ಕಲಬುರಗಿ: ಕೊಟ್ಟಿಗೆಯ ಕಾಮಗಾರಿಗಳ ಬಿಲ್ ಪಾವತಿಗೆ ಆಗ್ರಹಿಸಿ ದನಗಳೊಂದಿಗೆ ರೈತರ ಧರಣಿ

ಕಲಬುರಗಿ: 2024–25ನೇ ಆರ್ಥಿಕ ವರ್ಷದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ(MGNREGA) ನಿರ್ಮಿಸಿದ ದನಗಳ ಕೊಟ್ಟಿಗೆಯ ಕಾಮಗಾರಿಗಳ ಬಿಲ್ ಪಾವತಿಸುವಂತೆ ಆಗ್ರಹಿಸಿ, ಆಳಂದ ತಾಲ್ಲೂಕಿನ ಕಿಣ್ಣಿ ಸುಲ್ತಾನ್ ಗ್ರಾಮದ ರೈತರು ಅಲ್ಲಿನ ಗ್ರಾಮ ಪಂಚಾಯಿತಿಯ ಎದುರುಗಡೆ ದನಗಳೊಂದಿಗೆ ಧರಣಿ ನಡೆಸಿದರು.
ದನದ ಕೊಟ್ಟಿಗೆಗಳನ್ನು ಕಾಮಗಾರಿ ಪೂರ್ತಿಯಾಗಿ ಎರಡು ವರ್ಷವಾದರೂ ಬಿಲ್ ಪಾವತಿಯಾಗಿಲ್ಲ. ಕೂಡಲೇ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಧರಣಿ ನಿರತ ರೈತರು, "ನಾವು ಶ್ರಮಪಟ್ಟು ಕೊಟ್ಟಿಗೆಯ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ತಾಲ್ಲೂಕು ಪಂಚಾಯತ್ ಎಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ಕೂಡ ನಡೆಸಿದ್ದಾರೆ. ಆದರೂ ಬಿಲ್ ಪಾವತಿ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ ನಿರೀಕ್ಷೆಗಳೆಲ್ಲಾ ನಾಶವಾದ ಹಿನ್ನೆಲೆಯಲ್ಲಿ ನಾವು ದನಗಳನ್ನು ತೆಗೆದುಕೊಂಡು ಪಂಚಾಯಿತಿ ಎದುರುಗಡೆ ಹೋರಾಟಕ್ಕೆ ಇಳಿದಿದ್ದೇವೆ," ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಯಶ್ವಂತ್ ಮಾರುತಿ ಶೃಂಗೇರಿ, ರವೀಂದ್ರ ಎಸ್, ಮಹಾಂತಪ್ಪ ಮುಲಗೆ, ದಯಾನಂದ ಮುಲಿಮಾನಿ, ಮಲ್ಲಿಕಾರ್ಜುನ ಶೃಂಗೇರಿ, ನೇತಾಜಿ ಚೌಹಾನ್, ತುಕಾರಾಂ ಭಗತೆ, ಸಿದ್ದಪ್ಪ ಧೂಳೆ, ಮಲ್ಲಿಕಾರ್ಜುನ್ ಕೋರೆ, ದತ್ತಾ ಘಾಟಗೆ, ಶಿವಪುತ್ರ ಇಕ್ಕಳಕಿ, ಮಹೇಶ್ ಹುಲಸುರೆ, ಲಕ್ಷ್ಮೀಬಾಯಿ ಧೂಳೆ, ವಿಶ್ವನಾಥ್ ಧೂಳೆ, ವಿಶಾಲ್ ಚೌಹಾನ್, ಲಕ್ಷ್ಮಣ್ ಘಾಟಿಗೆ, ಲಕ್ಷ್ಮಣ್ ಪಾಂಡ್ರೆ, ಪ್ರಕಾಶ್ ಜಾನೆ, ಬಸವರಾಜ್ ಮುನ್ನೋಳೆ, ಸಿದ್ದಪ್ಪ ಶಾಪೂರೆ, ಶ್ರೀಮಂತ ದಮ್ಮೂರೆ, ಬಂಡಪ್ಪ ಹೌಶೆಟ್ಟಿ, ದಿಲೀಪ್ ಚೌಹಾಣ್, ಗುಂಡಪ್ಪ ತೋದ್ಕಡೆ, ರಾಚಮ್ಮ ಜಾನೆ, ಮಾದು ಹಿರಿ ನಾಯಕ್, ಬಸವರಾಜ್ ಆರ್. ಸೇರಿದಂತೆ ಹಲವರು ಇದ್ದರು.







