ಅಫಜಲಪುರ | ಶಿಕ್ಷಕರ ದಿನಾಚರಣೆ : ಸನ್ಮಾನ ಕಾರ್ಯಕ್ರಮ

ಕಲಬುರಗಿ: ಒಂದು ದೇಶದ ಶ್ರೇಷ್ಠ ಸಂಪತ್ತು ಎಂದರೆ ಮಾನವ ಸಂಪತ್ತು. ಆರ್ಥಿಕ ಸಾಮಾಜಿಕ ನೈತಿಕ ಮೌಲ್ಯಗಳನ್ನು ಹೊಂದಿರುವ ಮಾನವ ಸಂಪತ್ತನ್ನು ಸಿದ್ಧಪಡಿಸುವ ಮಹತ್ಕಾರ್ಯದಲ್ಲಿ ಶಿಕ್ಷಕರು ತೊಡಗಿರುತ್ತಾರೆ, ಅಂತಹ ಶಿಕ್ಷಕರಿಗೆ ಗೌರವ ಸಲ್ಲಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಕಲಬುರಗಿಯ ಕಡಗಂಚಿ ಸಮೀಪದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಗಣಪತಿ ಸಿನ್ನೂರ್ ಹೇಳಿದರು.
ಅಫಜಲಪುರ ಪಟ್ಟಣದ ವಿಜಯಪುರ ರಸ್ತೆಯ ನ್ಯಾಷನಲ್ ಫಂಕ್ಷನ್ ಹಾಲನಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯ ವಹಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕರೊಂದಿಗೆ ಸ್ನೇಹ ಮತ್ತು ಬಾಂಧವ್ಯದ ಸಂಬಂಧಗಳನ್ನು ಇಂದಿನ ಪೋಷಕರು ಇಟ್ಟುಕೊಂಡು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ಮಾತನಾಡಿದ ತೇರಿನ ಮಠ ಬಡದಾಳದ ಚನ್ನಮಲ್ಲ ಶಿವಾಚಾರ್ಯರು, ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಇಂದು ಶಿಕ್ಷಕರನ್ನು ಗೌರವಿಸುವ ಭಾವನೆ ಕಡಿಮೆಯಾಗುತ್ತಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ತಹಶೀಲ್ದಾರ್ ಸಂಜು ಕುಮಾರ್ ದಾಸರ್, ಅಫಜಲಪುರ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಯುವರಾಜ್ ಗಾಡಿ ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಸಂಜೀವ್ ಕುಮಾರ್ ಬಗಲಿ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಸಿದ್ದು ಚಿಂಚೋಳಿ ಮತ್ತು ತಾಲೂಕು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಎಂ.ಕರಿಕಲ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಫಜಲಪುರ ಪಟ್ಟಣದ ಪುರಸಭೆಯ ಅಧ್ಯಕ್ಷರಾದ ಸುಹಾಸಿನಿ ವೀರೇಶ ಖೇಳಗಿ ಅವರು ಉದ್ಘಾಟಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ವಿ.ವೈ.ಗುಡುಮಿ, ಸಹಾಯಕ ಖಜಾನೆ ಅಧಿಕಾರಿ ಬಸವರಾಜ ಕಲ್ಲುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ಮಲ್ಲೇಶಪ್ಪ ಬಿಂಜಗೆರಿ, ಗ್ರೇಡ್ ಒನ್ ದೈಹಿಕ ಶಿಕ್ಷಕರ ಸಂಘದ ನಾಗೇಶ್ ಗಂಗನಳ್ಳಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಾಂಧಿ ದಫೇದಾರ್, ಹೈದರ್ ಸಾಬ್ ಚೌದರಿ, ರಾಜಶೇಖರ್ ತಲಾರಿ, ಸೈದಪ್ಪ ಕರಿ ಕಲ್ಲ, ಸಂತೋಷ್ ಚೌಹಾನ್, ಶಿವಾನಂದ ಪೂಜಾರಿ, ಜಾವೇದ್ ಜುಮುನಾಳ್, ಶ್ರೀಮಂತ ನಂದಗಾ0ವ್ ವಿಶ್ವನಾಥ ಗುಣಾರಿ ಪುಂಡಲೀಕ ಪೂಜಾರಿ ಮತ್ತು ಇತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡಿ.ಎಂ.ನದಾಫ್, ಸಿದ್ದರಾಮ ನಂಬರಗಿ, ಅನಿಲ್ ಘನಾತೆ, ಶಿವಶರಣಪ್ಪ ಸಾಲೋಟಗಿ, ರೆಹಮಾನ್ ನದಾಫ್ ಮತ್ತು ತಾಲೂಕು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ 56 ಜನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು.







