Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಕಲ್ಯಾಣ ಕರ್ನಾಟಕದ ಜನಪದರಲ್ಲಿ...

ಕಲ್ಯಾಣ ಕರ್ನಾಟಕದ ಜನಪದರಲ್ಲಿ ಅಂಬೇಡ್ಕರ್‌ರನ್ನು ಬಿತ್ತಿದ ಕಾಶೀನಾಥ ಪಂಚಶೀಲ ಗವಾಯಿ

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ16 Dec 2025 1:04 PM IST
share
ಕಲ್ಯಾಣ ಕರ್ನಾಟಕದ ಜನಪದರಲ್ಲಿ ಅಂಬೇಡ್ಕರ್‌ರನ್ನು ಬಿತ್ತಿದ ಕಾಶೀನಾಥ ಪಂಚಶೀಲ ಗವಾಯಿ

ಕಾಶೀನಾಥ ಅವರು ತಮ್ಮ ರಚನೆಯ ಹಾಡುಗಳಲ್ಲಿ ಮುಖ್ಯವಾಗಿ ದಲಿತರ ಆಚರಣೆ, ಅವರ ಆಹಾರ ಪದ್ಧತಿ, ಮೂಢನಂಬಿಕೆಯಿಂದ ಅನುಸರಿಸುತ್ತಿದ್ದ ಕುರುಡು ಅನುಕರಣೆಗಳನ್ನು ವಿರೋಧಿಸುತ್ತಾರೆ.

ಕಾಶೀನಾಥರ ಬುದ್ಧ ವಚನಾಮೃತ (1954), ಬುದ್ಧ ಬಸವ ಅಂಬೇಡ್ಕರ್ ತತ್ವಜ್ಞಾನ (1964) ಈ ಎರಡೂ ಕೃತಿಗಳು ಹೈದರಾಬಾದ್ ಕರ್ನಾಟಕದ ಸಾಹಿತ್ಯಿಕ ಸಂದರ್ಭದಲ್ಲಿ ಗಮನಾರ್ಹವಾದವು. ಮೊದಲ ಮತ್ತು ಎರಡನೆಯ ಕೃತಿಯ ದಶಕದ ಅಂತರ ಒಟ್ಟಾರೆ ಕಾಶೀನಾಥರ ವೈಚಾರಿಕತೆಯ ಸ್ಪಷ್ಟತೆ ಪಡೆದ ಬಗ್ಗೆಯೂ ಸೂಚನೆಯಂತಿದೆ.

ಕಲಬುರಗಿ ಬೀದರ್ ಭಾಗದ ಹಳ್ಳಿಗಳಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಹಾಡುಗಳು ವ್ಯಾಪಕವಾಗಿವೆ. ಅಂಬೇಡ್ಕರ್ ಬಗೆಗಿನ ಹಾಡಿಕೆಯ ಭಜನಾ ತಂಡಗಳಿವೆ. ವಿಶೇಷವೆಂದರೆ ಮಹಿಳೆ ಯರು ಅಂಬೇಡ್ಕರ್ ಬಗ್ಗೆ ಹಾಡುತ್ತಾರೆ. ಇವರುಗಳು ಹಾಡುವ ಬಹುಪಾಲು ಹಾಡುಗಳ ರಚನೆಕಾರರು ಕಾಶೀನಾಥ ಪಂಚಶೀಲ ಗವಾಯಿಗಳು. ಒಂದರ್ಥದಲ್ಲಿ ಕಾಶೀನಾಥರು ಈ ಭಾಗದ ಜನಪದರಲ್ಲಿ ಅಂಬೇಡ್ಕರ್ ಅವರ ಅರಿವಿನ ಬೀಜ ಬಿತ್ತಿದವರು. ಈ ಬಿತ್ತನೆ ಮೂರು ದಶಕಗಳಿಂದಲೂ ಫಲ ಕೊಡುತ್ತಿದೆ.

ಬೀದರ್ ಜಿಲ್ಲೆ ಹುಮನಾಬಾದ್‌ನಿಂದ 30ಕಿ.ಮೀ. ದೂರದ ಪುಟ್ಟ ಹಳ್ಳಿ ಹಿಲಾಲಪೂರ. ಈ ಊರಿಗೆ ಕಾಶೀನಾಥರ ಜನಪ್ರಿಯತೆಯಿಂದ ಹೊಸತೊಂದು ಗುರುತು ಬಂದಿದೆ. ಸಿಂಗೆ ಮನೆತನದ ಹೊಲೆಯ ಜಾತಿಗೆ ಸೇರಿದ ಕಾಳಪ್ಪ ಮತ್ತು ಶಾಂತಾಬಾಯಿ ಅವರ ಹಿರಿಯ ಮಗನಾಗಿ, ಅಂಬೇಡ್ಕರ್ ಹುಟ್ಟಿದ ದಿನದಂದೇ ಎಪ್ರಿಲ್ 14, 1933ರಲ್ಲಿ ಜನಿಸಿದರು. ಶಾಂತಾಬಾಯಿಗೆ 11 ಜನ ಮಕ್ಕಳಾದರೂ, ಬದುಕುಳಿದದ್ದು ಐದು ಜನ ಮಾತ್ರ. ಹೀಗಿರುವಾಗ ಅಜ್ಜನ ಮನೆಯಾದ ಚಿಂಚೊಳಿ ತಾಲೂಕಿನ ಚಂದನಕೇರಿ ಮತ್ತು ಹಿಲಾಲಪೂರದಲ್ಲಿ ಕಾಶಿ ತನ್ನ ಬಾಲ್ಯವನ್ನು ಕಳೆದರು. ಸಹಜ ತುಂಟಾಟದ ಚುರುಕು ಹುಡುಗನಾಗಿದ್ದ ಈತ ಎಲ್ಲರ ಮನಗೆದ್ದವರು.

ಹಿಲಾಲಪೂರದಲ್ಲಿ ಆಗ ಶಾಲೆಗಳಿರಲಿಲ್ಲ. ಹತ್ತಿರದ ಹಳ್ಳಿಖೇಡ ಮತ್ತು ರಂಜೋಳದಲ್ಲಿ ಖಾಸಗಿ ಶಾಲೆಯಲ್ಲಿ ಮೋಡಿ ಅಥವಾ ಉರ್ದುವಿನಲ್ಲಿ ಶಿಕ್ಷಣ ಪಡೆಯಬೇಕಿತ್ತು. ಅದರಲ್ಲೂ ಮೇಲ್ಜಾತಿ ಮತ್ತು ಮೇಲ್ವರ್ಗದವರು ಮಾತ್ರ ಕಲಿಯುವ ವಾತಾವರಣವಿತ್ತು. ಕಾಶಿಯ ಅಪ್ಪ ಕಾಳಪ್ಪನಿಗೆ ಮಗನನ್ನು ಓದಿಸುವ ಕನಸಿರಲಿಲ್ಲ. ತಾನು ಜೀತಕ್ಕಿದ್ದ ಗೌಡರ ಮನೆಯಲ್ಲಿದ್ದು ದುಡಿದರೆ ಸಾಕು ಎನ್ನುವುದಾಗಿತ್ತು. ಆದರೆ ಅಜ್ಜ ಬಸಪ್ಪನಿಗೆ ಮೊಮ್ಮಗ ಓದಬೇಕು ಎನ್ನುವ ಆಸೆಯಿತ್ತು. ಹಾಗಾಗಿಯೇ ಹಿಲಾಲಪೂರದಿಂದ ಚಂದನಕೇರಿಗೆ ಮೊಮ್ಮಗನನ್ನು ಕರೆತಂದು ಚಾವಡಿ ಶಾಲೆಗೆ ಸೇರಿಸಿದರು. ಚಾವಡಿ ಶಾಲೆಗೆ ಸೇರಿದ ಮೊದಲ ಅಸ್ಪಶ್ಯ ಬಾಲಕ ಕಾಶಿ. ಮೋಡಿಲಿಪಿಯಲ್ಲಿ ಅಕ್ಷರ ಕಲಿಯತೊಡಗಿದ.

ಆಗ ಕಲಿಸುವ ಗುರುಗಳೂ ಅಸ್ಪಶ್ಯತೆ ಆಚರಿಸುತ್ತಿದ್ದ ಕಾಲ. ಕಾಶಿ ತಿದ್ದಿಕೊಟ್ಟ ಪಾಟಿಯನ್ನು ಮುಟ್ಟಿದ ನಂತರ ಕೈ ತೊಳೆಯುತ್ತಿದ್ದರು, ಆತನನ್ನು ಹೊಡೆದ ಕೋಲು ಬಿಸಾಕಿ, ಹೊಸ ಕೋಲು ತೆಗೆದುಕೊಳ್ಳುತ್ತಿದ್ದರು. ಹೀಗೆ ಕಾಶಿ ನಾಲ್ಕನೆಯ ತರಗತಿಯವರೆಗೂ ಮೋಡಿಲಿಪಿಯಲ್ಲಿ ಓದಿ, ಬರೆದು ಲೆಕ್ಕಮಾಡಲು ಕಲಿತರು. ಚಂದನಕೇರಿಯ ಬಾಲ್ಯದ ದಿನಗಳು ಕಾಶಿಗೆ ಸೊಗಸಾಗಿದ್ದವು. ಇತ್ತ ಹಿಲಾಲಪೂರದಲ್ಲಿ ಮತ್ತೆರಡು ಮಕ್ಕಳಾಗಿ ಸಂಸಾರ ಕಷ್ಟದಲ್ಲಿತ್ತು. ಹಾಗಾಗಿ ಕಾಶಿಯ ದುಡಿಮೆ ಮನೆಗೆ ಅಗತ್ಯವಾಯಿತು. ರೆಡ್ಡೇರ ಶಿವಮೂರ್ತಿ ಅವರ ಮನೆಯ ದನಕಾಯಲು ಖಾಯಂ ಜೀತಕ್ಕಿಟ್ಟರು. ಆಗ ಧನಿಮನೆಯ ಊಟ, ಅಡವಿಯಲ್ಲಿ ದನಗಳ ಹಿಂದೆ ಬಿಸಿಲು ಮಳೆಯೆನ್ನದ ಸುತ್ತಾಟ ಕಾಶಿಯ ಪಾಲಿಗೆ ಬಂತು.

ಸಂಜೆ, ರಾತ್ರಿಗಳಲ್ಲಿ ಹಿಲಾಲಪೂರದಲ್ಲಿ ನಡೆಯುತ್ತಿದ್ದ ಕೋಲಾಟ, ಬಯಲಾಟ, ಭಜನೆ, ಮುಹರ‌್ರಂ ಆಚರಣೆ ಮುಂತಾದ ಹಬ್ಬಹರಿದಿನಗಳು ಕಾಶಿಯನ್ನು ಪ್ರಭಾವಿಸಿದವು. ಬೀದರ್ ಜಿಲ್ಲೆಯಲ್ಲಿ 1942-43ರ ಸಂದರ್ಭದಲ್ಲಿ ಸಿಡುಬು ರೋಗ ವ್ಯಾಪಕವಾಗಿ ಹರಡಿತು. ಕಾಶಿಗೆ ಹತ್ತಿದ ಸಿಡುಬು ಅವರ ಇಡೀ ದೇಹವನ್ನು ವ್ಯಾಪಿಸಿತು. ಕೊನೆಗೆ ಕಣ್ಣಿಗೂ ಹಬ್ಬಿ ಕಣ್ಣುಗಳು ಮಂಜಾಗತೊಡಗಿದವು. ಇದನ್ನರಿತ ಅಜ್ಜ ಬಸಪ್ಪ ಹೇಗಾದರೂ ಸರಿ ಮೊಮ್ಮಗನ ಕಣ್ಣುಗಳನ್ನು ಉಳಿಸಿಕೊಳ್ಳಬೇಕೆಂದು ಎಷ್ಟು ಸಾಹಸ ಪಟ್ಟರೂ ಕಾಶಿಯ ಕಣ್ಣಿನ ದೃಷ್ಟಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಹನ್ನೆರಡು ವರ್ಷದ ಬಾಲಕ ತನ್ನ ದೃಷ್ಟಿಯನ್ನೇ ಕಳೆದುಕೊಂಡು ಅಂಧನಾದ. ಇಡೀ ಬದುಕಿಗೆ ಕತ್ತಲು ಕವಿಯಿತು.

ಕತ್ತಲ ಜಗತ್ತಲ್ಲಿ ಕಾಶಿಯ ಬದುಕು ನಿಜಕ್ಕೂ ಕಡುಕಷ್ಟದ್ದಾಯಿತು. ಅಜ್ಜ ಮೊಮ್ಮಗನ ಸ್ಥಿತಿ ಕಂಡು ಮಮ್ಮಲ ಮರುಗಿದನು. ಕಾಶಿ ಕುರುಡುತನದ ಬದುಕು ಬೇಡವೆಂದು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದ. ಅಜ್ಜ ಮೊಮ್ಮಗನನ್ನು ಮತ್ತೆ ಚಂದನಕೇರಿಗೆ ಕರೆದೊಯ್ದು, ಈತನ ಜೀವನಕ್ಕೆ ನೆರವಾಗಲೆಂದು ಸಂಗೀತ ಕಲಿಸತೊಡಗಿದನು. ಅಜ್ಜ ಕೊಳಲು ನುಡಿಸುವುದನ್ನು ಕಲಿಸಿಕೊಟ್ಟ. ಹಾಗೆಯೇ ನಿಧಾನಕ್ಕೆ ಕಾಶಿ ಆಸಕ್ತಿಯಿಂದ ಭಜನೆಯ ಇತರ ವಾದ್ಯಗಳನ್ನು ಬಾರಿಸುವುದನ್ನೂ, ಜೊತೆಜೊತೆಗೆ ಹಾಡುವುದನ್ನೂ ಕಲಿಯತೊಡಗಿದ. ಹೀಗಾಗಿ ಕಾಶಿಗೆ ಸಂಗೀತ ಕಲಿಯುವ ಉಮೇದು ದಿನದಿಂದ ದಿನಕ್ಕೆ ಬೆಳೆಯಿತು.

ಮತ್ತೆ ಕಾಶಿ ಹಿಲಾಲಪೂರಕ್ಕೆ ಮರಳಿದಾಗ ಕಿತ್ತುತಿನ್ನುವ ಬಡತನ. ತಂಗಿ ಲಕ್ಷ್ಮಿ ಆತನಿಗೆ ದಾರಿದೀಪದಂತೆ ನೆರವಾದಳು. ಕಡುಬಡತನದಲ್ಲಿ ಕಾಶಿ ತನ್ನಿಂದಲೂ ಮನೆಗೆ ನೆರವಾಗಬೇಕೆಂದು ಬಯಸಿ ತಾನು ಕಲಿತ ಹಾಡಿಕೆಯನ್ನೇ ಆಶ್ರಯಿಸಿದ. ನಾಗರಪಂಚಮಿಗೆ ಲಕ್ಷ್ಮಿಯೊಂದಿಗೆ ಮಣ್ಣಿನ ಹುತ್ತ, ನಾಗನ ಪ್ರತಿಮೆ ಮಾಡುತ್ತಿದ್ದರು. ಹಾಲೆರೆಯುವವರೆಲ್ಲ ಇಲ್ಲಿಯೇ ಪೂರೈಸಿ ಎಡೆ ಇಡುತ್ತಿದ್ದರು. ಹೀಗೆ ಸಂಗ್ರಹವಾದ ಆಹಾರ ಮೂರು ದಿನದ ಹಸಿವು ನೀಗಿಸುತ್ತಿತ್ತು. ಅಂತೆಯೇ ಬಿತ್ತನೆ ಕಾಲದಲ್ಲಿ ಹೊಲಗಳಿಗೆ ತೆರಳಿ ಕೂರಿಗೆ ಹಾಡನ್ನು ಹಾಡಿ ಬಿತ್ತನೆ ಬೀಜಗಳನ್ನು ದಾನವಾಗಿ ಪಡೆಯುತ್ತಿದ್ದರು. ಕಬ್ಬಿನ ಗಾಣಗಳಿಗೆ ತೆರಳಿ ಹಾಡುಹೇಳಿದರೆ ಕಬ್ಬು, ಬೆಲ್ಲ ಸಿಗುತ್ತಿತ್ತು. ಹೀಗೆ ದವಸ ಧಾನ್ಯದ ರಾಶಿಯ ಕಣಗಳಿಗೆ ತೆರಳಿ ರಾತ್ರಿಪೂರಾ ಜನಪದ ಗೀತೆಗಳನ್ನು ಹಾಡಿ ಕಾಳುಕಡಿಯನ್ನು ಸಂಗ್ರಹಿಸುತ್ತಿದ್ದರು. ಕೊನೆಗೆ ಊರಲ್ಲಿ ಮನೆಮನೆಗೆ ದಮ್ಮಡಿ ಹಿಡಿದು ಹಾಡುವುದು, ತಂಗಿ ಭಿಕ್ಷೆ ಬೇಡುವುದು ಹೀಗೆ ಬದುಕು ಸಾಗತೊಡಗಿತು. ಅಣ್ಣನ ಜೊತೆ ಸೇರಿ ಲಕ್ಷ್ಮಿಯೂ ಹಾಡಲು ಕಲಿತಳು. ಅಣ್ಣತಂಗಿಯ ಹಾಡಿಕೆ ಜನರ ಮನಸ್ಸನ್ನು ಸೆಳೆಯುತ್ತಿತ್ತು. ಲಕ್ಷ್ಮಿ ಮದುವೆಯಾಗಿ ಗಂಡನ ಮನೆಗೆ ಹೋದಾಗ ಕಾಶಿ ಮತ್ತೆ ಒಂಟಿಯಾದರು.

ಹೀಗಿರುವಾಗ ಕಾಶಿಯ ಸಂಗೀತ ಕಲಿಯುವ ಒಳಗಿನ ಅದಮ್ಯ ಉತ್ಸಾಹ ಇಮ್ಮಡಿಯಾಯಿತು. ಇದಕ್ಕೆ ಸರಿ ಹೊಂದುವಂತೆ ಹಿಲಾಲಪೂರಕ್ಕೆ ಬಯಲಾಟ ಕಲಿಸಲು ಅಮೀರಲಿ ಮಾಸ್ತರ ಬಂದು ಎರಡು ತಿಂಗಳು ಇಲ್ಲಿಯೇ ಉಳಿದರು. ಕಾಶಿಗೆ ಶಾಸ್ತ್ರೀಯ ಸಂಗೀತ ಕಲಿಯಬೇಕೆಂದು ಅಜ್ಜ ಬಸಪ್ಪನ ಸಹಾಯದಿಂದ 1947ರಲ್ಲಿ ಗದಗಿನ ಪಂಚಾಕ್ಷರಿ ಗವಾಯಿಗಳ ಆಶ್ರಮ ಶಾಲೆಯನ್ನು ಸೇರಲು ಬ್ರಾಹ್ಮಣರೆಂದು ಸುಳ್ಳು ಹೇಳಿದರು. ಒಂದು ವರ್ಷದ ನಂತರ ನಿಜಜಾತಿ ಗೊತ್ತಾಗಿ ಕಾಶಿಯನ್ನು ಆಶ್ರಮದಿಂದ ಹೊರ ಹಾಕಿದರು. ಮತ್ತೆ ಗದಗದಿಂದ ಕಾಶೀನಾಥ ಹಿಲಾಲಪೂರಕ್ಕೆ ಮರಳಿದರು.

ಕಾಶೀನಾಥರ ಚೀಲದಲ್ಲಿ ಯಾವಾಗಲೂ ಕೊಳಲು ಸಂಗಾತಿಯಾಗಿತ್ತು. ಬಾಲ್ಯದಿಂದಲೇ ಕಲಿತಿದ್ದರಿಂದ ಸುಶ್ರಾವ್ಯವಾಗಿ ಕೊಳಲು ನುಡಿಸುತ್ತಿದ್ದರು. ಸಂಬಂಧಿಕರ ಮಕ್ಕಳಿಗೆ ಕೆಲಸ ಕೊಡಿಸುವ ಸಲುವಾಗಿ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸುವಾಗ ಅವರು ಹಸಿವಿನಿಂದ ಬಳಲುತ್ತಾರೆ, ಕೈಯಲ್ಲಿ ಕಾಸಿಲ್ಲ. ಆಗ ಕಾಶೀನಾಥರಿಗೆ ಕೊಳಲು ನೆರವಾಯಿತು. ಕೊಳಲನ್ನು ಊದುತ್ತ ಇಡೀ ರೈಲಿನಲ್ಲಿ ನಾದಮಾಧುರ್ಯ ಹೊಮ್ಮಿಸಿದರು. ಸಂಗೀತಕ್ಕೆ ಮನಸೋತ ಜನರು ಕೈಲಿದ್ದಷ್ಟನ್ನು ಕೊಟ್ಟರು. ಅದೇ ಹಣದಲ್ಲಿ ಊಟ ಮಾಡಿ ಮುಂಬೈನ ದಾರಿ ಖರ್ಚಿಗೂ ಇಟ್ಟುಕೊಂಡರು. ಖಾನಾಪುರದಲ್ಲಿದ್ದ ತಂಗಿ ಲಕ್ಷ್ಮಿಯ ಮನೆಗೆ ಹೋದಾಗಲೆಲ್ಲ ಹತ್ತಿರದ ಜಟ್ಟಪ್ಪ ಮುತ್ಯಾನ ಗುಡ್ಡ ಹತ್ತಿ ಕೊಳಲು ನುಡಿಸಿದರೆ ಸುತ್ತಮುತ್ತಣ ಹಳ್ಳಿಗಳಿಗೆಲ್ಲಾ ಈ ಲಯ ಸಂಚಾರ ಮಾಡುತ್ತಿತ್ತು.

ಒಮ್ಮೆ ಮೀನಕೇರಿ ಎಂಬ ಹಳ್ಳಿಯಲ್ಲಿ ಮುಹರಂ ಸವಾಲ್-ಜವಾಬ್ ಹಾಡುವಾಗ ಎದುರಾಳಿಯಾಗಿ ಸಮೀಪದ ಪಾತರಪಳ್ಳಿಯ ಮಾಣಿಕರಾವ್ ಜ್ಯೋತಿ ಬಂದರು. ಮಾಣಿಕರಾವ್ ಕೂಡ ಮುಹರಂ ಪದಗಳಲ್ಲಿ ಕಾಶೀನಾಥರನ್ನು ಸರಿಗಟ್ಟುವ ಪ್ರತಿಭೆ ಇದ್ದವರು. ಹೀಗಿರುವಾಗ ರಾತ್ರಿ ಕಳೆದು ಮರುದಿನ ಮಧ್ಯಾಹ್ನದವರೆಗೆ ಅದ್ಭುತವಾದ ಸವಾಲ್ ಜವಾಬ್ ನಡೆಯಿತು. ಕೊನೆಗೆ ಮಾಣಿಕರಾವ್‌ರವರ ಸವಾಲಿಗೆ ಕಾಶೀನಾಥರು ಜವಾಬ್ ಕೊಡಲಾಗದೆ ಸೋತರು. ಆದರೆ ಇಬ್ಬರೂ ಜನಮನ ಗೆದ್ದರು, ಅಂತೆಯೇ ಇಬ್ಬರೂ ಹೆಮ್ಮೆಯಿಂದ ಜೊತೆಯಾದರು. ಇವರ ಬಹುದೀರ್ಘ ಸ್ನೇಹಕ್ಕೆ ಈ ಸ್ಪರ್ಧೆ ನೆಪವಾಯಿತು.

ಈ ಸ್ನೇಹ ಜೀವಿತದ ಕೊನೆಯವರೆಗೂ ಅಪರೂಪದ ಸಾಂಗತ್ಯವಾಯಿತು. ಅಂತೆಯೇ ಕಾಶೀನಾಥರ ಬದುಕಿನ ಮತ್ತೊಂದು ದೊಡ್ಡ ತಿರುವಿಗೆ ಈ ಘಟನೆ ಕಾರಣವಾಯಿತು. ಅಕ್ಷರದ ಅರಿವಿದ್ದ ಮಾಣಿಕರಾವ್ ಜ್ಯೋತಿಯವರು ಅಂಬೇಡ್ಕರ್ ಅವರನ್ನು ಓದಿಕೊಂಡಿದ್ದರು. ಅವರ ಚಿಂತನೆ ಜನರಿಗೆ ತಲುಪಬೇಕೆಂಬ ಕನಸು ಕಂಡಿದ್ದರು. ಅವರ ಬೌದ್ಧ, ಅಂಬೇಡ್ಕರ್ ಚಿಂತನೆಗೆ ಕಾಶೀನಾಥ ಸಂವಹನದ ಮಾಧ್ಯಮವಾಗಿ ದುಡಿದರು. ಜ್ಯೋತಿಯವರು ಕಾಶೀನಾಥರಿಗೆ ಬುದ್ಧ ಅಂಬೇಡ್ಕರರ ಜೀವನ ಬೋಧನೆಗಳನ್ನು ಮನದಟ್ಟು ಮಾಡಿದರು. ನಿಧಾನಕ್ಕೆ ಕಾಶೀನಾಥ ಅವರು ಬುದ್ಧ, ಅಂಬೇಡ್ಕರ್ ಚಿಂತನೆಗೆ ತನ್ನನ್ನೇ ತೇದುಕೊಂಡರು.

ಹಿಂದೊಮ್ಮೆ 1951ರಲ್ಲಿ ಅಜ್ಜ ಬಸಪ್ಪನೊಂದಿಗೆ ಸೊಲ್ಲಾಪುರಕ್ಕೆ ಹೋಗಿದ್ದಾಗ ಸ್ವತಃ ಅಂಬೇಡ್ಕರ್ ಅವರ ಭಾಷಣ ಕೇಳಿದ್ದರು. ಅಂದು ಅಂಬೇಡ್ಕರ್ ದಲಿತರಲ್ಲಿನ ಅಜ್ಞಾನ, ಮೂಢನಂಬಿಕೆ, ಬಡತನ, ಅಸಹಾಯಕತೆಯ ಬಗ್ಗೆ ಭಾವುಕರಾಗಿ ಮಾತನಾಡಿದ್ದರು. ಈ ಮಾತುಗಳಿಗೆ ಕಾಶೀನಾಥ ಕಣ್ಣೀರಾಗಿದ್ದರು. ಅಂತೆಯೇ ಬಿ. ಶ್ಯಾಮಸುಂದರರ ಮಾತುಗಳೂ ಕೂಡ ಕಾಶೀನಾಥರಲ್ಲಿ ಹೊಸ ಚಿಂತನೆಗೆ ಅನುವು ಮಾಡಿದ್ದವು. ಈ ಪ್ರಭಾವದ ಎಳೆ ಮಾಣಿಕರಾವ್ ಜ್ಯೋತಿ ಅವರ ಸಂಪರ್ಕದಿಂದ ಮತ್ತಷ್ಟು ದೃಢವಾಯಿತು.

ಹೀಗಿರುವಾಗ ಕಾಶೀನಾಥರಿಗೆ ಬುದ್ಧ, ಅಂಬೇಡ್ಕರ್ ಅವರ ಅರಿವಿನಿಂದಾಗಿ ಕಳೆದು ಹೋದ ಕಣ್ಣುಗಳು ಮರಳಿ ಬಂದಂತೆ, ಒಳಗಣ್ಣಿನಿಂದ ಲೋಕವನ್ನು ನೋಡತೊಡಗಿದರು. ಬಾಬಾಸಾಹೇಬರು ಬೌದ್ಧಧರ್ಮ ಸ್ವೀಕರಿಸಿದ ದೀಕ್ಷಾಭೂಮಿ ನಾಗಪುರಕ್ಕೆ ಕರೆದುಕೊಂಡು ಹೋಗುವಂತೆ ಮಾಣಿಕರಾವ್ ಜ್ಯೋತಿ ಅವರಲ್ಲಿ ವಿನಂತಿಸಿಕೊಂಡರು. ಇಬ್ಬರೂ ಜೊತೆಗೂಡಿ 1965ರಲ್ಲಿ ನಾಗಪುರಕ್ಕೆ ಹೋದರು. ಬೌದ್ಧಬಿಕ್ಕು ಭದಂತ ಆನಂದ ಕೌಸಲ್ಯಾಯನ ಅವರಿಂದ ಬೌದ್ಧದೀಕ್ಷೆಯನ್ನು ಪಡೆದರು. ಆಗ ಅಲ್ಲಿ ಗಾಯಕವಾಡ ದಾದಾಸಾಹೇಬ, ಕುಂಬಾರೆ, ಆರ್.ಎಸ್.ಗವಾಯಿ, ಬಿ.ಪಿ. ಮೋರೆ ಮುಂತಾದವರ ಅಂಬೇಡ್ಕರ್ ಅವರ ಕುರಿತ ಭಾಷಣಗಳನ್ನು ಕೇಳಿ ಕಾಶೀನಾಥ ಮತ್ತಷ್ಟು ಪಕ್ವಗೊಂಡರು.

ಅಂದಿನಿಂದ ಕಾಶೀನಾಥ ಮತ್ತು ಮಾಣಿಕರಾವ್ ಜ್ಯೋತಿ ಒಂದೇ ದೇಹವೆಂಬಂತೆ ಪರಸ್ಪರರು ಬುದ್ಧ ಅಂಬೇಡ್ಕರ್ ಅವರ ಅರಿವನ್ನು ಜನಸಾಮಾನ್ಯರಲ್ಲಿ ಬಿತ್ತಲು ಹಗಲಿರುಳು ಶ್ರಮಿಸಿದರು. ಗೆಳೆಯರಾಗಿ, ಗುರುಶಿಷ್ಯರಾಗಿ, ಹಿತೈಷಿಗಳಾಗಿ ಒಬ್ಬರಿಗೊಬ್ಬರು ಆಳವಾದ ಸ್ನೇಹವನ್ನು ಹೊಂದಿ ಬದುಕಿದರು. ಕಾಶೀನಾಥ ಅವರು ತಮ್ಮ ಸಾಂಪ್ರದಾಯಿಕ ಜನಪದ ಹಾಡುಗಾರಿಕೆಯನ್ನು ಬಿಟ್ಟು, ಅದೇ ಹಾಡುಗಾರಿಕೆಗೆ ಬುದ್ಧ, ಅಂಬೇಡ್ಕರ್ ಜೀವನ ಮತ್ತು ಬೋಧನೆಗಳನ್ನು ತುಂಬಿದರು. ಬೀದರ್-ಗುಲ್ಬರ್ಗಾ ಭಾಗದಲ್ಲಿ ಹಳ್ಳಿಹಳ್ಳಿಗಳನ್ನು ಸುತ್ತಿ ದಲಿತರಲ್ಲಿ ಜಾಗೃತಿ ಮೂಡಿಸಿದರು. ಶಿಕ್ಷಣ ಹೊಂದುವಂತೆ ಯುವಕರನ್ನು ಹುರಿದುಂಬಿಸುತ್ತಿದ್ದರು. ಕಾಶೀನಾಥರು ಜನಸಮುದಾಯದ ಒಳ ಪ್ರವೇಶಿಸುವ ಕೀಲಿಕೈಗಳನ್ನು ಬಾಲ್ಯದಿಂದಲೇ ಪಡೆದವರು. ಪ್ರೀತಿಪ್ರೇಮದ ಹಾಡುಗಳ ದಾರಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯ ಮಾನವ ಪ್ರೀತಿಯನ್ನು ತುಂಬಿದರು. ಹೀಗಾಗಿ ಕಾಶೀನಾಥರ ಹಾಡುಗಳು ಭಜನೆ, ಕೋಲಾಟ ಮೊದಲಾದ ಜನಪದ ಹಾಡಿಕೆಗಳಲ್ಲಿ ಬಹುಬೇಗ ಚಲಾವಣೆಗೆ ಬಂದವು.

ಕಾಶೀನಾಥ ಅವರು ತಮ್ಮ ರಚನೆಯ ಹಾಡುಗಳಲ್ಲಿ ಮುಖ್ಯವಾಗಿ ದಲಿತರ ಆಚರಣೆ, ಅವರ ಆಹಾರ ಪದ್ಧತಿ, ಮೂಢನಂಬಿಕೆಯಿಂದ ಅನುಸರಿಸುತ್ತಿದ್ದ ಕುರುಡು ಅನುಕರಣೆಗಳನ್ನು ವಿರೋಧಿಸುತ್ತಾರೆ.

ಕಾಶೀನಾಥರ ಬುದ್ಧ ವಚನಾಮೃತ (1954), ಬುದ್ಧ ಬಸವ ಅಂಬೇಡ್ಕರ್ ತತ್ವಜ್ಞಾನ (1964) ಈ ಎರಡೂ ಕೃತಿಗಳು ಹೈದರಾಬಾದ್ ಕರ್ನಾಟಕದ ಸಾಹಿತ್ಯಿಕ ಸಂದರ್ಭದಲ್ಲಿ ಗಮನಾರ್ಹವಾದವು. ಮೊದಲ ಮತ್ತು ಎರಡನೆಯ ಕೃತಿಯ ದಶಕದ ಅಂತರ ಒಟ್ಟಾರೆ ಕಾಶೀನಾಥರ ವೈಚಾರಿಕತೆಯ ಸ್ಪಷ್ಟತೆ ಪಡೆದ ಬಗ್ಗೆಯೂ ಸೂಚನೆಯಂತಿದೆ. ಕಾಶೀನಾಥ ಅವರು ಕೊನೆತನಕ ತಂಬಾಕು, ಮದ್ಯಪಾನ, ಧೂಮಪಾನ ಮುಂತಾದ ಅಭ್ಯಾಸಗಳನ್ನು ದೂರವಿಟ್ಟರು. ಆಕಸ್ಮಿಕವಾಗಿ ಭಜನೆ ನಡೆಯುವಾಗ ತಂಡದ ಯಾರಾದರೂ ಮೆಲ್ಲಗೆ ಸಪ್ಪಳವಿಲ್ಲದೆ ಎದ್ದು ಹೊರಹೋಗಿ ಬೀಡಿ ಅಥವಾ ಸಿಗರೇಟ್ ಸೇದಿ ಬಂದರೆ, ವಾಸನೆಯಿಂದಲೆ ಗುರುತಿಸಿ ಗವಾಯಿಗಳು ‘‘ಗೂಟದ ಹಗ್ಗ ಕಡಕಂಡು ಹೊಲಸು ತಿಂದು ಬಂತು ದನ’’ ಎಂದು ಮಾರ್ಮಿಕವಾಗಿ ಹೇಳುತ್ತಿದ್ದರು. ತಂಬಾಕಿನ ವಾಸನೆ ಬಂದರೆ ‘‘ಏ ತಮ್ಮ ಯಾರಿದ್ದೀರಿ ತಂಬಾಕು ಒರಸವ್ರ ಆ ಕಡೀಗೆ ಹೋಗ್ರಿ’’ ಎಂದು ನಿಷ್ಠುರವಾಗಿ ಹೊರ ಹಾಕುತ್ತಿದ್ದರು.

ಕಾಶೀನಾಥ ಒಬ್ಬ ಆಶುಕವಿಯಾಗಿದ್ದರು. ಸ್ಥಳದಲ್ಲಿಯೇ ಘಟನೆಯೊಂದರ ಕುರಿತು ಹಾಡುಕಟ್ಟುತ್ತಿದ್ದರು. ಕಾಶೀನಾಥರು ಕೊನೆಯದಾಗಿ ‘‘ಗಂಡು ಹೆಣ್ಣು ಎರಡೇ ಕುಲ ಮಾನವ ಧರ್ಮಕ್ಕೋ/ ದೇವರೊಬ್ಬನೆ ಎಲ್ಲರಿಗೂ ಉತ್ಪನ್ನ ರಕ್ಷಣಕೋ/ಸರ್ವರಿಗೂ ಸ್ವಾತಂತ್ರ್ಯ ಒಂದಾಗಿ ಜನಲೋಕ’’ ಎನ್ನುವ ನಿಲುವಿಗೆ ಬರುತ್ತಾರೆ. ಬುದ್ಧ ಮತ್ತು ಅಂಬೇಡ್ಕರ್ ಅರಿವಿನಿಂದಾಗಿ ಅಂಧನಿಗೂ ಒಳಗಣ್ಣು ತೆರೆದು ಲೋಕವನ್ನು ಅಂಧಕಾರದಿಂದ ಬಿಡುಗಡೆ ಮಾಡುವ ಶಕ್ತಿ ಬರುತ್ತದೆ ಎನ್ನುವುದಕ್ಕೆ ಕಾಶೀನಾಥ ಅವರು ಜೀವಂತ ಉದಾಹರಣೆ. ಅಂತಹ ಧೀಮಂತ ಚೇತನಕ್ಕೊಂದು ಭೀಮವಂದನೆ. ಇಂತಹ ಹೋರಾಟದ ಬದುಕನ್ನು ಕಾಶೀನಾಥರು ಎಪ್ರಿಲ್ 6, 2006ರಂದು ಕೊನೆಗಾಣಿಸಿದರು.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X