ಕಲಬುರಗಿ| ಅಗ್ನಿ ಅವಘಡದಿಂದಾಗಿ ನಾಲ್ಕು ಅಂಗಡಿಗಳು ಸುಟ್ಟು ಕರಕಲು

ಕಲಬುರಗಿ: ಅಗ್ನಿ ಅವಘಡದಿಂದಾಗಿ ನಾಲ್ಕು ಅಂಗಡಿಗಳು ಹೊತ್ತಿ ಉರಿದ ಘಟನೆ ಇಲ್ಲಿನ ರಾಮ ಮಂದಿರ ಸರ್ಕಲ್ ಸಮೀಪ ನಡೆದಿದೆ.
ಎಲೆಕ್ಟ್ರಿಕಲ್ ಶಾಪ್, ಗಾಣದ ಎಣ್ಣೆ ತಯಾರಿಕ ಘಟಕ, ಹಾರ್ಡವೇರ್ ಶಾಪ್ ಮತ್ತು ಒಂದು ಟೀ ಸ್ಟಾಲ್ ಗೆ ಬೆಂಕಿ ತಗಲಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕಾರಕಲಾಗಿವೆ ಎಂದು ತಿಳಿದುಬಂದಿದೆ.
ಎಲೆಕ್ಟ್ರಿಕಲ್ ಶಾಪ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇತರೆ ಅಂಗಡಿಗಳಿಗೆ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story







