ಯಶಸ್ಸಿನ ಹೊಸ್ತಿಲಲ್ಲಿ ʼಜವಾನ್ʼ: ಸುಮಾರು 1.24 ಲಕ್ಷ ಟಿಕೆಟ್ಗಳು ಮುಂಗಡ ಬುಕಿಂಗ್!

ಜವಾನ್ ಚಿತ್ರ | Photo: twitter
ಮುಂಬೈ: ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಜವಾನ್ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ವರದಿಗಳ ಪ್ರಕಾರ ಜವಾನ್ ಚಿತ್ರದ ಸುಮಾರು 1.25 ಲಕ್ಷ ಟಿಕೆಟ್ಗಳು ಈಗಾಗಲೇ ಕಾಯ್ದಿರಿಸಲಾಗಿದೆ.
ಸರಣಿ ಹಿಟ್ ಚಿತ್ರಗಳನ್ನೇ ನೀಡಿರುವ ತಮಿಳು ಮೂಲದ ನಿರ್ದೇಶಕ ಅಟ್ಲೀ ನಿರ್ದೇಶಿಸುತ್ತಿರುವ ಜವಾನ್ ಚಿತ್ರದ 1,24,000 ಟಿಕೆಟ್ ಮುಂಗಡ ಬುಕಿಂಗ್ ಆಗಿದೆ ಎಂದು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ತಿಳಿಸಿದ್ದಾರೆ.
PVR ಮತ್ತು INOX 103,000 ಟಿಕೆಟ್ಗಳನ್ನು ಮಾರಾಟ ಮಾಡಿದ್ದರೆ, ಸಿನೆಪೊಲಿಸ್ 21,000 ಟಿಕೆಟ್ಗಳನ್ನು ಮಾರಾಟ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸರಿಯಾದ ಹಿಟ್ ಚಿತ್ರಗಳಿಲ್ಲದೆ ಸೊರಗಿದ್ದ ಶಾರುಖ್ ಖಾನ್ ಸಿನಿ ಪಯಣವು ಪಠಾಣ್ ಚಿತ್ರದ ಮೂಲಕ ಚೇತರಿಕೆ ಕಂಡಿತ್ತು. ಜವಾನ್ ಚಿತ್ರವು ಅವರ ಗೆಲುವಿನ ನಾಗಾಲೋಟಕ್ಕೆ ಇನ್ನಷ್ಟು ವೇಗ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಜವಾನ್ ಚಿತ್ರದಲ್ಲಿ ಶಾರುಖ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರುವ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.
ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ, ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಗೌರಿ ಖಾನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೆಪ್ಟೆಂಬರ್ 7 ನೇ ತಾರೀಕಿನಂದು ಜಗತ್ತಿನಾದ್ಯಂತ ಚಿತ್ರ ತೆರೆಕಾಣಲಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.







