ರಾಷ್ಟ್ರೀಯ ಲೋಕ ಅದಾಲತ್ | ಕಲಬುರಗಿಯಲ್ಲಿ 105 ಪ್ರಕರಣ ಇತ್ಯರ್ಥ: 2.50 ಕೋಟಿ ರೂ. ಪರಿಹಾರ ವಿತರಣೆ

ಕಲಬುರಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಕರ್ನಾಟಕ ರಾಜ್ಯ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಸುಮಾರು 105 ಪ್ರಕರಣಗಳನ್ನು ಇತ್ಯರ್ಥ ಮಾಡಿ ಸಂತ್ರಸ್ತರಿಗೆ ಒಟ್ಟು 2,50,42,000 ರೂ. ಪರಿಹಾರ ವಿತರಿಸುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಹೈಕೋರ್ಟ್ ಆದೇಶಿಸಿದೆ.
ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯಿಂದ ಅಯೋಜಿಸಿದ ಜನತಾ ಅದಾಲತ್ ನಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಪಿ. ಶ್ರೀ ಸುಧಾ ಅವರು ವಿವಿಧ ಮೋಟರ್ ವಾಹನ, ಸಿವಿಲ್ ಹಾಗೂ ಕೌಟುಂಬಿಕ ಕಲಹ ಪ್ರಕರಣಗಳನ್ನು ಕೈಗೆತ್ತಿಕೊಂಡು ವಾದಿ-ಪ್ರತಿವಾದಿ ಹಾಗೂ ನ್ಯಾಯವಾದಿಗಳ ಸಮಕ್ಷಮ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.
Next Story





