ಕಲಬುರಗಿ | ಜ.19ರಂದು ಆಳಂದದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ, ಸನ್ಮಾನ

ಪಂಡಿತ ಎಂ. ಶೇರಿಕಾರ
ಕಲಬುರಗಿ: ತಾಲೂಕು ಮಾಳಿ ಮಾಲಗಾರ ಶ್ರೇಯೋಭಿವೃದ್ಧಿ ಸಂಘದ ಆಶ್ರಯದಲ್ಲಿ ಅಕ್ಷರದ ಅವ್ವ, ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಜ.19ರಂದು ಬೆಳಗ್ಗೆ 10 ಗಂಟೆಗೆ ಆಳಂದ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಳಂದ ತಾಲೂಕು ಮಾಳಿ ಮಾಲಗಾರ ಸಮಾಜ ಅಧ್ಯಕ್ಷ ಪಂಡಿತ ಎಂ. ಶೇರಿಕಾರ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಾರ್ಯಕ್ರಮವನ್ನು ಮುಖ್ಯಮಂತ್ರಿಯ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಉದ್ಘಾಟಿಸಲಿದ್ದಾರೆ. ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಸಿದ್ದರಾಮ ಮೇತ್ರೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪದೋನ್ನತಿ ಶಿವಶರಣಪ್ಪ ಮುಳೇಗಾಂವ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಶರಣ ಗೋಳೆ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತ ಶ್ರೀಮಂತ ಚಿಂಚೋಳಿ, ಬಾಗಲಕೋಟೆ ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಆಳಂದ ಬಸ್ ಡಿಪೋ ಮ್ಯಾನೇಜರ್ ಯೋಗಿನಾಥ ಸರಸಂಬಿ, ಬೆಂಗಳೂರು ನಗರದಲ್ಲಿನ ಪಿಎಸ್ಐ ಬಸವರಾಜ ದುಂಡಪ್ಪ ಜಂದೆ ಯವರಿಗೆ, ಮಾದನಹಿಪ್ಪರಗಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸುವರ್ಣ ಈರಣ್ಣ ಮೈಂದರ್ಗಿ, ಯಳಸಂಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕವಿತಾ ಧನಂಜಯ ಯಲ್ದೆ ಹಾಗೂ ಕಿಣ್ಣಿಸುಲ್ತಾನ್ ವಿ.ಎಸ್.ಎಸ್ಎನ್ ಅಧ್ಯಕ್ಷ ಬಸವಂತರಾವ್ ಎಸ್. ಧೂಳೆ ಸೇರಿದಂತೆ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಚುನಾಯಿತ ಗ್ರಾಮ ಪಂಚಾಯತ್ ವಿಎಸ್ಎಸ್ಎನ್ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಣೇಶ ಪಾಟೀಲ್, ಶ್ರೀಶೈಲ ಮಾಡ್ಯಾಳೆ, ಸುಭಾಷ್ ಬಳೂರ್ಗಿ, ಮಹೇಶ್ ಹೀರೊಳಿ, ಈರಣ್ಣ ಪಾಟೀಲ, ಸಿದ್ದರಾಮ ತೋಳನೂರೆ, ಸಿದ್ದರಾಜ ಆಲೂರೆ, ಗುರುನಾಥ ಜಂದೆ, ಚಂದ್ರಕಾoತ ಭೀಕಮಾಳಿ, ವಿಶ್ವನಾಥ ಧೂಳೆ, ಸಾಯಿನಾಥ ಗೌಡಗಾಂವ ಉಪಸ್ಥಿತರಿದ್ದರು.







