ಕಲಬುರಗಿ-ಕೊಲ್ಹಾಪುರ ಎಕ್ಸ್ ಪ್ರೆಸ್ ರೈಲಿಗೆ 3 ಹೆಚ್ಚುವರಿ, ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳ ಜೋಡಣೆ

ಸಾಂದರ್ಭಿಕ ಚಿತ್ರ
ಕಲಬುರಗಿ : ಕೇಂದ್ರ ರೈಲ್ವೆ ಸೋಲಾಪುರ ವಿಭಾಗದಿಂದ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲು ಸಂಖ್ಯೆ 22155/22156 ಕಲಬುರಗಿ-ಶ್ರೀ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ ಎಕ್ಸ್ ಪ್ರೆಸ್ ರೈಲಿಗೆ 3 ಹೆಚ್ಚುವರಿ ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳನ್ನು ದಿನಾಂಕ: 10-06-2025 ರಿಂದ ಜಾರಿಗೆ ಬರುವಂತೆ ಜೋಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ರೈಲಿನಲ್ಲಿ 2 ಎಸಿ-III ಟೈರ್, 3 ಸ್ಲೀಪರ್ ಕ್ಲಾಸ್, 10 ಸೆಕೆಂಡ್ ಸಿಟ್ಟಿಂಗ್, 3 ಜನರಲ್ ದ್ವಿತೀಯ ದರ್ಜೆ ಮತ್ತು 2 ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್ಗಳು (20 ಬೋಗಿಗಳು) ಇರುತ್ತದೆ. ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
Next Story





