ಕಲಬುರಗಿ : ಮನೆಯ ಛಾವಣಿಯಲ್ಲಿ ಆಕಸ್ಮಿಕ ಬೆಂಕಿ

ಕಲಬುರಗಿ, ಅ.27: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ರಸ್ತೆಯಲ್ಲಿರುವ ಎ.ಕೆ. ಇಂಫ್ರಾ ಸಂಸ್ಥೆಗೆ ಸೇರಿದ ಮನೆಯ ಹಿಂಭಾಗದ ಛಾವಣಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ಇತರ ಭಾಗಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಛಾವಣಿಯ ಮೇಲಿದ್ದ ಜಾಲರಿ ಹಾಗೂ ಪ್ಲಾಸ್ಟಿಕ್ ಕಸಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ದಟ್ಟ ಹೊಗೆ ಆವರಿಸಿತ್ತು. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಎಸ್.ಆರ್. ಮನೋರಮಾ ಎಂಬಸಿ ಮತ್ತು ರಿಗಲ್ ಲಾಡ್ಜ್ ನಲ್ಲಿದ್ದವರಲ್ಲಿ ಆತಂಕ ಉಂಟಾಯಿತು.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
Next Story




