Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಮಗುವಿನಲ್ಲಿ ಪ್ರಜಾಪ್ರಭುತ್ವದ ಪೋಷಣೆ

ಮಗುವಿನಲ್ಲಿ ಪ್ರಜಾಪ್ರಭುತ್ವದ ಪೋಷಣೆ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,13 Sept 2026 10:22 AM IST
share
ಮಗುವಿನಲ್ಲಿ ಪ್ರಜಾಪ್ರಭುತ್ವದ ಪೋಷಣೆ

ಈಗಲೂ ನಮ್ಮ ಭಾರತೀಯ ಕುಟುಂಬಗಳಲ್ಲಿ ಒಂದು ಚಾಲ್ತಿಯಲ್ಲಿರುವ ರೂಢಿ ಎಂದರೆ, ಮಕ್ಕಳಿಗೆ ಭಯ ಇರಬೇಕು ಎಂಬುದು. ಆದರೆ ಮನೋವೈಜ್ಞಾನಿಕವಾಗಿ ಮಗುವಿನ ಮೆದುಳಿಗೆ ಸುರಕ್ಷತೆ ಬೇಕು; ಭಯವಲ್ಲ. ನರವೈಜ್ಞಾನಿಕವಾಗಿ ಮಗುವಿನ ಮೆದುಳು ಬೆಳೆಯುವ ಪ್ರಕ್ರಿಯೆಯಲ್ಲಿರುತ್ತದೆ. ವಿಶೇಷವಾಗಿ ಸ್ವನಿಯಂತ್ರಣ, ಹಠಾತ್ ಪ್ರವೃತ್ತಿಯ ನಿಗ್ರಹ, ಯೋಜನೆಗಳನ್ನು ಮತ್ತು ಕಾರ್ಯತಂತ್ರಗಳನ್ನು ರೂಪಿಸುವುದು, ಸಂಕೀರ್ಣಮಯವಾದ ತರ್ಕಗಳನ್ನು ಹಾಗೂ ವಿಚಾರಗಳನ್ನು ಮಾಡುವುದು; ಇಂತಹ ಕೌಶಲ್ಯಗಳಿಗೆ ಸಂಬಂಧಿಸಿದ ಸಾಮರ್ಥ್ಯಗಳು ಕ್ರಮೇಣ ಪರಿಪಕ್ವಗೊಳ್ಳುತ್ತವೆ. ಅಂತಹ ಮಗುವಿಗೆ ಪ್ರತಿಯೊಂದು ತಪ್ಪಿಗೂ ಅವಮಾನ, ಬೆದರಿಕೆ ಅಥವಾ ಹೊಡೆತ ಸಿಕ್ಕರೆ ಅದು ನೈತಿಕತೆಯನ್ನು ಕಲಿಯುವುದಕ್ಕಿಂತ ಮೊದಲು ಅಪಾಯಗಳಿಂದ ತಪ್ಪಿಸಿಕೊಳ್ಳುವ ತಂತ್ರಗಾರಿಕೆಗಳನ್ನು ಕಲಿಯಲು ಪ್ರಾರಂಭಿಸುವ ಸಾಧ್ಯತೆಗಳಿರುತ್ತವೆ.

‘‘ಮಗುವಿಗೆ ಇದು ತಪ್ಪು, ಮಾಡಬಾರದು’’ ಎಂಬ ಅರಿವಿಗಿಂತ ‘‘ಸಿಕ್ಕಿಬಿದ್ದರೆ ಹೊಡೆಯುತ್ತಾರೆ, ಈ ಶಿಕ್ಷೆಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು’’ ಎಂಬ ಅರಿವು ಬಲವಾಗಬಹುದು. ಇವೆರಡರ ನಡುವೆ ದೊಡ್ಡ ವ್ಯತ್ಯಾಸವಿದೆ. ಮೊದಲನೆಯದು ಪ್ರಜ್ಞೆಯನ್ನು ರೂಪಿಸುವುದು. ಎರಡನೆಯದು ತನ್ನ ತಾನು ಉಳಿಸಿಕೊಳ್ಳುವ ಪ್ರಶ್ನೆ. ನೈತಿಕತೆಯು ಪ್ರಜ್ಞೆಯಾಗಿ ರೂಪುಗೊಳ್ಳಬೇಕೇ ಹೊರತು ಪ್ರಶಂಸೆ ಮತ್ತು ಶಿಕ್ಷೆಯ ವಿಷಯವಾಗಿ ಅಲ್ಲ. ಯಾರೂ ನೋಡದಿದ್ದಾಗಲೂ ನ್ಯಾಯವಾಗಿ ನಡೆದುಕೊಳ್ಳುವ ಮನುಷ್ಯರನ್ನು ನಿರ್ಮಿಸುವುದೇ ಸಮಾಜದ ಗುರಿಯಾಗಬೇಕೇ ಹೊರತು, ಯಾರಾದರೂ ನೋಡುತ್ತಿರುವಾಗ ಮಾತ್ರ ನಿಯಮ ಪಾಲಿಸುವವರನ್ನಲ್ಲ.

‘‘ನನ್ನ ಮಗು’’ ಎಂಬ ಒಡೆತನದ ಭಾವ ಬಹಳಷ್ಟು ಪೋಷಕರಲ್ಲಿ ಇರುತ್ತದೆ. ಗಮನಿಸಿ, ಪೋಷಕರ ಪ್ರೀತಿಯೊಳಗೂ ಕೆಲವೊಮ್ಮೆ ಒಡೆತನದ ಅಧಿಕಾರವು ಅಡಗಿರಬಹುದು. ‘‘ನಿನ್ನ ಒಳ್ಳೆಯದಕ್ಕೇ ಹೇಳುತ್ತಿದ್ದೇನೆ’’ ಎಂಬ ವಾಕ್ಯದಿಂದ ಮಗುವಿನ ವಿದ್ಯೆ, ವೃತ್ತಿ, ಮದುವೆ, ಸ್ನೇಹ, ಉಡುಪು, ಆಸಕ್ತಿ, ಕೆಲವೊಮ್ಮೆ ಅದರ ಜೀವನದ ಅರ್ಥವನ್ನೂ ಪೋಷಕರರಿಂದ ನಿರ್ಧರಿಸಲಾಗುತ್ತದೆ. ಆಗ ಪ್ರೀತಿ ನಿಧಾನವಾಗಿ ಅಧೀನಗೊಳಿಸುವ ನಿಯಂತ್ರಣ ಆಗುತ್ತದೆ. ಇಲ್ಲಿ ಒಂದು ಮೂಲಭೂತ ತಾತ್ವಿಕ ಪ್ರಶ್ನೆ ಇದೆ: ಮಗು ನಮ್ಮಿಂದ ಬಂದಿದೆಯೇ ಹೊರತು, ನಮಗಾಗಿ ಬಂದಿದೆಯೇ?

ಪೋಷಕತ್ವದ ಗುರಿ ಮಗುವನ್ನು ನಮ್ಮ ಪ್ರತಿರೂಪವನ್ನಾಗಿಸುವುದಲ್ಲ. ತನ್ನದೇ ನಿರ್ಧಾರಗಳನ್ನು ತೆಗೆದುಕೊಂಡು, ಅದರ ಪರಿಣಾಮಗಳಿಗೆ ಹೊಣೆ ಹೊತ್ತು, ಸ್ವತಂತ್ರವಾಗಿ ಬದುಕಬಲ್ಲ ವ್ಯಕ್ತಿಯನ್ನಾಗಿ ರೂಪಿಸುವುದು. ಅದು ಪ್ರಜಾಸತ್ತಾತ್ಮಕತೆಯ ಮೂಲಭೂತ ಮನೋವಿಜ್ಞಾನವೂ ಹೌದು.

ಮನೆಯಲ್ಲೇ ಪ್ರಜಾಪ್ರಭುತ್ವ ಎಂದರೆ ಮತದಾನದ ವಿಷಯವಲ್ಲ. ಮೇಲೆ ಹೇಳಿದಂತೆ ನೋಡುವುದಾದರೆ ಮಕ್ಕಳೇ ಎಲ್ಲವನ್ನೂ ನಿರ್ಧರಿಸಬೇಕೇ? ಎಂಬ ಪ್ರಶ್ನೆ ಬರಬಹುದು. ಹಾಗಲ್ಲ. ಪ್ರಜಾಸತ್ತಾತ್ಮಕ ಪೋಷಕತ್ವ ಎಂದರೆ ಅಧಿಕಾರಯುತವಿಲ್ಲದೆಯೇ ಇರುವ ಪೋಷಕತ್ವ ಅಲ್ಲ. ಖಂಡಿತವಾಗಿಯೂ ಮಗುವಿನ ವಯಸ್ಸಿಗೆ ತಕ್ಕ ಮಿತಿ ಬೇಕು. ನಿಯಮ ಬೇಕು. ಮಾರ್ಗದರ್ಶನ ಬೇಕು. ಆದರೆ ಅಧಿಕಾರ ಉತ್ತರದಾಯಿತ್ವ ಹೊಂದಿರುವ, ಹೊಣೆಗಾರಿಕೆಯ ಲಕ್ಷಣಗಳನ್ನು ಹೊಂದಿರಬೇಕು.

ಇದು ನಿಯಮ ಎನ್ನುವುದರ ಜೊತೆಗೆ ಈ ನಿಯಮ ಏತಕ್ಕಾಗಿ ಎಂಬುದನ್ನು ವಿವರಿಸಬಲ್ಲ ಪೋಷಕರು ಬೇಕು. ಮಗುವಿನ ಮಾತನ್ನು ಕೇಳಿದ ನಂತರವೂ ಇಲ್ಲ ಎನ್ನಬಹುದು. ಆದರೆ ಕೇಳದೆ ಇಲ್ಲ ಎನ್ನುವುದಕ್ಕೂ, ಕೇಳಿ ಕಾರಣದೊಂದಿಗೆ ಇಲ್ಲ ಎನ್ನುವುದಕ್ಕೂ ಮನೋವೈಜ್ಞಾನಿಕವಾಗಿ ಬಹಳ ವ್ಯತ್ಯಾಸವಿದೆ.

ಪ್ರಜಾಪ್ರಭುತ್ವ ಒಂದು ಭಾವ ಕೌಶಲ್ಯವೂ ಹೌದು ಎಂಬುದನ್ನು ಮರೆಯಬಾರದು. ಪ್ರಜಾಪ್ರಭುತ್ವ ಕೇವಲ ರಾಜಕೀಯ ವ್ಯವಸ್ಥೆ ಅಲ್ಲ. ಅದು ಕೆಲವು ಮಾನಸಿಕ ಸಾಮರ್ಥ್ಯಗಳನ್ನು ಬೇಡುತ್ತದೆ: ನನ್ನ ಮಾತೇ ನಡೆಯದಿದ್ದಾಗ ಸಹಿಸಿಕೊಳ್ಳುವುದು. ನನಗೆ ಇಷ್ಟವಿಲ್ಲದ ಅಭಿಪ್ರಾಯವನ್ನೂ ಕೇಳುವುದು. ತಪ್ಪಾದಾಗ ಒಪ್ಪಿಕೊಳ್ಳುವುದು. ಸೋತಾಗ ವ್ಯವಸ್ಥೆಯನ್ನೇ ನಾಶಮಾಡಲು ಹೊರಡದಿರುವುದು. ಅಧಿಕಾರ ಬಂದಾಗ ಪ್ರತೀಕಾರ ಮಾಡದಿರುವುದು. ಇವೆಲ್ಲವೂ ಮೊದಲು ಸಂಬಂಧಗಳಲ್ಲಿ ಅಭ್ಯಾಸವಾಗಬೇಕಾದ ಭಾವಕೌಶಲ್ಯಗಳು (emotional skills). ಹೀಗಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ನಿಭಾಯಿಸುವ ವಿಧಾನವೇ ನಾಳೆಯ ಪ್ರಜಾಪ್ರಭುತ್ವದ ತಾಲೀಮು ಆಗಬಹುದು.

ಒಂದು ಸಮಾಜವನ್ನು ಬದಲಾಯಿಸಬೇಕೆಂದರೆ ಮನೆಯ ನಡೆ ಮತ್ತು ನುಡಿಯ ಧಾಟಿಯನ್ನೂ ಬದಲಾಯಿಸಬೇಕು. ಬೇರೆ ದಾರಿಯೇ ಇಲ್ಲ. ನಾವು ಮಕ್ಕಳಿಗೆ ಸಂವಿಧಾನದ ಪ್ರಸ್ತಾವನೆ ಓದಿಸಬಹುದು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಈ ಪದಗಳೆಲ್ಲವನ್ನೂ ಕಲಿಯಬಹುದು. ಆದರೆ ತಂದೆ ತನ್ನ ಹೆಂಡತಿಯನ್ನು ಅವಮಾನಿಸುತ್ತಿದ್ದರೆ ಭ್ರಾತೃತ್ವದ ಪಾಠ ದುರ್ಬಲವಾಗುತ್ತದೆ.

ಮಗಳ ಸ್ವಾತಂತ್ರ್ಯವನ್ನು ನಿಯಂತ್ರಿಸುತ್ತಾ ಮಗನಿಗೆ ವಿಶೇಷಾಧಿಕಾರ ಕೊಟ್ಟರೆ ಸಮಾನತೆ ಬರಿಯ ಪುಸ್ತಕದಲ್ಲೇ ಉಳಿಯುತ್ತದೆ. ಮಗು ಪ್ರಶ್ನಿಸಿದ್ದಕ್ಕೆ ಶಿಕ್ಷಿಸಿದರೆ ಸ್ವಾತ್ರಂತ್ರ್ಯ ಬರೀ ಭಾಷಣದಲ್ಲಿ ಮಾತ್ರ ಉಳಿಯುತ್ತದೆ. ತಪ್ಪು ಮಾಡದ ಮಗುವನ್ನೂ ಅನುಮಾನಿಸಿ ಶಿಕ್ಷಿಸಿದರೆ ನ್ಯಾಯಕ್ಕೆ ಅರ್ಥವೇ ಉಳಿಯುವುದಿಲ್ಲ. ಚೆನ್ನಾಗಿ ನೆನಪಿಡೋಣ, ಮಕ್ಕಳು ನಾವು ಹೇಳುವ ಮೌಲ್ಯಗಳಿಗಿಂತ, ನಾವು ಬದುಕುವ ಸಂಬಂಧಗಳನ್ನು ಹೆಚ್ಚು ಆಳವಾಗಿ ಕಲಿಯುತ್ತಾರೆ. ಆದ್ದರಿಂದ ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸ ಚುನಾವಣಾ ಆಯೋಗದ ಕೆಲಸ ಮಾತ್ರವಲ್ಲ. ಅದು ಮನೆಯ ಹಾಲ್‌ನಲ್ಲಿ ಆರಂಭವಾಗುತ್ತದೆ. ಊಟದ ಮೇಜಿನ ಬಳಿ ಆರಂಭವಾಗುತ್ತದೆ. ‘‘ನನ್ನ ಮಾತು ಕೇಳು’’ ಎಂಬ ವಾಕ್ಯವನ್ನು ‘‘ನಿನ್ನ ಮಾತನ್ನೂ ಕೇಳುತ್ತೇನೆ; ನಂತರ ಇಬ್ಬರೂ ಯೋಚಿಸೋಣ’’ ಎಂದು ಬದಲಿಸುವಲ್ಲಿಂದ ಆರಂಭವಾಗುತ್ತದೆ. ಏಕೆಂದರೆ ಇಂದು ಮನೆಯೊಳಗೆ ಪ್ರಶ್ನಿಸಲು ಹೆದರದ ಮಗು, ನಾಳೆ ಅಧಿಕಾರದ ಎದುರು ಪ್ರಶ್ನಿಸಲು ಹೆದರದ ನಾಗರಿಕನಾಗಬಹುದು. ಇಂದು ತನ್ನ ತಪ್ಪಿಗೆ ಮಗುವಿನ ಬಳಿ ಕ್ಷಮೆ ಕೇಳಬಲ್ಲ ತಂದೆ, ಅಧಿಕಾರವೆಂದರೆ ಅಹಂಕಾರವಲ್ಲ ಎಂಬ ಪಾಠವನ್ನು ಕಲಿಸುತ್ತಾನೆ. ಇಂದು ಮಗುವಿನ ಸ್ವಾತಂತ್ರ್ಯವನ್ನು ಗೌರವಿಸುವ ತಾಯಿ ಸ್ವಾತಂತ್ರ್ಯವನ್ನು ಪಾಠ ಮಾಡದೆ ಬದುಕಿ ತೋರಿಸುತ್ತಿದ್ದಾಳೆ. ಹೀಗಾಗಿ ಭಾರತದ ಮನಸ್ಸನ್ನು ಬದಲಾಯಿಸಬೇಕೆಂದರೆ ಮೊದಲು ಅದರ ಬಾಲ್ಯವನ್ನು ನೋಡಬೇಕು.

ಏಕೆಂದರೆ ಪ್ರತಿಯೊಂದು ಪ್ರಜಾಪ್ರಭುತ್ವವೂ ಸಂಸತ್ತಿನಲ್ಲಿ ಹುಟ್ಟುವುದಿಲ್ಲ. ಅದು ಮೊದಲು ಒಂದು ಮನೆಯೊಳಗೆ, ಅದರಲ್ಲಿಯೂ ಒಂದು ಮಗುವಿನ ಮನಸ್ಸಿನಲ್ಲಿ ಹುಟ್ಟುತ್ತದೆ.

(ಅಂಕಣಗಾರರು: ಹಿರಿಯ ಬರಹಗಾರರು,

ಚಿಂತಕರು)

share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X