Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಜನಪದರ ಹಾಡಿಕೆಗಳಲ್ಲಿ ‘ಸಿದ್ದರಾಮಯ್ಯ’

ಜನಪದರ ಹಾಡಿಕೆಗಳಲ್ಲಿ ‘ಸಿದ್ದರಾಮಯ್ಯ’

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ2 Jun 2026 10:09 AM IST
share
ಜನಪದರ ಹಾಡಿಕೆಗಳಲ್ಲಿ ‘ಸಿದ್ದರಾಮಯ್ಯ’

ಸಿದ್ದರಾಮಯ್ಯ ಅವರ ನಡೆ, ನುಡಿ, ಉಡುಗೆ, ತೊಡುಗೆ ಕೂಡ ಜನಪದರನ್ನು ಆಕರ್ಷಿಸಿವೆ. ಅವರು ಧರಿಸುವ ಬಿಳಿ ಪಂಚೆ, ಶರ್ಟು, ಹೆಗಲ ಮೇಲೊಂದು ಟವಲ್ಲು, ಮಾತಿನಲ್ಲಿ ಹಳ್ಳಿಗಾಡಿನ ಸೊಗಡು, ವರ್ಷಕ್ಕೊಮ್ಮೆ ಊರ ಹಬ್ಬದಲ್ಲಿ ತನ್ನೂರ ಜನರ ಜತೆ ವೀರಕುಣಿತಕ್ಕೆ ಹಾಕುವ ಹೆಜ್ಜೆ ಈ ಬಗೆಯ ಹಳ್ಳಿತನದ ಗುರುತುಗಳು ಜನಪದರಿಗೆ ಸಹಜವಾಗಿ ‘ಇವ ನಮ್ಮವ’ ಎಂಬ ಅಭಿಮಾನ ಮೂಡಿಸಿದೆ. ನಾವು ಜನಪದರ ಹಾಡಿನಿಂದ ಅಭಿಮಾನವನ್ನಲ್ಲದೆ, ವಿಮರ್ಶೆಯನ್ನಾಗಲಿ ಟೀಕೆಯನ್ನಾಗಲಿ ಕಾಣಲಾಗದು.

ಸಿಟ್ಟಿನೊಳಗಾ ಭೀಮನಂಗಾ

ನಿಷ್ಠೆಯೊಳಗ ಧರ್ಮನಂಗಾ

ಸಿದ್ದರಾಮಯ್ಯಾ

ಹಿಡದಾ ಬಡವರ ಕೈಯಾ॥ ಸಿಟ್ಟಿನೊಳಗ॥

ಜನುಮತಾಳಿದ ಸಿದ್ದರಾಮನ ಹುಂಡ್ಯಾಗ

ಬೆಳದು ಬಂದುದಾ ಹಾಲುಮತದ ಬಳ್ಯಾಗ

ಈ ನಾಡಿನ ಜನಕಾ

ನೀ ಆಗಿದಿ ತಿಲಕಾ ॥ ಸಿಟ್ಟಿನೊಳಗ॥

ಬೆಟ್ಟದಷ್ಟು ಕಷ್ಟ ಮೆಟ್ಟಿ ತುಳದಿ ಮಣ್ಣಾಗಾ

ಗಟ್ಟಿತನದಿಂದ ಬೆಳದಿ ಕನ್ನಡ ನಾಡಾಗಾ

ನೇರ ಮಾತಿನ ಶೂರ

ವೈರಿಗಿ ಆಗಿದಿ ಖಾರಾ ॥ ಸಿಟ್ಟಿನೊಳಗ॥

ಸೆಡ್ಡು ಹೊಡದಿದೋ ನೀನು ವಿಧಾನ ಸೌಧದಾಗಾ

ದೊಡ್ಡ ಜನಾ ಸೇರ್ಯಾರೋ ಬಳ್ಳಾರಿ ನಾಡಾಗಾ

ನೀ ಹೊಡದರ ಗುಡುಗಾ

ಧನಿಗಳಿಗೆ ಹತ್ಯಾದ ನಡುಗಾ ॥ ಸಿಟ್ಟಿನೊಳಗ॥

ಹುಲಿಯಾಗಿ ಮೆರೆದಿದೋ ನೀನು ಅಧಿಕಾರದಾಗಾ

ಇಲಿಗಳು ಹೊಕ್ಕಾವೋ ಹೋಗಿ ಉತ್ತಿನ ಒಳಗಾ

ಬುದ್ಧಿ ಒಳಗಾ ಚಾಣಕ್ಯಾ

ನೀ ಎಣಿಸಿದರ ಮಾಣಿಕ್ಯ ॥ ಸಿಟ್ಟಿನೊಳಗ॥

ಎಂದು ಹಾಡುತ್ತಾ, ಹಾಡು ನಿಲ್ಲಿಸಿ ಜನಪದ ಕವಿ ಕೇಳುಗರೊಂದಿಗೆ ಸಂವಾದ ಮಾಡುತ್ತಾನೆ. ‘‘ಬಡವರ ಕಷ್ಟ ಕಂಡು ಫ್ರೀ ಅಕ್ಕಿ ಮಾಡಿದ್ರು ಹಾಲುಮತದ ಸಿದ್ರಾಮಯ್ಯ, ಯಾಕ್ ಮಾಡಿದ್ರು ಅಂತಾ ಕೇಳಿದ್ರಾ, ಶ್ರೀಮಂತರೇ ಹೊಟ್ಟಿತುಂಬಾ ಊಟ ಮಾಡಿ ಕಣ್ತುಂಬಾ ನಿದ್ದಿ ಮಾಡಾಕತ್ಯಾರ, ಬಡವರೂ ಕೂಡ ಹೊಟ್ಟೆತುಂಬಾ ಊಟ ಮಾಡಿ ಕಣ್ತುಂಬಾ ನಿದ್ದೆ ಮಾಡಲಿ ಅಂತ ಅನ್ನಭಾಗ್ಯ ತಂದಾರ..’’ಎನ್ನುತ್ತಾನೆ. ಜನ ಕೇಕೆ ಹಾಕುತ್ತಾರೆ. ಹೀಗೆ ಪದಕಟ್ಟಿ ಹಾಡಿದವರು ಜನಪದ ಕವಿ ಅಫಜಲಪುರದ ಪುಂಡಲೀಕ ಮಾಸ್ತರ. ಈ ಪದ ಎಷ್ಟು ಜನಪ್ರಿಯವಾಯಿತೆಂದರೆ ಡೊಳ್ಳಿನ ಪದ ಹಾಡುವ ಗಂಡಸರು ಮತ್ತು ಹುಡುಗಿಯರ ಹಲವು ತಂಡಗಳಲ್ಲಿ ಈ ಪದಕ್ಕೆ ಬೇಡಿಕೆ ಹೆಚ್ಚಾಯಿತು. ಉತ್ತರ ಕರ್ನಾಟಕದ ಪ್ರತೀ ಹಳ್ಳಿಗಳಲ್ಲಿ ಏರ್ಪಡಿಸಿದ ಡೊಳ್ಳಿನ ಹಾಡಿಕೆಯಲ್ಲಿ ಈ ಪದಕ್ಕೆ ಜನರಿಂದಲೇ ಒತ್ತಡ ಬಂದು ಹಾಡಿಸಿಕೊಳ್ಳುತ್ತಿತ್ತು. ಹಾಗಾಗಿ ಈ ಪದವನ್ನು ಹಲವಾರು ಡೊಳ್ಳಿನ ಹಾಡಿಕೆ ತಂಡಗಳು ಹಾಡಿವೆ. ಈ ಹಾಡಿಕೆಯನ್ನು ನೇರವಾಗಿ ಲಕ್ಷಾಂತರ ಜನ ಕೇಳಿದ್ದಾರೆ, ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿದ ನಂತರ ಈ ಆಡಿಯೊ-ವೀಡಿಯೊಗಳನ್ನು ಲಕ್ಷಾಂತರ ಜನರು ನೋಡಿ ಕೇಳಿಸಿಕೊಂಡಿದ್ದಾರೆ.

ಇದೀಗ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟಿದ್ದಾರೆ. ಬಹುಶಃ ಕರ್ನಾಟಕದ ಬೇರೆ ಯಾವ ಮುಖ್ಯಮಂತ್ರಿ ರಾಜಿನಾಮೆ ನೀಡಿದಾಗಲೂ ಜನರು ಇಷ್ಟು ಭಾವುಕರಾಗಿರಲಿಕ್ಕಿಲ್ಲ. ಇದುವೇ ಸಿದ್ದರಾಮಯ್ಯ ಜನರ ಮನಸ್ಸಲ್ಲಿ ಸ್ಥಾನ ಪಡೆದಿದ್ದರ ಕುರುಹು. ಬಹುಶಃ ಸಿದ್ದರಾಮಯ್ಯನವರ ಜತೆಗೇ ‘ಮಾಸ್ ಲೀಡರ್’ ಎನ್ನುವ ಪರಂಪರೆ ಮಸುಕಾಗಬಹುದು. ಈಗಷ್ಟೇ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಸಾರಥ್ಯ ವಹಿಸಿಕೊಳ್ಳುವ ಸಿದ್ಧತೆ ಭರದಿಂದ ಸಾಗಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಆಡಳಿತದ ಪರಾಮರ್ಶೆ ನಡೆಯುತ್ತಿದೆ. ಮೊದಲ ಹಂತದ ಆಡಳಿತವನ್ನು ಎರಡನೇ ಹಂತದ ಆಡಳಿತದ ಜತೆ ಹೋಲಿಕೆ ಮಾಡಿ ಚರ್ಚಿಸಲಾಗುತ್ತಿದೆ. ಪರ ವಿರೋಧದ ಸಂವಾದಗಳೂ ನಡೆಯುತ್ತಿವೆ. ಸಿದ್ದರಾಮಯ್ಯನವರ ಕಾಲದ ಗ್ಯಾರಂಟಿಗಳು, ಹಗರಣಗಳು, ತಪ್ಪು ನಡೆಗಳು, ಅಪರೂಪದ ನಡೆ-ನುಡಿ-ಗುಣಗಳ ಬಗ್ಗೆ ಮಾತುಕತೆ, ಸೋಷಿಯಲ್ ಮೀಡಿಯಾದ ಪೋಸ್ಟ್‌ಗಳು ಹೀಗೆ ನಿರಂತರವಾಗಿ ಚಾಲ್ತಿಯಲ್ಲಿವೆ.

ನಾನೊಬ್ಬ ಜಾನಪದ ಸಂಶೋಧಕನಾಗಿ ನನ್ನ ಆಸಕ್ತಿಯ ಮೌಖಿಕ ಸಾಹಿತ್ಯದ ಹಾಡಿಕೆಗಳಲ್ಲಿ ಸಿದ್ದರಾಮಯ್ಯ ಹೇಗೆ ನಿರೂಪಿಸ ಲ್ಪಟ್ಟಿದ್ದಾರೆ? ಅಸಲಿಗೆ ಜನಸಾಮಾನ್ಯರು ಸಿದ್ದರಾಮಯ್ಯನವರ ಕುರಿತ ಪದ ಕಟ್ಟಲು ಕಾರಣವೇನು? ಜನಪದರು ಹೀಗೆ ಎಲ್ಲರ ಬಗ್ಗೆ ಹಾಡು ಕಟ್ಟುತ್ತಾರೆಯೇ? ಹೀಗೆ ಚರ್ಚೆಗೆ ಬಾರದ ಕೆಲವು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಒಂದು ಸಂಗತಿ, ಒಂದು ವಿದ್ಯಮಾನ, ಒಬ್ಬ ವ್ಯಕ್ತಿ ಜನಪದರಲ್ಲಿ ಪದವಾಗಲು, ಹಾಡುಕಟ್ಟಲು ಜನಸಾಮಾನ್ಯರ ಮನದ ಆಳಕ್ಕೆ ಇಳಿದಿರಬೇಕು. ಜನರನ್ನು ಆಳವಾಗಿ ಕಲಕಿರಬೇಕು. ಕನ್ನಡ ಜನಪದ ಸಾಹಿತ್ಯದ ಚರಿತ್ರೆಯನ್ನು ಅವಲೋಕಿಸಿದರೆ ಇದರ ಪರಂಪರೆ ಲಭ್ಯವಾಗುತ್ತವೆ. ದಕ್ಷಿಣ ಭಾರತವನ್ನು ಆಳಿದ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕೃಷ್ಣದೇವರಾಯನ ಬಗ್ಗೆ ಜನಪದರು ಪದ ಕಟ್ಟಲಿಲ್ಲ, ಆದರೆ ವಿಜಯನಗರಕ್ಕೆ ಹೊಂದಿಕೊಂಡಿದ್ದ, ವಿಜಯನಗರಕ್ಕೂ ಪೂರ್ವದ ಪುಟ್ಟ ರಾಜ್ಯ ಕಂಪಲಿಯ ಕುಮಾರರಾಮನ ಬಗ್ಗೆ ಜನಪದರು ಹಾಡಿಹೊಗಳಿದ್ದಾರೆ. ಪದವಾಗಿ, ಗಾದೆಮಾತಾಗಿ, ಮಹಾಕಾವ್ಯವಾಗಿ, ದೈವವಾಗಿ ಇಡೀ ದಕ್ಷಿಣ ಭಾರತದಾದ್ಯಂತ ಮರುಹುಟ್ಟು ಪಡೆದಿದ್ದಾನೆ. 18ನೇ ಶತಮಾನದ ವರ್ಷರಂಜಿತ ವ್ಯಕ್ತಿ ಟಿಪ್ಪುಸುಲ್ತಾನನ ಬಗ್ಗೆ ಬ್ರಿಟಿಷರು ದ್ವೇಷಮಯ ಚರಿತ್ರೆ ದಾಖಲಿಸಿದರೆ ಜನಸಾಮಾನ್ಯರು ನೂರಾರು ಲಾವಣಿಗಳನ್ನು ಕಟ್ಟಿ ಟಿಪ್ಪುವನ್ನು ಜೀವಂತಗೊಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಬಗ್ಗೆ ನೂರಾರು ಜನಪದರು ಲಾವಣಿಗಳನ್ನು ಕಟ್ಟಿದರು. ಅದರೆ ಕರ್ನಾಟಕದ ಏಕೀಕರಣದ ಬಗ್ಗೆ ಅಷ್ಟಾಗಿ ಜನಪದರು ಪದ ಕಟ್ಟಲಿಲ್ಲ. ಗಾಂಧೀಜಿಯ ಬಗ್ಗೆ ಇಡೀ ಭಾರತದಲ್ಲಿ ಲಕ್ಷಾಂತರ ಜನಪದ ಹಾಡುಗಳನ್ನು ಹುಟ್ಟಿರಲಿಕ್ಕೆ ಸಾಧ್ಯವಿದೆ. ನಂತರದಲ್ಲಿ ನೆಹರೂ ಅವರಿಗಿಂತ ಇಂದಿರಾಗಾಂಧಿ ಬಡವರಿಗೆ ಅಗತ್ಯವಿದ್ದ ಯೋಜನೆಗಳನ್ನು ತಂದ ಕಾರಣ ಹೆಚ್ಚು ಜನಸಮುದಾಯವನ್ನು ತಾಕಿದರು. ಇದರ ಫಲವಾಗಿ ಇಂದಿರಾಗಾಂಧಿಯ ಬಗ್ಗೆ ನೂರಾರು ಜನಪದ ಗೀತೆಗಳು ಹುಟ್ಟಿದವು. ಆಧುನಿಕ ಭಾರತದಲ್ಲಿ ಇಡೀ ದಲಿತ ಸಮುದಾಯಗಳು ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಪದಕಟ್ಟಿ ಹಾಡುತ್ತಿವೆ. ಇದೀಗ ಅಂಬೇಡ್ಕರ್ ಜಾನಪದವೇ ಸೃಷ್ಟಿಯಾಗಿದೆ. ಬೀದರ್, ಕಲಬುರಗಿ ಭಾಗದಲ್ಲಿ ಹುಟ್ಟಿದ ಬುದ್ಧನ ಹಾಡುಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರೂ ಇದ್ದಾರೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಅಂಬೇಡ್ಕರ್ ಬಗ್ಗೆ ಪದ ಕಟ್ಟಿ ಹಾಡುವ ನೂರಾರು ಭಜನಾ ತಂಡಗಳಿವೆ. ಕನ್ನಡದ ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ತೀರಿದಾಗ ಪುನೀತ್ ಬಗ್ಗೆಯೂ ಹತ್ತಾರು ಹಾಡುಗಳು ಹುಟ್ಟಿದವು. ಇಂತಹದ್ದೇ ಪರಂಪರೆಯ ಭಾಗವಾಗಿಯೇ ಸಿದ್ದರಾಮಯ್ಯನವರ ಬಗ್ಗೆ ಜನಪದರು ಪದಗಳನ್ನು ಕಟ್ಟಿ ಜೀವಂತಗೊಳಿಸಿದ್ದಾರೆ. ಜನಸಾಮಾನ್ಯರನ್ನು ಯಾರು ಗಾಢವಾಗಿ ಪ್ರಭಾವಿಸುತ್ತಾರೋ ಅಂತಹವರು ಅವರೊಳಗಿಂದ ಪದಗಳಾಗಿ ಮರುಹುಟ್ಟು ಪಡೆಯುತ್ತಾರೆ. ಹೀಗಾಗಿ ಜನಮಾನಸವನ್ನು ತಾಕಿದ ಸಿದ್ದರಾಮಯ್ಯ ಕೂಡ ಜನಪದವಾಗಿ ಮರುಹುಟ್ಟು ಪಡೆದಿದ್ದಾರೆ.

ಸಿದ್ದರಾಮಯ್ಯನವರ ಬಗ್ಗೆ ಹುಟ್ಟಿದ ಜನಪದ ಹಾಡುಗಳನ್ನು ಒಟ್ಟಾಗಿಸಿ ಪರಿಶೀಲಿಸಿದರೆ ಯಾವ ಯಾವ ಕಾರಣಗಳಿಗಾಗಿ ಪದಕಟ್ಟಿದ್ದಾರೆ ಎನ್ನುವುದು ತಿಳಿಯುತ್ತದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಅನ್ನಭಾಗ್ಯವನ್ನು ಜಾರಿಗೊಳಿಸಿದಂದಿನಿಂದ ಸಿದ್ದರಾಮಯ್ಯನವರ ಬಗ್ಗೆ ಹೆಚ್ಚು ಹಾಡುಗಳು ಹುಟ್ಟಿವೆ. ಗ್ಯಾರಂಟಿ ಯೋಜನೆಗಳಿಂದಾಗಿ ಈ ಪದಗಳ ಸಂಖ್ಯೆ ಹೆಚ್ಚಾಗಿದೆ. ಅಂದರೆ ಜನರಿಗೆ ನೇರವಾಗಿ ತಲುಪುವ ಯೋಜನೆಗಳು ಈ ಹಾಡುಗಳನ್ನು ಹುಟ್ಟಿಸಿವೆ. ಈಗ ಹುಟ್ಟಿರುವ ಪದಗಳಲ್ಲಿ ಹೆಚ್ಚಾಗಿ ಡೊಳ್ಳಿನ ಹಾಡುಗಳು. ವಿಶೇಷವಾಗಿ ಹಾಲುಮತದ ಪ್ರಚಾರಕ್ಕಾಗಿ ಹುಟ್ಟಿಕೊಂಡ ಹಾಡಿಕೆ ಸಂಪ್ರದಾಯವಿದು. ಉತ್ತರ ಕರ್ನಾಟಕದಲ್ಲಿ ಈಗ ನೂರಾರು ಡೊಳ್ಳಿನ ಹಾಡಿನ ಕವಿಗಳಿದ್ದಾರೆ. ನಾಲ್ಕುನೂರಕ್ಕಿಂತ ಹೆಚ್ಚಿನ ಕ್ರಿಯಾಶೀಲ ಡೊಳ್ಳಿನ ಹಾಡಿಕೆ ತಂಡಗಳಿವೆ. ವಿಶೇಷವೆಂದರೆ ನೂರ ಐವತ್ತಕ್ಕಿಂತ ಹೆಚ್ಚು 8 ರಿಂದ 22 ವರ್ಷದ ಒಳಗಿನ ಹುಡುಗಿಯರು ಹಾಡುತ್ತಿದ್ದಾರೆ. ಇಷ್ಟು ವ್ಯಾಪಕವಾದ ಸಂವಹನ ಮಾಧ್ಯಮವಾದ ಡೊಳ್ಳಿನ ಹಾಡುಗಳಲ್ಲಿ ಸಿದ್ದರಾಮಯ್ಯ ಜನಪ್ರಿಯವಾಗಿರುವುದು ಅಚ್ಚರಿಯ ಸಂಗತಿ.

ಡೊಳ್ಳಿನ ಹಾಡುಗಳಲ್ಲಿ ಹಾಲುಮತದ ಅಥವಾ ಕುರುಬ ಸಮುದಾಯದ ಸಾಂಸ್ಕೃತಿಕ ನಾಯಕರಾದ ರೇವಣಸಿದ್ದ, ಮೈಲಾರಲಿಂಗ, ಮಾಳಪ್ಪ, ಬೀರಪ್ಪ, ಗಂಗಿಮಾಳವ್ವ, ಗೊಲ್ಲಾಳಪ್ಪ, ಸಂಗೊಳ್ಳಿ ರಾಯಣ್ಣ ಮೊದಲಾದವರ ಕಥನಗಳಿವೆ. ಇದೇ ಸಾಲಿನಲ್ಲಿ ಇಂತಹದ್ದೇ ಮಾದರಿಯಲ್ಲಿ ಸಿದ್ದರಾಮಯ್ಯನವರನ್ನು ಕುರಿತು ಹಾಡಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರು ಹಾಲುಮತ ಪಂಥದವರಾದ ಕಾರಣ ಈ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಹಾಗೆಂದು ಬೇರೆ ಯಾವ ಕುರುಬ ಸಮುದಾಯದ ರಾಜಕಾರಣಿಗಳ ಬಗ್ಗೆಯೂ ಈ ಬಗೆಯ ಪದಗಳನ್ನು ಕಟ್ಟಲಾಗಿಲ್ಲ ಎನ್ನುವುದನ್ನು ಗಮನಿಸಬೇಕು. ಈ ಕುರಿತು ಹುಟ್ಟಿದ ಪದಗಳನ್ನು ಗೆಳೆಯ ಚಂದ್ರಪ್ಪ ಸೊಬಟಿ ಸಂಗ್ರಹಿಸಿದ್ದಾರೆ, ಪುಸ್ತಕ ಪ್ರಕಟಿಸಬೇಕಿದೆ.

ಎರಡನೆಯದಾಗಿ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿರುವ ಭಜನಾ ಪರಂಪರೆಯಲ್ಲಿಯೂ ಸಿದ್ದರಾಮಯ್ಯನವರ ಬಗ್ಗೆ ಪದಗಳು ಹುಟ್ಟಿವೆ. ಮುದಗಲ್ಲು ಸಮೀಪದ ಕನ್ನಾಪುರಹಟ್ಟಿಯ ಮಾರುತೇಶ್ವರ ಭಜನಾ ಮಂಡಳಿ ‘‘ಸಿದ್ದರಾಮಯ್ಯನಂತಹ ಸಿಎಂ ಬೇಕು ರಾಜಕಾರಣಕ್ಕೆ/ನುಡಿದಂತೆ ನಡೆದು ರೂಪಾಯಿಗೆ ಚೀಲ ಹಂಚಿಬಿಟ್ಟಾನೋ ಅಕ್ಕಿ/ ಬಡವರ ಬಾಳಿನ ನಿಧಿಯಾಗಿ ಇವರು ಬಂದರಂತೆ/ಹಸಿದ ಒಡಲಿಗೆ ಅನ್ನಭಾಗ್ಯ ನೀಡಿ ದೇವರಾದನಂತೆ/ ಬಡವ ಶ್ರೀಮಂತ ಭೇದವಿಲ್ಲದೆ ಒಂದೇ ಸಮಾನವಂತೆ’’ ಎಂದು ಪದ ಕಟ್ಟಿ ಹಾಡಿದ್ದಾರೆ. ‘‘ಸಿದ್ರಾಮಣ್ಣ ಬಾಳ ಬಿರುಸಕ್ಕಾರಾ/ಇಂದಿನಾ ಕರುನಾಡ ಅರಸಕ್ಕಾರಾ/ ಕನ್ನಡ ನಾಡಿನ ಕಣ್ಮಣಿ ಇವರು/ಮಖ್ಯಮಂತ್ರಿ ಆಗಿದ್ದು ಕರೇ/ಬಡವರ ಪಾಲಿನ ಆಸ್ತಿ ಖರೇ/ಕರುನಾಡಲ್ಲಿ ಮತ್ತೆ ಎದ್ದು ಸರಕಾರ ರಚಿಸಿದ್ದು ಖರೇ’’ ಎಂದು ಹಾಡಿದ ತಾಳೇವಾಡ ಭಜನಾ ಸಂಘವನ್ನು ಒಳಗೊಂಡಂತೆ ಹಲವು ಭಜನಾ ತಂಡಗಳು ಸಿದ್ದರಾಮಯ್ಯನವರ ಬಗ್ಗೆ ಪದ ಕಟ್ಟಿದ್ದಾರೆ.

ಸೋಮು ಮನಗೂಳಿ ಹಾಡಿದ ‘ಜನಮೆಚ್ಚಿದ ನಾಯಕ ಸಿದ್ದರಾಮಯ್ಯ’ ಪದದಲ್ಲಿ ಅಭಿಮಾನವಿದ್ದರೆ, ಶಿವರಾಯ ಮಾಸ್ತರ ಶಿವಣಗಿ ಕಟ್ಟಿದ ‘ಹೆಂಡತಿ ಟೂರಿಗೆ ಗಂಡ ಬಾರಿಗೆ’ ಎನ್ನುವ ಪದದಲ್ಲಿ ಪುರುಷಪ್ರಧಾನ ದೃಷ್ಟಿಕೋನವೂ ಇದೆ. ಬೋರಮ್ಮ ಕರ್ಜಗಿ ಎಂಬ ಯುವ ಹಾಡುಗಾರ್ತಿ ‘ಅನ್ನಭಾಗ್ಯವ ಕೊಟ್ಟಿದಿ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂಬ ಪದದಲ್ಲಿ ಕೃತಜ್ಞತೆ ಇದ್ದರೆ, ಆಧುನಿಕ ಯುವಜನರನ್ನು ಆಕರ್ಷಿಸುವ ಡಿಜೆ ಸಾಂಗ್‌ಗಳಲ್ಲಿ ಸಿದ್ದರಾಮಯ್ಯನವರ ಕುರಿತ ಟ್ರೆಂಡಿಂಗ್ ಹಾಡುಗಳಿವೆ. ‘‘ಸಿದ್ದರಾಮಯ್ಯ ನಮ್ಮ ಹೋರಿ/ಬಡವರಿಗೀ ಹಿಡದಾನೋ ಕೈಯಾ ರೀ’’ ಎಂದಿದ್ದಾರೆ. ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳಿಂದಾಗಿ ಹೆಣ್ಣುಮಕ್ಕಳು ಅವರ ಸೋಬಾನೆ ಪದಗಳಲ್ಲಿ ಸಿದ್ದರಾಮಯ್ಯನವರ ಬಗ್ಗೆ ಪದ ಕಟ್ಟಿದ್ದಾರೆ. ‘‘ಸಿದ್ರಾಮಣ್ಣ ನಾ ನಿನ್ನ ನಂಬಿದೆ/ಜಗವೆಲ್ಲಾ ನಿನ್ನ ನೋಡಿ ನಂಬಿದೆ’’ ಎಂದಿದ್ದಾರೆ. ಜನಪದ ಗಾಯಕ ಶಬ್ಬೀರ್ ಡಾಂಗೆ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದಾಗ ಹಾಡಿದ ‘ಸಿದ್ದರಾಮೋತ್ಸವಾ/ ಬಡವರ ಭಾಗ್ಯೋತ್ಸವಾ/ ದೀನರ ನಿತ್ಯೋತ್ಸವ/ ಎಪ್ಪತ್ತೈದನೆಯ ಹುಟ್ಟುಹಬ್ಬದಾ ಸಂಭ್ರಮ/ ನೋಡೋಣು ನಡಿ ವೈಭವಾ’’ ಎಂಬ ಪದ ಹೆಚ್ಚು ಜನಪ್ರಿಯವಾಗಿದೆ.

ಶ್ರೀಶೈಲ್ ಕಾಗಲ್ ಎನ್ನುವ ಹಾಡುಗಾರ ‘‘ಇದ್ದರ ಇರಬೇಕ ಹೀಂಗ/ ನಮ್ಮ ಸಿದ್ರಾಮಯ್ಯ ಸಾಹೇಬರಂಗ/ ರಾಜಕೀಯ ಮಾಡತಾರ ಹ್ಯಾಂಗ/ ಇನ್ನೊಬ್ಬರ ನೋಡಿ ಕಲಿವಾಂಗಾ/ಯಾವಾಗ ಏನ ಅಕ್ಕಾತಿ ಈ ರಾಜಕೀಯ ರಂಗಾ/ಯಾವಾಗಿನಿಂದಲೂ ಸಿದ್ರಾಮಯ್ಯರಿದ್ದಾರ ಹುಲಿಯಂಗಾ/ಕರುನಾಡ ಕುಲದವನ/ ಏಕಲವ್ಯಾನ ಛಲದವನಾ/ಇಟ್ಟ ಗುರಿಯು ತಪ್ಪಿಲ್ಲ ಇಟ್ಟಂಗ ರಾಮಬಾಣಾ/ಸಿಎಂ ಸಿದ್ರಾಮಣ್ಣ ಅಂದರ ಎಲ್ಲಿಲ್ಲದ ಅಭಿಮಾನಾ’’ ಎಂದು ಅಭಿಮಾನ ಪ್ರೀತಿಯನ್ನು ತೋರಿದ್ದಾರೆ. ಆಶ್ರಫ ಸವಣೂರು ಅವರು ಹಾಡಿದ ಗದ್ಯ-ಪದ್ಯಗಳನ್ನು ಸೇರಿಸಿ ಮಾತಿನಲ್ಲಿ ಸಿದ್ದರಾಮಯ್ಯನನ್ನು ಹೊಗಳಿದ್ದಾರೆ. ‘‘ಸಿದ್ದರಾಮಯ್ಯ ಬಂದಾನ/ ಲೂಟಿ ಮಾಡೋದಾ ತಡದಾನ’ ಎಂದಿದ್ದಾರೆ.

ಸಿದ್ದರಾಮಯ್ಯ ಅವರ ನಡೆ, ನುಡಿ, ಉಡುಗೆ, ತೊಡುಗೆ ಕೂಡ ಜನಪದರನ್ನು ಆಕರ್ಷಿಸಿವೆ. ಅವರು ಧರಿಸುವ ಬಿಳಿ ಪಂಚೆ, ಶರ್ಟು, ಹೆಗಲ ಮೇಲೊಂದು ಟವಲ್ಲು, ಮಾತಿನಲ್ಲಿ ಹಳ್ಳಿಗಾಡಿನ ಸೊಗಡು, ವರ್ಷಕ್ಕೊಮ್ಮೆ ಊರ ಹಬ್ಬದಲ್ಲಿ ತನ್ನೂರ ಜನರ ಜತೆ ವೀರಕುಣಿತಕ್ಕೆ ಹಾಕುವ ಹೆಜ್ಜೆ ಈ ಬಗೆಯ ಹಳ್ಳಿತನದ ಗುರುತುಗಳು ಜನಪದರಿಗೆ ಸಹಜವಾಗಿ ‘ಇವ ನಮ್ಮವ’ ಎಂಬ ಅಭಿಮಾನ ಮೂಡಿಸಿದೆ. ನಾವು ಜನಪದರ ಹಾಡಿನಿಂದ ಅಭಿಮಾನವನ್ನಲ್ಲದೆ, ವಿಮರ್ಶೆಯನ್ನಾಗಲಿ ಟೀಕೆಯನ್ನಾಗಲಿ ಕಾಣಲಾಗದು. ಬಡ ಜನಪದ ಕವಿಗಳಿಗೆ ಹಣ ಕೊಟ್ಟು ಆಮಿಷ ತೋರಿಸಿ ತಮ್ಮ ಬಗ್ಗೆ ಪದಗಳನ್ನು ಕಟ್ಟಿಸಿಕೊಂಡದ್ದೂ ಇದೆ. ಮುಂದೆಯೂ ಕೆಲವರು ಹೀಗೆ ಮಾಡಬಹುದು. ಆದರೆ ಸಿದ್ದರಾಯ್ಯನವರ ಬಗ್ಗೆ ಹುಟ್ಟಿದ ಪದಗಳು ಯಾರದೋ ಪ್ರಾಯೋಜಿತ ಜಾಹೀರಾತುಗಳಲ್ಲ, ಬದಲಾಗಿ ಜನರ ಎದೆಯೊಳಗಿನ ಪ್ರೀತಿ, ಅಭಿಮಾನ, ಕೃತಜ್ಞತೆಯ ರೂಪದಲ್ಲಿ ಪದಗಳಾಗಿ ಹೊಮ್ಮಿವೆಯಷ್ಟೆ. ಹೀಗೆ ಜನಮಾನಸವನ್ನು ಹೊಕ್ಕು ಹಾಡುಗಳಾಗಿ ಹೊರ ಹೊಮ್ಮುವ ರಾಜಕೀಯ ಕ್ಷೇತ್ರದ ಬೇರೆ ವ್ಯಕ್ತಿತ್ವ ಸದ್ಯಕ್ಕಂತೂ ಕಾಣುತ್ತಿಲ್ಲ.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X