ಆಳಂದ: ಕೆರೂರು ಗ್ರಾಮಸ್ಥರಿಂದ ರಸ್ತೆ ಅತಿಕ್ರಮಣ ತೆರವಿಗೆ ಆಗ್ರಹಿಸಿ ಧರಣಿ

ಆಳಂದ: ತಾಲೂಕಿನ ಕೆರೂರು ಗ್ರಾಮದ ಜ್ವಲಂತ ಮೂರು ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಪಂಚಾಯತ್ ಕಚೇರಿ ಎದುರು ಧರಣಿ ನಡೆಸಿದರು.
ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ, ಸಾಹಿತಿ ಎಸ್.ಪಿ ಸುಳ್ಳದ್ ನೇತೃತ್ವದಲ್ಲಿ ಗ್ರಾಮಸ್ಥರು ಬೇಡಿಕೆಗಳ ಈಡೇರಿಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಯನ್ನು ಒತ್ತಾಯಿಸಿದರು.
ದರ್ಗಾ ಶಿರೂರು ಮತ್ತು ಕೆರೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ ರಸ್ತೆ ಇಲ್ಲದಕ್ಕೆ ಹಲವು ವರ್ಷಗಳಿಂದ ಜನ ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಗ್ರಾಮ ಸಂಪರ್ಕಕ್ಕೆ ಡಾಂಬರೀಕರಣ ಮಾಡಬೇಕು.
ಗ್ರಾಮದಲ್ಲಿನ ಸಾರ್ವಜನಿಕ ರಸ್ತೆಯನ್ನು ಗ್ರಾಮದ ದಾನಪ್ಪ ಮುಲಗೆ ಮತ್ತು ರೇವಣಸಿದ್ದ ಸಕ್ಕರಗಿ ಎಂಬವರು ಅತಿಕ್ರಮಣ ಮಾಡಿರುವುದರಿಂದ ಜನರ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಗ್ರಾಪಂ ಅಧಿಕಾರಿಗಳಿಗೆ ಹೇಳಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಎರಡೂ ದಿನದಲ್ಲಿ ಅತಿಕ್ರಮಣ ತೆರವು ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಬಗ್ಗೆ ತಾಪಂ ಇಒ ಮಾನಪ್ಪ ಕಟ್ಟಿಮನಿಯವರಿಗೆ ಮನವಿ ಸಲ್ಲಿಸಿದರು.
ಧರಣಿಯಲ್ಲಿ ನ್ಯಾಯವಾದಿ ಬಸಣ್ಣ ಸಿಂಗೆ, ಸಿದ್ದಾರೂಢ ಜಿ. ಕೋನಕಾಟೆ, ಸುನಿಲ ಕೋನಕಾಟೆ, ಬಾಬುರಾವ್ ಎಸ್. ಸುಳ್ಳದ್, ಸುರೇಶ್ ಬಿ. ಕೋನಕಾಟೆ, ಭೀಮಶಂಕರ ಎ. ಚೆನ್ನಗುಂಡ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಬಿ. ಚನಗುಂಡ, ಶಿವಲಿಂಗ ಚನಗುಂಡ, ಶರಣಪ್ಪ ಜಿ. ಸುಳ್ಳದ್, ಸುಭಾಷ್ ಚನ್ನಗುಂಡ, ಮಲ್ಲಿಕಾರ್ಜುನ ಶಿಂಗೆ, ಸಿದ್ದಾರ್ಥ ಸುಳ್ಳದ್, ನಾಗರಾಜ ಸಿಂಗೆ, ಶ್ರವಣ ಚನಗುಂಡ, ಸಂಜಯ್ಕುಮಾರ್ ಬಿ. ಸುಳ್ಳದ್, ಸಂಜುಕುಮಾರ್ ಎಸ್. ಸುಳ್ಳದ ಸಹಿತ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಪಟ್ಟಣದ ಶಾಸಕರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.







