ಚಿತ್ತಾಪುರ | ನಿರಂತರ ಮಳೆಗೆ ಕೊಟ್ಟಿಗೆ ಕುಸಿದು 18 ಮೇಕೆಗಳು ಸಾವು

ಕಲಬುರಗಿ : ಕಳೆದ ಕೆಲವು ದಿನಗಳಿಂದ ನಿರಂತವಾಗಿ ಸುರಿಯುತ್ತಿರುವ ಮಳೆಗೆ ಚಿತ್ತಾಪುರ ತಾಲ್ಲೂಕಿನ ಭಂಕಲಗಾ ಗ್ರಾಮದಲ್ಲಿ ಕೊಟ್ಟಿಗೆಯ ಗೊಡೆ ಕುಸಿದು 18 ಮೇಕೆಗಳು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಭಂಕಲಗಾ ಗ್ರಾಮದ ಮಾಳಪ್ಪ ಧೂಳಪ್ಪ ಪೂಜಾರಿ ಅವರಿಗೆ ಸೇರಿದ ಮೇಕೆಳಾಗಿವೆ. ಶುಕ್ರವಾರ ಬೆಳಗ್ಗೆ ಮೇಕೆಗಳನ್ನು ಮೇಯಿಸಿ ಸಂಜೆ ವೇಳೆ ಕೊಟ್ಟಿಗೆಯೊಳಗೆ ಹಾಕಿದ್ದಾರೆ. ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಕೊಟ್ಟಿಗೆಯ ಗೋಡೆಯು ಶಿಥಿಲಗೊಂಡು ರಾತ್ರಿ 7.30 ಗಂಟೆ ಸುಮಾರಿಗೆ ಕೊಟ್ಟಿಗೆಯ ಗೋಡೆ ಮೇಕೆಗಳ ಮೇಲೆ ಕುಸಿದು ಬಿದ್ದ ಕಾರಣ ಮೇಕೆಗಳು ಸಾವನ್ನಪ್ಪಿದೆ.
ಸ್ಥಳಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಶಂಕರ ಕಣ್ಣಿ, ಪಿಎಸ್'ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಯಕ್ಬಾಲ್ ಪಾಶಾ, ಸಿದ್ದು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





