Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ವಿರೇಚನ

ವಿರೇಚನ

ವಾರ್ತಾಭಾರತಿವಾರ್ತಾಭಾರತಿ26 July 2026 10:36 AM IST
share
ವಿರೇಚನ

ಮನುಷ್ಯನ ಮೇಲಿನ ಒತ್ತಡವು ಯಾವುದೋ ನಡೆದಿರುವ ಘಟನೆ (Event)ಯಿಂದ ನೇರವಾಗಿ ಬರುವುದಿಲ್ಲ. ಘಟನೆಯನ್ನು ನಾವು ಹೇಗೆ ಅರ್ಥೈಸುತ್ತೇವೆ (Appraisal) ಮತ್ತು ಅದನ್ನು ಹೇಗೆ ನಿಭಾಯಿಸುತ್ತೇವೆ (Coping) ಎಂಬುದರ ಮೇಲೆ ಒತ್ತಡ ನಿರ್ಧಾರವಾಗುತ್ತದೆ. ಹಾಗಾಗಿ ಒತ್ತಡಕ್ಕೆ ಕಾರಣವಾಗಿರುವ ಘಟನೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಪ್ರಕ್ರಿಯೆ ಒಂದೇ ಆಗಿರಬೇಕೆಂದಿಲ್ಲ.

ಒಬ್ಬ ಗಂಡ ತನ್ನ ಹೆಂಡತಿಯ ನಡೆಯ ಬಗ್ಗೆ ಕೋಪಗೊಳ್ಳುತ್ತಾನೆ. ಇದರಿಂದ ಅಸಮಾಧಾನ ಮತ್ತು ಒತ್ತಡ ಉಂಟಾಗುತ್ತದೆ. ಅದರಿಂದ ಹೊರಗೂ ಮತ್ತು ಒಳಗೂ ಸಂಘರ್ಷವಾಗುತ್ತಿರುತ್ತದೆ. ಅವನು ತನ್ನ ಸ್ನೇಹಿತನ ಅಥವಾ ಇನ್ಯಾರೋ ಹೆಂಡತಿಯನ್ನು ನೋಡುತ್ತಾನೆ. ಆಕೆ ಇನ್ನೂ ಸಮಸ್ಯಾತ್ಮಕವಾಗಿ ಕಾಣುತ್ತಾಳೆ. ಆಗ ತನ್ನ ಹೆಂಡತಿಯೇ ಮೇಲು ಎಂದೆನಿಸುತ್ತದೆ. ಅಂದರೆ, ತನ್ನ ಹೆಂಡತಿಯ ವರ್ತನೆ ಬದಲಾಗದಿದ್ದರೂ, ಅವನ ದೃಷ್ಟಿಕೋನ ಬದಲಾದರೆ ಅಥವಾ ಬೇರೆ ಅನುಭವದಿಂದ ಮನಸ್ಸು ಮರುಮೌಲ್ಯಮಾಪನ (Reappraisal) ಮಾಡಿದರೆ, ಒತ್ತಡ ಕಡಿಮೆಯಾಗಬಹುದು.

ವ್ಯಕ್ತಿ ತನ್ನ ತಿಳಿವಳಿಕೆಯನ್ನು ಮರು ಮೌಲ್ಯಮಾಪನ ಮಾಡಿಕೊಳ್ಳುವುದಕ್ಕೆ Cognitive Reappraisal ಎನ್ನುವರು. ಇದು ಭಾವನಿರ್ವಹಣೆಯ (Emotion Regulation) ಪ್ರಮುಖ ವಿಧಾನ. ಈಗ ಹೇಳಿದ ಉದಾಹರಣೆಯನ್ನೇ ಗಮನಿಸಿದರೆ, ‘‘ನನ್ನ ಹೆಂಡತಿ ತುಂಬಾ ಕೆಟ್ಟವಳು’’ ಎನ್ನುವ ಭಾವನೆ, ‘‘ಅವಳು ಅಷ್ಟು ಕೆಟ್ಟವಳಲ್ಲ’’ ಎಂದು ಬದಲಾದ ಕ್ಷಣದಲ್ಲಿ ಘಟನೆ ಬದಲಾಗದಿದ್ದರೂ ಭಾವನೆ ಬದಲಾಗಿರುತ್ತದೆ. ಎಷ್ಟೋ ಸಲ ತನ್ನ ಪರಿಸ್ಥಿತಿಗಿಂತ ಹೆಚ್ಚು ಕಷ್ಟದಲ್ಲಿರುವವರನ್ನು ನೋಡಿದಾಗ ತನ್ನ ಮನಸ್ಸಿಗೆ ಸಮಾಧಾನ ದೊರಕುವುದು. ಇದು ಕೆಳನೋಟದ ಸಾಮಾಜಿಕ ಹೋಲಿಕೆ (Downward Social Comparison). ತನ್ನ ಸಮಸ್ಯೆಯನ್ನೇ ತಾನು ನೋಡಿಕೊಂಡು ಇರುವಾಗ ಅದೊಂದೇ ಕಾಣುತ್ತಿರುತ್ತದೆ. ಬೇರೆ ವಿಷಯಗಳನ್ನು ಗ್ರಹಿಸಲು ಪ್ರಾರಂಭಿಸಿದಾಗ ಹೋಲಿಕೆಗಳು ಸಹಜವಾಗಿ ಕಾಣುತ್ತವೆ. ಇದರಿಂದ ಒತ್ತಡಗಳನ್ನು ಕಡಿಮೆಯಾಗಿಸಿಕೊಳ್ಳುವ ರಕ್ಷಣಾ ತಂತ್ರವನ್ನು ಮನಸ್ಸು ಕಾರ್ಯಗತಗೊಳಿಸಲು ತೊಡಗುತ್ತದೆ. ಅದಕ್ಕೆ ಈ ರೀತಿಯಲ್ಲಿ ಒಂದಿಷ್ಟು ಅವಕಾಶಗಳು ಸಿಗಬೇಕು ಅಷ್ಟೇ.

ಮನೆಯಲ್ಲಿಯೋ, ವೈಯಕ್ತಿಕವಾಗಿಯೋ, ಕೆಲಸ ಮಾಡುವ ವಿಷಯಗಳಲ್ಲಿಯೋ ಒತ್ತಡಗಳು ಉಂಟಾಗಿರುತ್ತವೆ, ಅದೇ ರೀತಿ ನಾವಿರುವ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಗಳೂ ಕೂಡಾ ಒತ್ತಡಗಳನ್ನು ಉಂಟು ಮಾಡುತ್ತಿರುತ್ತವೆ. ಹಾಗಾಗಿ, ವ್ಯವಸ್ಥೆಯ ವಿರುದ್ಧ ಮಾತನಾಡುವುದು, ರಾಜಕೀಯದ ಬಗ್ಗೆ ಕೋಪ ಹೊರಹಾಕುವುದು, ಸಮಾಜದ ಬಗ್ಗೆ ಬೇಸರ ವ್ಯಕ್ತಪಡಿಸುವುದು; ಇವು ಕೂಡಾ ಭಾವನಾತ್ಮಕ ಬಿಡುಗಡೆ (Emotional Venting/Catharsis) ಆಗಬಹುದು. ಆದರೆ ಇಲ್ಲಿ ಒಂದು ಎಚ್ಚರಿಕೆಯನ್ನೂ ಗಮನಿಸಬೇಕಾಗಿದೆ. ಎಲ್ಲಾ ಕೋಪವನ್ನು ಹೊರಹಾಕುವುದರಿಂದ ಕೋಪ ಕಡಿಮೆಯಾಗುವುದಿಲ್ಲ. ಕೋಪವನ್ನು ಹೊರ ಹಾಕುವ ಉನ್ಮಾದದ ರೂಢಿ ಬಲವಾದಲ್ಲಿ ಕೆಲವೊಮ್ಮೆ ಅದು ಇನ್ನಷ್ಟು ಹೆಚ್ಚಾಗಬಹುದು. ಆದ್ದರಿಂದ ವಿರೇಚನ (Catharsis)ಕ್ಕೆ ಮಿತಿ ಇದೆ.

ಒಟ್ಟಾರೆ ಮನಸ್ಸಿನಲ್ಲಿರುವ ನಕಾರಾತ್ಮಕ ಭಾವನೆಗಳು ಒಂದಕ್ಕೊಂದು ಬೆರೆತಿರುವುದರಿಂದ, ಒಂದು ಮೂಲದಿಂದ ಭಾವನಾತ್ಮಕ ಸಮತೋಲನ ಬಂದರೆ, ಬೇರೆ ಮೂಲಗಳಿಂದ ಬಂದಿದ್ದ ಒತ್ತಡವೂ ಕಡಿಮೆಯಾಗಬಹುದು. ಏಕೆಂದರೆ, ಮನಸ್ಸು ಪ್ರತೀ ಒತ್ತಡವನ್ನೂ ಬೇರೆ ಬೇರೆ ಫೈಲ್‌ನಲ್ಲಿ ಇಟ್ಟುಕೊಳ್ಳುವುದಿಲ್ಲ. ಅವು ಒಟ್ಟಾಗಿ ಒಂದು ಭಾವನಾತ್ಮಕ ಒತ್ತಡ (Emotional Load) ಆಗಿರುವ ಅನುಭವವಾಗುತ್ತವೆ.

ಒತ್ತಡಗಳನ್ನು ಹೊರ ಹಾಕುವಂತಹ ವಿರೇಚನಗಳು ಕಾರಣಗಳನ್ನು ಕ್ಷಮಿಸುವುದಿಲ್ಲ. ಆದರೆ ಅವುಗಳ ಭಾವನಾತ್ಮಕ ತೀವ್ರತೆ ಕಡಿಮೆಯಾಗುತ್ತದೆ. ಏಕೆಂದರೆ ಗಂಡನಿಗೆ ಹೆಂಡತಿಯ ಸಮಸ್ಯೆ ಇದ್ದರೆ, ಅದು ಇನ್ನೂ ಇರುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಕೋಪ, ನೋವು, ಒತ್ತಡ, ತೀವ್ರತೆ ಕಡಿಮೆಯಾಗುವುದು.

ಯಾವುದೇ ಮನಸ್ಸು ತಾನಿರುವ ಪರಿಸ್ಥಿತಿಯನ್ನು ಅಳೆಯುವಾಗ, ‘ಆಗ’ ತಾನು ಆ ಪರಿಸ್ಥಿತಿಯನ್ನು ಹೇಗೆ ಅನುಭವಿಸುತ್ತಿದ್ದೆ ಎಂಬುದನ್ನೇ ಗಮನಿಸುವುದು. ಆದ್ದರಿಂದ, ಮನಸ್ಸು ಬೇರೆ ಕಾರಣದಿಂದ ಹಗುರವಾದರೆ, ಅದೇ ಸಮಸ್ಯೆಯ ಗಂಭೀರತೆಯನ್ನು ಕಡಿಮೆ ಮಾಡಬಹುದು. (Affect-as-Information Theory).

ಒತ್ತಡಕ್ಕೆ ಕಾರಣವಾಗಿರುವ ಸಮಸ್ಯೆಯೇ ಪರಿಹಾರವಾಗಬೇಕೆಂದಿಲ್ಲ. ಒತ್ತಡವನ್ನು ಅನುಭವಿಸುವ ಮನಸ್ಸಿನ ಸ್ಥಿತಿ ಬದಲಾದರೆ, ಅದೇ ಸಮಸ್ಯೆಯ ಭಾವನಾತ್ಮಕ ತೀವ್ರತೆ ಕಡಿಮೆಯಾಗುತ್ತದೆ. ಏಕೆಂದರೆ ಮನಸ್ಸು ವಿವಿಧ ಮೂಲಗಳಿಂದ ಬಂದ ಭಾವನೆಗಳನ್ನು ಒಟ್ಟಾಗಿ ಒಂದು ಭಾವನಾತ್ಮಕ ಹೊರೆ (Emotional Load)ಯಾಗಿ ಅನುಭವಿಸುತ್ತದೆ. ಆ ಹೊರೆ ಯಾವುದಾದರೂ ಒಂದು ಆರೋಗ್ಯಕರ ಮಾರ್ಗದಿಂದ ಹಗುರವಾದರೆ, ಬೇರೆ ಕಾರಣಗಳಿಂದ ಬಂದಿದ್ದ ಒತ್ತಡವೂ ಕಡಿಮೆಯಾಗುತ್ತದೆ.

ಕಚೇರಿಯಲ್ಲಿ ಬಾಸ್ ಬೈದಿದ್ದಾನೆ. ಮನೆಗೆ ಬಂದು ಮಗುವಿನ ನಗು ನೋಡಿದಾಗ ಮನಸ್ಸು ಹಗುರವಾಗುತ್ತದೆ. ಬಾಸ್ ಬದಲಾಗಿಲ್ಲ. ಆಸ್ಪತ್ರೆಯಲ್ಲಿ ಆತಂಕದಲ್ಲಿದ್ದ ವ್ಯಕ್ತಿ, ವೈದ್ಯರು ‘ಅಪಾಯವಿಲ್ಲ’ ಎಂದ ಎರಡು ಮಾತಿಗೆ ಸಮಾಧಾನಗೊಳ್ಳುತ್ತಾನೆ. ದೇಹದ ಸ್ಥಿತಿ ಬದಲಾಗಿಲ್ಲ; ಆದರೆ ಮನಸ್ಸಿನ ಮೌಲ್ಯಮಾಪನ ಬದಲಾಗಿದೆ. ಸ್ನೇಹಿತನೊಂದಿಗೆ ಒಂದು ಗಂಟೆ ಹೃದಯ ಬಿಚ್ಚಿ ಮಾತನಾಡಿದ ಮೇಲೆ ಮನಸ್ಸು ಹಗುರವಾಗುತ್ತದೆ. ಸಮಸ್ಯೆಗಳು ಹಾಗೆಯೇ ಇವೆ. ಪ್ರಕೃತಿಯಲ್ಲಿ ಒಂದು ನಡಿಗೆ, ಸಂಗೀತ, ಪ್ರಾರ್ಥನೆ, ಧ್ಯಾನ, ವ್ಯಾಯಾಮ, ಕಲೆ; ಇವು ಯಾವುದೂ ಸಮಸ್ಯೆಯನ್ನು ನೇರವಾಗಿ ಪರಿಹರಿಸುವುದಿಲ್ಲ. ಆದರೆ ಒತ್ತಡವನ್ನು ಕಡಿಮೆ ಮಾಡುತ್ತವೆ. ಈ ಎಲ್ಲ ಉದಾಹರಣೆಗಳು ಒಂದೇ ಸತ್ಯವನ್ನು ಹೇಳುತ್ತವೆ, ಮನಸ್ಸು ಯಾವಾಗಲೂ ಕಾರಣಗಳಿಗೆ ಪ್ರತಿಕ್ರಿಯಿಸುವುದಿಲ್ಲ; ಅದು ತನ್ನ ಭಾವನಾತ್ಮಕ ಸ್ಥಿತಿಗೆ ಪ್ರತಿಕ್ರಿಯಿಸುತ್ತದೆ.

ಒತ್ತಡವನ್ನು ಕಡಿಮೆ ಮಾಡುವುದು ಎಂದರೆ ಸಮಸ್ಯೆಯನ್ನು ನಿರ್ಲಕ್ಷಿಸುವುದಲ್ಲ. ಹಿಂಸೆ, ಅನ್ಯಾಯ, ಆರೋಗ್ಯದ ತೊಂದರೆ, ಆರ್ಥಿಕ ಸಂಕಷ್ಟಗಳಂತಹ ಸಮಸ್ಯೆಗಳಿಗೆ ನೇರ ಪರಿಹಾರ ಬೇಕೇ ಬೇಕು. ಆದರೆ ಆ ಪರಿಹಾರವನ್ನು ಹುಡುಕುವ ಶಕ್ತಿ ಬರಬೇಕಾದರೂ ಮೊದಲು ಮನಸ್ಸು ಸ್ಥಿರವಾಗಬೇಕು. ಒತ್ತಡವನ್ನು ಕಡಿಮೆ ಮಾಡುವುದು ಎಂದರೆ ಸಮಸ್ಯೆಯಿಂದ ಓಡಿಹೋಗುವುದು ಅಲ್ಲ; ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಆಂತರಿಕ ನೆಲೆಯನ್ನು ನಿರ್ಮಿಸುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X