ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ವರ್ಗಾವಣೆ; ನೂತನ ಸಿಇಒ ಆಗಿ ರಾಹುಲ್ ಸಂಕನೂರ ನೇಮಕ

ಭಂವರ್ ಸಿಂಗ್ ಮೀನಾ/ ರಾಹುಲ್ ಸಂಕನೂರ
ಕಲಬುರಗಿ : ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ವರ್ಗಾವಣೆಗೊಂಡಿದ್ದು, ನೂತನ ಸಿಇಒ ಆಗಿ ರಾಹುಲ್ ಸಂಕನೂರ ನೇಮಕಗೊಂಡಿದ್ದಾರೆ.
ಈ ಕುರಿತು ಸರಕಾರದಿಂದ ಆದೇಶ ಹೊರಡಿಸಿದ್ದು, ಕಳೆದ ಎರಡೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ 2017ರ ಐಎಎಸ್ ಬ್ಯಾಚಿನ ಭಂವರ್ ಸಿಂಗ್ ಮೀನಾ ಅವರನ್ನು ಜಿಲ್ಲಾ ಪಂಚಾಯತ್ ಸಿಇಒ ಸ್ಥಾನದಿಂದ ವರ್ಗಾಯಿಸಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ಅದರಂತೆಯೇ 2019ರ ಐಎಎಸ್ ಬ್ಯಾಚಿನ ರಾಹುಲ್ ಸಂಕನೂರ ಅವರು ಐಟಿ ಬಿಟಿ ಇಲಾಖೆಯ ನಿರ್ದೇಶಕರಾಗಿದ್ದರು. ಅವರನ್ನು ಕೂಡಲೇ ವರ್ಗಾಯಿಸಿ, ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲಾಗಿದೆ.
Next Story




