ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ

ಕಲಬುರಗಿ: ಭಾರತರತ್ನ ಡಾಬಿಆರ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನವನ್ನು ಕಲಬುರಗಿ ಜಿಮ್ಸ್ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶ್ರದ್ಧಾಭಕ್ತಿಯಿಂದ ಗೌರವ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ನಾಗರಾಜ ಪಾಟೀಲ್, ಡಾ.ಓಂ ಪ್ರಕಾಶ್ ಅಂಬುರೆ, ಡಾ.ವಿನೋದ್ ಕುಮಾರ್, ಡಾ.ರಘುನಾಥ್ ಕುಲಕರ್ಣಿ, ಡಾ. ಶಾಲಾನಿ ಸಜ್ಜನಶೆಟ್ಟಿ, ಡಾ. ಪ್ರತಿಭಾ ಹಾಗೂ ಸಹಾಯಕ ಆಡಳಿತ ಅಧಿಕಾರಿಗಳಾದ ವೀರಣ್ಣ ಶಿವಪುರ, ಮಲ್ಲಿಕಾರ್ಜುನ ಸಂಗೋಳಾಗಿ, ಹಿರಿಯ ರೆಡಿಯಾಲೋಜಿ ಇಮ್ಯಾಜಿಂಗ್ ಅಧಿಕಾರಿ ಮಲ್ಲರೆಡ್ಡೆಪ್ಪ ಬಡಿಗೇರ, ಫಿಜಿಯೋಥೆರಪಿಸ್ಟ್ ಜೈಶೀಲನಾಥ್, ಬಾಳಪ್ಪ, ಫಕೀರಪ್ಪ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story





