ಅಫಜಲಪುರ| ಎಸ್ಡಿಎಂಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ದೊಡ್ಮನಿ, ಉಪಾಧ್ಯಕ್ಷರಾಗಿ ರೇಖಾ ಗುಂದಗಿ ಆಯ್ಕೆ

ಅಫಜಲಪುರ: ತಾಲೂಕಿನ ಶಿವಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ದೊಡ್ಮನಿ ಹಾಗೂ ಉಪಾಧ್ಯಕ್ಷರಾಗಿ ರೇಖಾ ಗುಂದಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಹಾಗೂ ಸಿಆರ್ಪಿ ಸಿದ್ದು ಬಿರಾದಾರ ಅವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಮಲ್ಲಿಕಾರ್ಜುನ ದೊಡ್ಮನಿ ಮಾತನಾಡಿ, ಶಾಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು, ಶಾಲೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಹಾಗೂ ಸರ್ಕಾರದಿಂದ ದೊರೆಯುವ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಎಸ್ಡಿಎಂಸಿ ಸದಸ್ಯರೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಾಜಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಯಲ್ಲಪ್ಪ ಹಾಗೂ ರಾಜು ಜಮಾದಾರ, ಶ್ರೀಶೈಲ ಜಮಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಕಲಾವತಿ ಮುಜಗೊಂಡ, ಸುಜಾತ ಗುರುಬಸಯ್ಯ, ಶಂಕರಗೌಡ ಗುರಣ್ಣಗೌಡ, ಲಕ್ಷ್ಮಿ ರಾಜಕುಮಾರ, ಶ್ರೀಶೈಲ ಚಂದ್ರಮ್, ಭೀಮಬಾಯಿ ಮಲ್ಲಪ್ಪ, ಶಿವಪ್ಪ ಶ್ರೀಮಂತ, ಮಂಜುನಾಥ ದುಂಡಪ್ಪ, ಸಿದ್ದಮ್ಮ ರವಿ, ಶಾಂತಪ್ಪ ಶಿವಪ್ಪ, ಪಾರ್ವತಿ ಪರಮೇಶ್ವರ, ಶಾಂತಪ್ಪ ಲಕ್ಕಪ್ಪ, ಲಕ್ಷ್ಮಿ ಅಶೋಕ, ರಾಜಕುಮಾರ ಹಣಮಂತ, ಲಕ್ಕಮ್ಮ ಜಮಾದಾರ, ಗುರುಪಾದಗೌಡ ಪಾಟೀಲ್, ಶಿವಪ್ಪ ನಗದಿ, ಸಿದ್ದಣಗೌಡ ಪಾಟೀಲ್, ಕಲ್ಲಪ್ಪ ವಾಲಿಕಾರ, ಚಂದು ಬನ್ನೇಟಿ, ಶಿವಪುತ್ರ ವಾಲಿಕಾರ, ಮಹೇಶ ವಾಲಿಕಾರ, ಮಲಕಪ್ಪ ಪಿರಪ್ಪ, ಗುಂಡಯ್ಯ ರಾಚಯ್ಯ ಸೇರಿದಂತೆ ಗ್ರಾಮಸ್ಥರು ಹಾಗೂ ಪಾಲಕರು ಉಪಸ್ಥಿತರಿದ್ದರು.






