರಂಗಭೂಮಿಯಿಂದ ದೂರವಿಡುತ್ತಿದ್ದ ಕಾಲದಲ್ಲಿ ಅದರಲ್ಲೇ ಜೀವನ ಕಟ್ಟಿಕೊಳ್ಳಲು ಹೊರಟಿದ್ದೆ. ದಿನಕಳೆದಂತೆ ನನ್ನ ಏಳಿಗೆ ಕಂಡು ತಂದೆಯೂ ಕ್ರಮೇಣ ಒಪ್ಪಿಕೊಂಡರು. ಅಲ್ಲಿಂದ ನನ್ನ ಪಯಣಕ್ಕೆ ಹೊಸ ತಿರುವು ಶುರುವಾಗಿತ್ತು’’ ಎನ್ನುತ್ತಾರೆ.

ಹನುಮಕ್ಕನ ಸುದೀರ್ಘ ರಂಗಭೂಮಿಯ ಒಡನಾಟವು ಅವರದ್ದೇ ಆದ ರಂಗತತ್ವವನ್ನು ಕಟ್ಟಿಕೊಳ್ಳುವಷ್ಟು ದೃಢವಾಗಿದೆ. ಹನುಮಕ್ಕ ತನ್ನದೇ ಆದ ಅನುಭವದ ನೆಲೆಗಟ್ಟಿನಲ್ಲಿ ಹೀಗೆ ಹೇಳುತ್ತಾರೆ, ‘‘ನಾಟಕವೇ ಜೀವನವಾಗಿ ಸುಮಾರು 30 ವರ್ಷಗಳು ಕಳೆಯುತ್ತಾ ಬಂತು. 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಇಂದಿಗೂ ವೇದಿಕೆ ಹತ್ತುವಾಗ ಅದೇನೋ ಅಳುಕು, ಆಂತರ್ಯದಲ್ಲಿ ಭಯ ಪುಟಿದೇಳುತ್ತದೆ. ಪಾತ್ರವಾಗಿ ಒಮ್ಮೆ ಮೈಮರೆತರೆ ಹೊರಗಿನ ಪ್ರಪಂಚ ಶೂನ್ಯ. ಅಂತಹ ಒಂದು ಭಯ ಇದ್ದರೆ ಮಾತ್ರ ಒಬ್ಬ ಕಲಾವಿದ ಮುಂದುವರಿಯಲು ಸಾಧ್ಯ ಎನ್ನುವುದು ನನ್ನ ತತ್ವ. ನಿರ್ದೇಶಕರು ನೀಡುವ ಪ್ರತೀ ಪಾತ್ರವೂ ಸವಾಲು. ವೈಯಕ್ತಿಕವಾಗಿ ಎಷ್ಟೇ ಕಲಿಸಿದರೂ ಎದುರಿಗಿರುವ ಕಲಾವಿದನ ನಟನೆ ನೋಡಿ ಕಲಿಯುವ ಮನಸ್ಸಿರಬೇಕು. ನನ್ನ ಪಾತ್ರವನ್ನು ನಾನು ಇನ್ನಷ್ಟು ಚಂದವಾಗಿ ಹೇಗೆ ಮಾಡಬಹುದು ಎನ್ನುವ ಹುಮ್ಮಸ್ಸಿರಬೇಕು. ಆಗ ಮಾತ್ರ ನಾಟಕದಲ್ಲಿನ ಪಾತ್ರ ನಾವಾಗಲು ಸಾಧ್ಯ. ಪ್ರತೀ ಪಾತ್ರಕ್ಕೆ ಜೀವ ತುಂಬುವ ಹಾಗೆ ರಂಗಭೂಮಿ ನಮ್ಮ ಜೀವನಕ್ಕೆ ರಂಗು ತುಂಬಿದೆ. ಏನೇ ಸನ್ನಿವೇಶ ಬರಲಿ, ಯಾವುದೇ ಜಾಗವಿರಲಿ ಬದುಕಬಲ್ಲೆ ಎನ್ನುವ ಧೈರ್ಯ ನೀಡಿದೆ. ಅದರಲ್ಲೇ ಜೀವನ ರೂಪಿಸಿಕೊಂಡೆ ಎನ್ನುವ ಸಾರ್ಥಕತೆ ನನ್ನದು’’ ಎನ್ನುತ್ತಾರೆ.

‘‘ಮಾತಂಗಿ ದೀವಟಿಗೆ’ ಚಿತ್ರದಲ್ಲಿ ಸಹ ಕಲಾವಿದನಾಗಿ ಅವಳ ಪ್ರತಿಭೆಯನ್ನು ಗಮನಿಸಿರುವೆ. ಸಹಜಾಭಿನಯ, ಸಂಭಾಷಣೆಯಲ್ಲಿ ದೇಸೀಯತೆ, ಏರಿಳಿತಗಳ ಮೂಲಕ ಪಾತ್ರದ ಭಾವ ಜಗತ್ತನ್ನು ಕಟ್ಟಿ ಕೊಡುತ್ತಿದ್ದಳು’’ ಎಂದು ರಂಗಕರ್ಮಿ ಡಿ.ಎಸ್. ಚೌಗಲೆ ಅವರು ಬರೆಯುತ್ತಾರೆ. ‘‘ಕಾರಾಗೃಹ ರಂಗಭೂಮಿಯಲ್ಲಿ ಸೆರೆವಾಸಿಗಳ ಜತೆ ನಟಿಸಿದ ಮೊದಲ ಮಹಿಳೆ’’ ಎಂದು ರಂಗ ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಅವರು ನೆನೆಯುತ್ತಾರೆ.

‘ಪಿಂಕಿ ಎಲ್ಲಿ?’ ಚಿತ್ರದಲ್ಲಿ ಹನುಮಕ್ಕನ ಜತೆ ನಟಿಸಿದ್ದ ರಂಗನಟಿ ಅಕ್ಷತಾ ಪಾಂಡವಪುರ ಅವರು ಹನುಮಕ್ಕನನ್ನು ಬೆಂಗಳೂರು ಎಂಬ ಮಹಾನಗರ ಹೇಗೆ ಬಳಸಿಕೊಂಡಿತು ಎಂದು ಕಹಿ ವಾಸ್ತವಗಳನ್ನು ಗುರುತಿಸಿದ್ದಾರೆ. ಹನುಮಕ್ಕ ಹಾಸಿಗೆ ಹಿಡಿದಾಗಲೇ ಅವರ ಬಗ್ಗೆ ಬರೆದ ಟಿಪ್ಪಣಿಗಳಲ್ಲಿ ಇದು ನನಗೆ ಮೆಚ್ಚುಗೆಯಾಯಿತು. ಅಂತೆಯೇ ಬೆಂಗಳೂರೆಂಬ ಮಹಾನಗರದಲ್ಲಿ ರಂಗಭೂಮಿಯನ್ನೇ ಉಸಿರನ್ನಾಗಿಸಿಕೊಂಡ ಹನುಮಕ್ಕನನ್ನು ಹೇಗೆ ನೋಡಿತು ಎನ್ನುವುದನ್ನು ಅಕ್ಷತಾ ವ್ಯಂಗ್ಯವಾಗಿಯೂ, ವೈರುಧ್ಯವಾಗಿಯೂ ಸತ್ಯವನ್ನು ಮುಖಕ್ಕೆ ರಾಚುವಂತೆ ಬರೆದಿದ್ದಾರೆ. ಅವರ ಬರಹ ಈ ಕೆಳಗಿನಂತಿದೆ.

‘ಹನುಮಕ್ಕ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಅದರಲ್ಲೂ ರಂಗಭೂಮಿಯಲ್ಲಿಯೇ ಅತಿ ಹೆಚ್ಚು ಚಿರಪರಿಚಿತರು! ನಾನು ಮೊದಲ ಬಾರಿ ಹನುಮಕ್ಕನ ಹೆಸರು ಕೇಳಿದ್ದು ನೀನಾಸಂಗೆ ಹೋದಾಗ ಅದೂ ಬಾರಿ ಬಾರಿ..! ನಂತರ ಎಲ್ಲಿ ಹೋದ್ರೂ ರಂಗಭೂಮಿ ಅಂದ್ರೆ ಹನುಮಕ್ಕನದೇ ಮಾತು..ನಂತರ ಕಲಾಕ್ಷೇತ್ರದಲ್ಲಿ ಮೆಸ್ ಬಳಿ ಹಲವು ಬಾರಿ ನೋಡಿದ್ದ ನನಗೆ ಇವರು ಸಿಕ್ಕಾಪಟ್ಟೆ ಆಸಕ್ತಿ ಹುಟ್ಟಿಸಿದರು! ಪಿಂಕಿ ಎಲ್ಲಿ? ಚಿತ್ರದ ರಿಹರ್ಸಲ್ ಮತ್ತು ಚಿತ್ರೀಕರಣದಲ್ಲಿ ಮುಖಾಮುಖಿಯಾಗಿದ್ದೆವು.. ಆ ಸಮಯದಲ್ಲಿ ಹೆಚ್ಚು ಆಪ್ತವಾಗಿ ಮಾತನಾಡಲಾಗಿರಲಿಲ್ಲ. ಕಲಾಕ್ಷೇತ್ರದ ಕಾಮತರ ಮೆಸ್ ಒಳಗೂ ಖುಷಿಯಿಂದ ಕೆಲಸ ಮಾಡುವುದು, ಸರ್ವ್ ಮಾಡುವುದನ್ನು ನಾನು ಗಮನಿಸಿದ್ದೆ. ನಾಟಕ ತಂಡಗಳಿಗೂ ಸ್ವಇಚ್ಛೆಯಿಂದ ವಸ್ತ್ರ ವಿನ್ಯಾಸ, ಮೇಕಪ್ ಮತ್ತು ಒಂದಿಷ್ಟು ಸಹಾಯವನ್ನು ಮಾಡುತ್ತಿದ್ದನ್ನು ಗಮನಿಸಿದ್ದೆ..

ಆಗ ಒಂದಷ್ಟು ಜನರ ಬಾಯಲ್ಲಿ ಇವರ ಬಗ್ಗೆ ಕೇಳುವುದೇ ಚೆಂದ.. ‘ಆಹಾ ನಮ್ ಹನುಮಕ್ಕ’ ‘ಈ ಹನುಮಕ್ಕ ಎಲ್ ಹೋದಳೋ ಮಾರಾಯ’, ‘ಹನುಮಕ್ಕ 6 ಚಾ, 3 ಕಾಫಿ ’, ‘ಓಹ್ ಹೋ ಏನ್ ಹನುಮಕ್ಕ ಸಮಾಚಾರ’, ‘ಆರ್ಟಿಸ್ಟ್ ಇಲ್ವಂತೆ ನೋಡ್ ಹನುಮಕ್ಕೊ’, ‘ಯಾವ್ದೋ ಪಿಚ್ಚರ್ ನವರು ನೀನ್ ಕೇಳ್ಕೊಂಡ್ ಬಂದಿದ್ರು ಹನ್ಮಕ್ಕ’ ಹನುಮಕ್ಕನಿಗೆ ಕಲಾ ಕ್ಷೇತ್ರವೇ ಮನೆ, ಆಫೀಸ್, ವರ್ಕಿಂಗ್ ಸ್ಪೇಸ್ ಎಲ್ಲಾ ಆಗಿತ್ತು. ಆದ್ರೆ ನಾ ಕಂಡಂತೆ ಹನಿಮಕ್ಕನದು ಮಾತ್ರ ಮಾತು ಕಮ್ಮಿ!

ಒಂದು ಅಜೆಂಡಾ, ಗುಂಪುಗಾರಿಕೆ, ಕೈ ಕಟ್ಟಿ ಜೀ ಹುಜೂರ್ ಅನ್ನೋ ಮನಸ್ಥಿತಿ, comfortable Group ಕಟ್ಟಿಕೊಂಡು ಬೆಚ್ಚಗೆ ಇರುವುದು.. ವ್ಯಕ್ತಿ ಪೂಜೆ ಯಾವುದೂ ಇಲ್ಲದ ಹನುಮಕ್ಕ ಅಭಿನಯದಲ್ಲಿ ಗಟ್ಟಿಗಿತ್ತಿ! ಜೀವನದಲ್ಲಿ.....?! ಗೊತ್ತಿಲ್ಲ. ಹನುಮಕ್ಕನ ಬಗ್ಗೆ ಕೆಟ್ಟ ಮಾತನಾಡಿದವರನ್ನು ಕಂಡೇ ಇಲ್ಲ.. ಎಲ್ಲರಲ್ಲೂ ಆಕೆ ಅಂದ್ರೆ ಖುಷಿ! ಕಾರಣ..? ಕಲಾಕ್ಷೇತ್ರವೇ ತನ್ನ ತವರು ಮನೆ ಅಂತ ಅಲ್ಲೇ ಹೆಚ್ಚು ಸಮಯ ಕಳೆಯುತ್ತಾ ಎಲ್ಲರ ಸಹಾಯಕ್ಕೆ ನಿಲ್ಲುತ್ತಿದ್ದ Artist Replacementಗೆ easy ಆಗ್ತಿದ್ರು ಅಂತಾನಾ? ಹಣದ ಡಿಮ್ಯಾಂಡ್ ಇಲ್ಲ, ಕೊಟ್ಟಷ್ಟು ತಕೊಳ್ತಾರೆ, ಎಲ್ಲೇ ಹೋದ್ರೂ ಅದೂ ಇದು ಕೇಳಲ್ಲ. ಎಲ್ಲದಕ್ಕೂ ಅಡ್ಜಸ್ಟ್ ಆಗ್ತಾರೆ ಅಂತಾನೂ ಇರಬಹುದ? ಈ ಎಲ್ಲಾ ಕಾರಣಗಳಿಗಷ್ಟೇ ಹನುಮಕ್ಕ ಇಷ್ಟ ಆಗ್ತಿದ್ರು ಅಂದ್ರೆ..! ತಪ್ಪು ನಮ್ಮದೇ ಅಲ್ವಾ?

ಇವರದೇ ತಲೆಮಾರಿನ ಹೆಣ್ಣುಮಕ್ಕಳು ಇವರಂತೆಯೇ ಪ್ರತಿಭಾವಂತರು ಅಥವಾ ಚೂರು ಜಾಸ್ತಿ ಕಮ್ಮಿ ಅನ್ನೋರ ಆಯ್ಕೆ ರಂಗಭೂಮಿಯ ತಮ್ಮ ಕನಸು ವಿಭಿನ್ನವಾಗಿ ಇದ್ದದ್ದಕ್ಕೆ ಸಿನೆಮಾ, ರಾಜಕೀಯ, ತಮ್ಮದೇ ಸ್ವಂತ ರಂಗಮಂದಿರ, ರಂಗಶಾಲೆ, ತಂಡಗಳು ಅಂತಾ ಕಟ್ಟಿಕೊಂಡು, ಅತಿಥಿಗಳಾಗಿ, ವೇದಿಕೆ, ಕಾರ್ಯಕ್ರಮಗಳು, ಉತ್ಸವಗಳು, ಪ್ರಶಸ್ತಿಗಳು ಅಂತಾ ಎಲ್ಲವನ್ನೂ ಸ್ವಂತ ಅನ್ನೋ ಹಾಗೆ ಆಸ್ತಿ, ಹೆಸರು, ಜನಪ್ರಿಯತೆ, ಗಂಡ, ಸಂಸಾರ, ಮಕ್ಕಳು, ಮರಿ ಅಂತಾ ಜೀವನ ಸಾಗಿಸ್ತಾ ಇದ್ರೆ ಈ ನಮ್ಮ ಹನುಮಕ್ಕ ಮಾತ್ರ ರಂಗಭೂಮಿ, ಅಭಿನಯ, ಈ ಕಲಾಕ್ಷೇತ್ರನೇ ಎಲ್ಲಾ ಅಂದ್ಕೊಂಡು ಎಲ್ಲರ ಕೈಯಲ್ಲೂ ಜೈ ಅನ್ನಿಸಿಕೊಂಡು ಇವತ್ತು ತನ್ನೂರಿನ ಹಾಸಿಗೆ ಮೇಲೆ ದಿನ ಕಳೀತ ಇರೋದು ನೋಡಿದ್ರೆ ಯಾವ ಪಟ್ಟಿಯ ಆಯ್ಕೆ ಮುಖ್ಯ ಅನ್ನೋ Smartness, education, Contact's ಕೂಡ ಕೆಲಸ ಮಾಡಿತ್ತೇ ಅನ್ನೋದು ಸತ್ಯ ಅಲ್ವಾ? ಈಗಿನ ಹನುಮಕ್ಕನ ಪರಿಸ್ಥಿತಿಗೆ ಕಾರಣ ವಿಧಿ ಅಷ್ಟೇನಾ? ಇಂತಹ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಆಯ್ಕೆ ಎಷ್ಟು ಮುಖ್ಯ ಆಗುತ್ತೆ ಅಂದ್ರೆ ಅದಕ್ಕೆ ನಮ್ಮ ಹನುಮಕ್ಕ ಮತ್ತು ಇತರ ಮಹಿಳಾ ರಂಗಕರ್ಮಿಗಳೇ ಸಾಕ್ಷಿ! ಒಂದು ವೇಳೆ ಹನುಮಕ್ಕ ತರಹ ನಾವುಗಳು ಇರಲಿಲ್ಲ ಅಂದ್ಕೊಳ್ಳಿ..

ಉದಾಹರಣೆಗೆ..ನನ್ನಿಷ್ಟ, ನನ್ನ ಆಯ್ಕೆ..ಸಂಭಾವನೆ ಎಷ್ಟು? ಸಂಪೂರ್ಣ ಕಥೆ ಕೊಡಿ, ಸ್ಕ್ರೀನ್‌ಪ್ಲೇ ಕೊಡಿ.. ಊಟ ವಸತಿ ಸುಸಜ್ಜಿತವಾಗಿರಲಿ, ಯಾಕೆ ಇನ್ನೂ ಸಂಭಾವನೆ ಬಂದಿಲ್ಲ, ಈ ನಾಟಕ, ಸಿನೆಮಾದ ವಿಮರ್ಶೆ ಹೀಗೆ ಹಾಗೆ, ನಿಮ್ಮದು ತಪ್ಪು, ಬೇಕಾದಾಗೆ ಇಲ್ಲಾ.. ಅದೂ ಇದು.. ಆಗ ಬಜಾರಿ, ಅಬ್ಬಬ್ಬಾ ಜೋರು, ಜಂಬ, ಅಹಂಕಾರ, ಅಟಿಟ್ಯೂಡ್, ಕೆಟ್ಟ ಸ್ವಾಭಿಮಾನ, ಅಹಂ, ಓ ಅವಳ ಗೊತ್ತು... ಇವಿಷ್ಟು ಮಾತುಗಳಂತೂ ಕಟ್ಟಿಟ್ಟಿದ್ದು..

Finally ಈ ಮಹಾನಟಿಯಿಂದ ರಂಗಭೂಮಿಗೆ ಎಷ್ಟು ಉಪಕಾರ ಆಗಿದೆ ಅಂದ್ರೆ ಹಾಗೆ ಹನುಮಕ್ಕನ ವಿಷಯದಲ್ಲಿ ಸದಾ ಒಳ್ಳೆಯದನ್ನೇ ಮಾತನಾಡಿದ ಕೆಲಸ ಪಡೆದುಕೊಂಡ ಈ ಸಮಾಜ ಈಗ ಒಳ್ಳೆಯದನ್ನೇ ಮಾಡಲಿ ಎಂಬುದಷ್ಟೇ ನನ್ನ ಉದ್ದೇಶ..! ಹ್ಞಾ ಅಷ್ಟೇ ಅಲ್ಲಾ ಹಾಗಿದ್ರೆ ಶಭಾಷ್ ಅನ್ನಿಸಿಕ್ಕೊಂಡು ಕೊನೆಗಾಲದಲ್ಲಿ ಖಾಲಿ ಕೈಯಲ್ಲಿ ಮೂಲೆ ಕೂರುವುದೋ.. ಅಥವಾ ತನ್ನ ಅಸ್ತಿತ್ವದ ಉಳಿವಿಗಾಗಿ ಎಲ್ಲರಿಂದಲೂ ಜೈ ಅನ್ನಿಸಿಕೊಳ್ಳಲು ಕೆಲಸ ಮಾಡದೇ ಆರ್ಥಿಕವಾಗಿ ಗಟ್ಟಿಯಾಗುವುದೋ? ಆದ್ರೆ ಅದು ರಂಗಭೂಮಿಯಲ್ಲಿ independent Thinking womenಗೆ ಸಾಧ್ಯನಾ?’ ಎನ್ನುತ್ತಾರೆ. ಇದು ಹನುಮಕ್ಕ ರಂಗಭೂಮಿಯನ್ನು ಕಂಡದ್ದೂ, ರಂಗಭೂಮಿಯ ಲೋಕ ಹನುಮಕ್ಕನನ್ನು ಕಂಡದ್ದಕ್ಕೆ ಕನ್ನಡಿಯಂತಿದೆ.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X